Breaking News

ಶೀಘ್ರ ಬೆಳಗಾವಿಯಲ್ಲಿ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿ ಆಯೋಜನೆ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ


ಬೆಳಗಾವಿ ಜಿಲ್ಲಾ ಪುರುಷ-ಮಹಿಳಾ ಹೊನಲು ಬೆಳಕಿನ ಕಬಡ್ಡಿ ಚಾಂಪಿಯನಶಿಫ್‌ 2022 ರ ಸಮಾರೋಪ ಸಮಾರಂಭ

-ಕಬಡ್ಡಿ ಪಂದ್ಯಾವಳಿಯಲ್ಲಿ 70 ಪುರುಷ, 12 ಮಹಿಳಾ ತಂಡಗಳು ಭಾಗಿ

 

ಬೆಳಗಾವಿ: ಒಂದೆರಡು ತಿಂಗಳಲ್ಲಿ ಬೆಳಗಾವಿಯಲ್ಲಿ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿ ಹಮ್ಮಿಕೊಳ್ಳಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್‌ ಜಾರಕಿಹೊಳಿ ಅವರು ಹೇಳಿದರು.

 

ತಾಲೂಕಿನ ಮುಚ್ಚಂಡಿ ಗ್ರಾಮದಲ್ಲಿ ಜಿಲ್ಲಾ ಅಮೆಚೂರ ಕಬಡ್ಡಿ ಅಸೋಸಿಯೆಷನ್‌ ಹಾಗೂ ಸತೀಶ್‌ ಜಾರಕಿಹೊಳಿ ಫೌಂಡೇಶನ್‌ ಪ್ರಾಯೋಜಕತ್ವದಲ್ಲಿ ಹಮ್ಮಿಕೊಂಡಿದ್ದ ಬೆಳಗಾವಿ ಜಿಲ್ಲಾ ಪುರುಷ ಹಾಗೂ ಮಹಿಳಾ ಹೊನಲು ಬೆಳಕಿನ ಕಬಡ್ಡಿ ಚಾಂಪಿಯನಶಿಫ್‌ 2022 ರ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

 

ಕಳೆದ ಇಪ್ಪತ್ತು ವರ್ಷದ ಹಿಂದೆ ಗೋಕಾಕನಲ್ಲಿ ರಾಷ್ಟ್ರ ಮಟ್ಟದ ಪುಟ್ಬಾಲ್‌, ವಾಲಿಬಾಲ್‌ ಪಂದ್ಯಾವಳಿ ಹಮ್ಮಿಕೊಳ್ಳಲಾಗಿತ್ತು. ಆವಾಗ ಬಾರೀ ಸ್ಪಂದನೆ ಸಿಕ್ಕಿತ್ತು. ಕಾರಣ ಮತ್ತೆ ಈ ಭಾರೀ ಗೋಕಾಕ ಅಥವಾ ಬೆಳಗಾವಿಯಲ್ಲಿ ರಾಷ್ಟ್ರ ಮಟ್ಟದ ಪುಟ್ಬಾಲ್‌, ವಾಲಿಬಾಲ್‌ ಪಂದ್ಯಾವಳಿ ಹಮ್ಮಿಕೊಳ್ಳಲಾಗುವುದು, ಇದಕ್ಕೆ ನಿಮ್ಮ ಸಹಕಾರ ಬೇಕು ಎಂದು ತಿಳಿಸಿದರು.

 

ರಾಹುಲ್‌ಗೆ ಬೆಳಗಾವಿ ಜಿಲ್ಲಾ ಅಮೆಚೂರ ಕಬಡ್ಡಿ ಅಸೋಸಿಯೆಷನ್‌ ಅಧ್ಯಕ್ಷ ಸ್ಥಾನ ಸಿಕ್ಕಿದ್ದು, ಸಂತಸದ ವಿಚಾರ. ಆದರೆ ನಾಯಕನಾಗಿ ಬೆಳೆಯಬೇಕಾದರೆ ಸಾಕಷ್ಟು ಸವಾಲಗಳಿದ್ದು, ಅವುಗಳನ್ನು ಮೆಟ್ಟಿ ನಿಲ್ಲುವ ಶಕ್ತಿಯನ್ನು ರಾಹುಲ್‌ ಹಾಗೂ ಪ್ರಿಯಂಕಾ ಪಡೆಯಲಿ ಎಂದು ಆಶಿಸಿದರು.

 

ಜನರೊಂದಿಗೆ ಬೆರೆತು ಅವರ ಸಮಸ್ಯೆಗಳಿಗೆ ಸ್ಪಂದಿಸಿದಾಗ ಮಾತ್ರ ಜನ ನಾಯಕನಾಗಲು ಸಾಧ್ಯವಿದೆ. ಕಾರಣ ರಾಹುಲ್‌ ಚಿಕ್ಕ ವಯಸ್ಸಿನಲ್ಲಿಯೇ ಸಾರ್ವಜನಿಕರೊಂದಿಗೆ ಬೆರೆತು ಯುವ ನಾಯಕನಾಗಿ ಹೊರಹೊಮ್ಮಲಿ ಎಂದರು.

 

ಯುವ ನಾಯಕ ರಾಹುಲ್‌ ಜಾರಕಿಹೊಳಿ ಮಾತನಾಡಿ, ಇಂದು ಗ್ರಾಮೀಣ ಕ್ರೀಡೆಗಳಿಗೆ ಆದ್ಯತೆ ನೀಡಬೇಕಾಗಿದು, ಗ್ರಾಮೀಣ ಭಾಗದ ಯುವಕರು, ಯುವತಿಯರು ರಾಜ್ಯ, ರಾಷ್ಟ್ರ ಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸಲು ನಾವು ಅವಕಾಶಗಳನ್ನು ಮಾಡುತ್ತಿದ್ದು, ಮುಂದೆಯೂ ಕೂಡ ಎಲ್ಲ ರೀತಿಯ ಸಹಾಯ, ಸಹಕಾರವನ್ನು ಬೆಳಗಾವಿ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಹಾಗೂ ಸತೀಶ್ ಜಾರಕಿಹೊಳಿ ಫೌಂಡೇಶನ್ ವತಿಯಿಂದ ಮಾಡಲಾಗುವುದು ಎಂದು ಭರವಸೆ ನೀಡಿದರು.

 

ಈಗಾಗಲೇ ಸತೀಶ್ ಜಾರಕಿಹೊಳಿ ಫೌಂಡೇಶನ್ ನಿಂದ ಗ್ರಾಮೀಣ ಪ್ರತಿಭೆಗಳನ್ನು ಬೆಳೆಸಲು ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಮುಂದೆ ಜಿಲ್ಲೆಯಲ್ಲಿ ಕಬಡ್ಡಿ ಪಂದ್ಯ ಹಮ್ಮಿಕೊಳ್ಳುವವರಿಗೆ ಫೌಂಡೇಶನ್ ವತಿಯಿಂದ ಉಚಿತ ಕಬಡ್ಡಿ ಮ್ಯಾಟ್‌ ವಿತರಿಸಲಾಗುವುದು ಎಂದರು.

ಕ್ರೀಡಾ ಪಟುಗಳಿಗೆ ಉಚಿತ ಊಟ ಮತ್ತು ವಸತಿ ವ್ಯವಸ್ಥೆ ಮಾಡಲಾಗಿದ್ದು, 3,500 ಜನ ಪಂದ್ಯಾವಳಿ ವಿಕ್ಷೀಸಲು ಸ್ಯಾಂಡ್‌ ನಿರ್ಮಿಸಲಾಗಿತ್ತು. ಪ್ರಥಮ ಬಹುಮಾನ 30,000, ಎರಡನೇ ಬಹುಮಾನ 20,000, ತೃತೀಯ ಬಹುಮಾನ 10,000 ಸಾವಿರ ರೂ. ವಿತರಿಸಲಾಯಿತು ಎಂದು ತಿಳಿಸಿದರು.

 

ಕಬಡ್ಡಿ ಪಂದ್ಯಾವಳಿಯಲ್ಲಿ ವಿಜೇತರಾದ ತಂಡಗಳ ವಿವಿರ:

 

ಮಹಿಳೆಯರ ವಿಭಾಗ: 1ನೇ ಬಹುಮಾನ ಚಿಂಚಲಿಯ ಜಯ ಮಹಾಕಾಲಿ ತಂಡ, 2ನೇ ಬಹುಮಾನ ಅಥಣಿಯ ವಿಜಯ ವಾರಿಯರ್ಸ್‌ ತಂಡ, 3ನೇ ಬಹುಮಾನವನ್ನು ಬೆಳಗಾವಿ ಬಾಲಿಕಾ ಸ್ಪೋಟ್ಸ್ ತಂಡ ಹಾಗೂ‌ ಬಿರಡಿಯ ಅಭಾಜಿ ಫೌಂಡೇಷನ್ ತಂಡ ಪಡೆದುಕೊಂಡಿತು.

 

ಇದರಲ್ಲಿ ಬೇಸ್ಟ್‌ ರೈಡರ್ ರಾಗಿ ಅಥಣಿಯ ಅಶ್ವನಿ ಕೋಟಿ, ಬೇಸ್ಟ್‌ ಕ್ಯಾಚರ್‌ ರಾಗಿ ಬಿರಡಿಯ ಅಂಜಲಿ ಮೈಶಾಲೆ, ಅಲ್‌ ರೌಂಡರ್‌ ರಾಗಿ ಚಿಂಚಲಿಯ ದೀಪಾ ಮೈಶಾಲೆ ಹಾಗೂ ಬೇಸ್ಟ್‌ ತಂಡ ಸಂನಕನಹಟ್ಟಿಯ ಎಸ್.ವಿ.ಇ. ಎಸ್‌ ತಂಡ ಪಡೆಕೊಂಡಿದೆ.

 

ಪುರುಷರ ವಿಭಾಗ: 1ನೇ ಬಹುಮಾನ ನಾಗೂನೂರಿನ ಮಹಾಲಕ್ಷ್ಮೀ ತಂಡ, 2ನೇ ಬಹುಮಾನ ಗಲತಗಾ ವಾನರ ತಂಡ, 3ನೇ ಬಹುಮಾನವನ್ನು ಚಿಂಚಲಿಯ ಜೈ ಮಹಾಕಾಲಿ ತಂಡ ಹಾಗೂ ರಾಯಬಾಗಿನ ಜ್ಯುನಿಯರ್‌ ತಂಡೆ ಪಡೆದುಕೊಂಡಿವೆ. ಇದರಲ್ಲಿ ಬೇಸ್ಟ್‌ ರೈಡರ್ ರಾಗಿ ಗಲತಗಾ ವಾನರಸೇನಾ ತಂಡದ ಸುಶಾಂತ, ಬೇಸ್ಟ್‌ ಕ್ಯಾಚರ್‌ ರಾಗಿ ರಾಯಬಾಗದ ಜ್ಯುನಿಯರ್‌ ತಂಡದ ದೇಸಾಯಿ, ಅಲ್‌ ರೌಂಡರ್‌ ರಾಗಿನಾಗನೂರಿನ ಮಹಾಲಕ್ಷ್ಮೀ ತಂಡದ ವಿಠ್ಠಲ್‌ ಹಾಗೂ ಬೇಸ್ಟ್‌ ತಂಡವನ್ನಾಗಿ ಅರಲಿಮಟ್ಟಿಯ ಬಸವೇಶ್ವರ ತಂಡ ಪಡೆದುಕೊಂಡಿದೆ.

 

ಎರಡು ದಿನಗಳ ಕಬಡ್ಡಿ ಪಂದ್ಯಾವಳಿ ಕಾರ್ಯಕ್ರಮದಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್‌, ಮಾಜಿ ಸಚಿವರಾದ ವೀರಕುಮಾರ ಪಾಟೀಲ್‌, ಮಾಜಿ ಶಾಸಕರಾದ ಶ್ಯಾಮ ಘಾಟಗೆ, ರಮೇಶ ಕುಡಚಿ, ಕಾಂಗ್ರೆಸ್‌ ಮುಖಂಡರಾದ ಮಹಾವೀರ ಮೋಹಿತೆ, ಮಹೇಶ ತಮ್ಮಣ್ಣವರ್‌, ಪಂಚನಗೌಡ ದ್ಯಾಮನಗೌಡರ, ಬೆಳಗಾವಿ ಜಿಲ್ಲಾ ಕಾಂಗ್ರೆಸ್‌ ಗ್ರಾಮೀಣ ಅಧ್ಯಕ್ಷ ವಿನಯ ನಾವಲಗಟ್ಟಿ, ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಲಕ್ಷ್ಮಣರಾವ್‌ ಚಿಂಗಳೆ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಬೆಳಗಾವಿ ಉಪ ನಿರ್ದೇಶಕರಾದ ಬಸವರಾಜ ಮಿಲ್ಲಾನಟ್ಟಿ, ಜಿಲ್ಲಾ ಅಮೆಚೂರ ಕಬಡ್ಡಿ ಅಸೋಸಿಯೆಷನ್‌ ಬೆಳಗಾವಿ ಸಂಸ್ಥಾಪಕ ಕಾರ್ಯದರ್ಶಿಗಳಾದ ಬಾಳೇಶ ಬರಗಾಲಿ, ಬಾಗಲಕೋಟೆ ಜಿಲ್ಲಾ ಅಮೆಚೂರ ಕಬಡ್ಡಿ ಅಸೋಸಿಯೆಷನ್‌ ಅಧ್ಯಕ್ಷರಾದ ನಂದಕುಮಾರ ಪಾಟೀಲ್‌ ಸೇರಿದಂತೆ ಇತರರು ಹಾಜರಿದ್ದರು.


About cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

Check Also

ರೈತರ ಖಾತೆಗಳಿಗೆ ಪರಿಹಾರವನ್ನು ಜಮೆ ಮಾಡಿ; ಅಧಿಕಾರಿಗಳಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಸೂಚನೆ

ಗೋಕಾಕ : ಕಳೆದ ಆಗಷ್ಟ್ ತಿಂಗಳಲ್ಲಿ ಸಂಭವಿಸಿದ ಅತಿವೃಷ್ಟಿ ಮತ್ತು ಪ್ರವಾಹದಿಂದ ಹಾನಿಗೀಡಾಗಿರುವ ರೈತರ ಬೆಳೆಗಳಿಗೆ ಪರಿಹಾರ ಮೊತ್ತವನ್ನು ವಿತರಿಸುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ