ಬಾಗಲಕೋಟೆ: ಕಾಂಗ್ರೆಸ್ ಪಕ್ಷವನ್ನು ಶಕ್ತಿಯುತವಾಗಿ ಬರುವ ಚುನಾವಣೆಯನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ 50 ಲಕ್ಷಕ್ಕೂ ಹೆಚ್ಚಿನ ಸದಸ್ವತ್ವ ಗುರಿ ಹೊಂದಲಾಗಿದೆ ಎಂದು ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.
ತಾಲೂಕಿನ ಗದ್ದಿನಕೇರಿ ಕ್ರಾಸ್ ನಲ್ಲಿರುವ ಲಡ್ಡುಮುತ್ಯಾ ದೇವಸ್ಥಾನ ಸಭಾಭವನದಲ್ಲಿ ಹಮ್ಮಿಕೊಂಡ ಕಾಂಗ್ರೆಸ್ ಡಿಜಿಟಲ್ ಸದಸ್ಯತ್ವ ಅಭಿಯಾನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಈ ದಿಸೆಯಲ್ಲಿ ಪಕ್ಷದ ಪದಾಧಿಕಾರಿಗಳು ಸದಸ್ಯತ್ವಕ್ಕೆ ಹೆಚ್ಚಿನ ಮಹತ್ವ ನೀಡಿ ಕಾರ್ಯೋನ್ಮುಖರಾಗಬೇಕು ಎಂದು ಕರೆ ನೀಡಿದರು.
ದೇಶದ ಅಭಿವೃದ್ಧಿಯಲ್ಲಿ ಕಾಂಗ್ರೆಸ್ ಪಕ್ಷ ತನ್ನದೇ ಶ್ರಮ ವಹಿಸಿ ಸೇವೆ ಸಲ್ಲಿಸಿದೆ, ರಾಜ್ಯ, ದೇಶದಲ್ಲಿ ಪಕ್ಷವನ್ನು ಶಕ್ತಿಯುತಗೊಳಿಸಬೇಕಾದ ಅಗತ್ಯವಿದೆ. ಈ ದಿಸೆಯಲ್ಲಿ ಸದಸ್ಯತ್ವ ಮಹತ್ವ ಹೊಂದಿದ್ದು,ಈ ಕಾಯಕದಲ್ಲಿ ಪಕ್ಷದ ಕಾರ್ಯಕರ್ತರು, ಮುಖಂಡರು, ಪದಾಧಿಕಾರಿಗಳು, ಸಕ್ರಿಯವಾಗಿ ನಿರ್ದಿಷ್ಟ ಗುರಿಗಿಂತಲೂ ಹೆಚ್ಚಿನ ಸಾಧನೆ ಮಾಡಬೇಕೆಂದು ಹೇಳಿದರು. ರಾಜ್ಯದಲ್ಲಿ 50ಲಕ್ಷ ಸದಸ್ಯತ್ವ ಮಾಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದ ಅವರು, ಈಗಾಗಲೇ 32ಲಕ್ಷ ಸದಸ್ಯತ್ವ ಮಾಡಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಅಯಾ ಕ್ರೇತ್ರ ಹಾಲಿ, ಮಾಜಿ ಶಾಸಕರು, ಮುಖಂಡರು, ಪದಾಧಿಕಾರಿಗಳು, ಸದಸ್ಯತ್ವ ಸಂಖ್ಯೆ ಹೆಚ್ಚಿಸಬೇಕು. ಚುನಾವಣೇ ದೃಷ್ಟಿಕೋನದಿಂದ ಇದು ಬಹಳ ಮಹತ್ವ ಪಡೆದುಕೊಂಡಿದೆ ಎಂದು ಹೇಳಿದರು. ಈ ವೇಳೆ ಛತ್ತಿಸಗಢದ ಮಾಜಿ ಶಾಸಕ ಮೋತಿಲಾಲ್ ದೇವಾಗಮ್, ಕೆಪಿಸಿಸಿ ಸದಸ್ಯತ್ವ ಅಭಿಯಾನದ ಮುಖಂಡ ರಘುನಂದನ್ ರಾಮನ್, ಮಾಜಿ ಶಾಸಕ ಜೆ.ಟಿ. ಪಾಟೀಲ, ಮಾಜಿ ಶಾಸಕ ಎಸ್.ಜಿ. ನಂಜಯ್ಯನಮಠ, ವಿ.ಪ. ಸದಸ್ಯ ಆರ್.ಬಿ. ತಿಮ್ಮಾಪುರ, ವೀಣಾ ಕಾಶಪ್ಪನವರ,ಆರ್.ವಿ. ವೆಂಕಟೇಶ, ಸೂರಜ್ ಹೆಗಡೆ, ವಿಜಾಯಾನಂದ ಕಾಶಪ್ಪನವರ, ಬಸವಪ್ರಭು ಸರನಾಡಗೌಡ, ಸೇರಿದಂತೆ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.