ಯಮಕನಮರಡಿ: ಯಮಕನಮರಡಿ ವಿಧಾನ ಸಭಾ ಮತ ಕ್ಷೇತ್ರದ ಮೋದಗಾ ಗ್ರಾಮದಲ್ಲಿ ಬಿಜೆಪಿಯ ಹಲವಾರು ಮುಖಂಡರು ಇಂದು ಅಧಿಕೃತವಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಶಾಸಕ ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ಕಾಂಗ್ರಸ್ ಸೇರ್ಪಡೆಗೊಂಡರು.
ದಡ್ಡಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಮೋದಗಾ ಗ್ರಾಮದಲ್ಲಿ ಶನಿವಾರದಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಶಾಸಕ ಸತೀಶ ಜಾರಕಿಹೊಳಿ ಅವರ ಅಭಿವೃದ್ಧಿ ಕಾರ್ಯಗಳನ್ನು ಮತ್ತು ಅವರ ಸಾಮಾಜಿಕ ಕಳಕಳಿ ಮತ್ತು ಕ್ಷೇತ್ರದ ವಿವಿಧ ರಂಗಗಳಲ್ಲಿ ಕಳೆದ ಒಂದು ದಶಕಗಳಿಂದ ಮಾಡಿದ ಸಾಧನೆಗಳನ್ನು ಮೆಚ್ಚಿ 28ಕ್ಕೂ ಹೆಚ್ವು ಬಿಜೆಪಿ ಮುಖಂಡರು ವಿದ್ಯುಕ್ತವಾಗಿ ಕಾಂಗ್ರಸ್ ಪಕ್ಷಕ್ಕೆ ಸೇರ್ಪಡೆ ಗೊಂಡರು.
ಬಿಜೆಪಿಯಿಂದ ಕಾಂಗ್ರೆಸ್ ಕ್ಕೆ ಸೇರ್ಪಡೆಗೊಂಡ ಮುಖಂಡರನ್ನು ಶಾಲು ಹೊದಿಸಿ ಪಕ್ಷಕ್ಕೆ ಬರ ಮಾಡಿಕೊಂಡ ನಂತರ ಮಾತನಾಡಿದ ಶಾಸಕ ಸತೀಶ ಜಾರಕಿಹೊಳಿ ಅವರು, ಮುಂಬರುವ ದಿನಗಳಲ್ಲಿ ಕ್ಷೇತ್ರದ ಶ್ರೆಯೋಭೀವೃದ್ಧಿಗೆ ಶ್ರಮಿಸಿ ಯಮಕನಮರಡಿ ಕ್ಷೇತ್ರವನ್ನು ಅಭಿವೃದ್ಧಿಯಲ್ಲಿ ಇಡೀ ರಾಜ್ಯಕ್ಕೆ ಮಾದರಿ ಕ್ಷೇತ್ರವನ್ನಾಗಿ ರೂಪಗೊಳಿಸಲಾಗುವುದೆಂದು ಹೇಳಿದರು.
ನಮ್ಮ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ತಾವು ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಂಡಿದ್ದರಿಂದ ತಮಗೆ ಮತ್ತು ಪಕ್ಷಕ್ಕೆ ಆನೆ ಬಲ ಬಂದಂತ ಆಗಿದ್ದು, ತಮ್ಮ ಪ್ರೀತಿ ವಿಶ್ವಾಸ ಗೆಲ್ಲುವುದರ ಮೂಲಕ ಈ ಕ್ಷೇತ್ರದ ಇನ್ನೂ ಹೆಚ್ಚಿನ ಅಭಿವೃದ್ಧಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೆನೆ ಎಂದು ಶಾಸಕ ಸತೀಶ ಜಾರಕಿಹೊಳಿ ಹೇಳಿದರು.
ಈ ಸಂದರ್ಭದಲ್ಲಿ ಅಮೋಲ್ ದಳವಿ, ಅರ್ಜುನ ಗಾವಡೆ ,ಭಾರತಿ ಕೋಕಿತಕರ್ , ತಾನಾಜಿ ಸುಂಟಕರ್ , ಕಿರಣ್ ರಜಪೂತ್ ಈರಣ್ಣ ಬಿಸಿರೊಟ್ಟಿ ,ದಯಾನಂದ ಪಾಟೀಲ್,ಬಸವರಾಜ ದೇಸಾಯಿ ,ಶರದ್ ಪಾಟೀಲ್ ಇನ್ನಿತರು ಇದ್ದರು.