ಬೆಳಗಾವಿ: ಮಾ.31ರೊಳಗಾಗಿ 50 ಲಕ್ಷ ಸದಸ್ಯತ್ವ ಗುರಿ ಮುಟ್ಟುವ ಅಗತ್ಯವಿದೆ. ಈ ನಿಟ್ಟನಲ್ಲಿ ಕಾರ್ಯಕರ್ತರು ಹಗಲಿರುಳು ಕೆಲಸ ಮಾಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಹೇಳಿದರು.
ಇಲ್ಲಿನ ಕಾಂಗ್ರೆಸ್ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿರುವ ‘ಕಾಂಗ್ರೆಸ್ ಡಿಜಿಟಲ್ ಸದಸ್ಯತ್ವ ನೋಂದಣಿ’ ಅಭಿಯಾನದಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಸದಸ್ಯತ್ವ ಅಭಿಯಾನ ನಡೆಯಬೇಕಿದೆ. ಮನೆಯಲ್ಲಿನ ಜನರು ಕೆಲಸಗಳಿಗೆ ಹೋದರು ಕಾಯ್ದು ನೋಂದಣಿ ಮಾಡಿಸಬೇಕು. ದೇಶ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ತಳಮಟ್ಟದಿಂದ ಕಟ್ಟಬೇಕಾಗಿದೆ. ನಮಗೆ ಇನ್ನೂ ಕಾಲಾವಕಾಶವಿದೆ. ಸ್ವಲ್ಪ ಶ್ರಮ ಪಟ್ಟರೆ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮನೆ ಮನೆಗೆ ತೆರಳಿ ಕಾಂಗ್ರೆಸ್ ಬಗ್ಗೆ ಒಲವು, ಪಕ್ಷದ ಸಿದ್ಧಾಂತದ ಬಗ್ಗೆ ನಂಬಿಕೆ, ವಿಶ್ವಾಸ ಇರುವವರನ್ನು ನೋಂದಣಿ ಮಾಡಿ ಪಕ್ಷಕ್ಕೆ ಹೆಚ್ಚು ಶಕ್ತಿ ತುಂಬಬೇಕು. ಒಂದು ರಾಜಕೀಯ ಪಕ್ಷದ ಪ್ರಾಬಲ್ಯತೆ ಅದರ ಸದಸ್ಯರ ಸಂಖ್ಯೆಯಿಂದ ನಿರ್ಧರಿತವಾಗುತ್ತದೆ. ಹೀಗಾಗಿ ನಮಗೆ ನೀಡಿರುವ ಮಾ.31ರ ಗಡುವಿನ ಒಳಗಾಗಿ 50 ಲಕ್ಷ ಸದಸ್ಯತ್ವ ನೋಂದಣಿ ಮಾಡಬೇಕು. ಇದಕ್ಕಾಗಿ ಎಲ್ಲರೂ ಸಕ್ರಿಯವಾಗಿ ದುಡಿಯಬೇಕು ಎಂದರು.
ಎಲ್ಲಾ ಕ್ಷೇತ್ರದಲ್ಲಿ ಅಂದಾಜು 50 ಸಾವಿರ ಸದಸ್ಯತ್ವ ಅಭಿಯಾನ ನಡೆಯಲ್ಲಿ ಎಂದರು.
ಮೋತಿಲಾಲ್ ದೇವಾಂಗ, ಮಾಜಿ ಎಂಎಲ್ ಸಿ ಆರ್ ವಿ ವೇಂಕಟೇಶ, ಪ್ರಭುನಾಥ ದ್ಯಾಮನ್ನವರ, ಸುರೇಶ ಹೆಗಡೆ, ಅಶೋಕಕುಮಾರ್, ಎಂಎಲ್ ಸಿ ಚನ್ನರಾಜ್ ಹಟ್ಟಿಹೊಳಿ, ಮಾಜಿ ಶಾಸಕ ಅಶೋಕ ಪಟ್ಟಣ, ರಾಜು ಶೇಠ, ವಿನಯ ನಾವಲಗಟ್ಟಿ, ಸತೀಶ ಮೆಯರವಾಡಿ ಹಾಗೂ ಇತರರು.