ಸಾವಳಗಿ ಸೋಲ್ಟರ್ ತಂಡಕ್ಕೆ ಪ್ರಥಮ ಬಹುಮಾನ
ಗೋಕಾಕ ತಾಲ್ಲೂಕಿನ ಸಾವಳಗಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಸಾವಳಗಿ ಪ್ರಿಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯ ಬಹುಮಾನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಶಾಸಕ ರಮೇಶ್ ಜಾರಕಿಹೊಳಿ ಅವರ ಆಪ್ತ ಸಹಾಯಕರಾದ ಸುರೇಶ್ ಸನದಿ ಭಾಗವಹಿಸಿ ಬಹುಮಾನ ವಿತರಿಸಿದರು. ಮೊದಲ ಬಹುಮಾನ 33333/-ರೂ ಹಾಗೂ ಕರ್ಷಕ ಟ್ರೋಫಿಯನ್ನು ರಮೇಶ ಚಿಕ್ಕೋಡಿ ಮಾಲೀಕತ್ವದ ಸಾವಳಗಿಸೋಲ್ಕರ್ ಗೆದ್ದು ಬಿಗಿತು,ಎರಡನೇ ಬಹುಮಾನ /22222-ರೂ.ಸಾವಳಗಿ ಹೀರೋಸ್,ಮೂರನೇ ಬಹುಮಾನ11111/-ರೂ. ಸಾವಳಗಿ ಟೈಗರ್ಸ್, ನಾಲ್ಕನೇ ಬಹುಮಾನ 5555/-ರೂ.ಸಾವಳಗಿ ಬುಲ್ಸ್, ತಂಡಗಳಿಗೆ ಬಹುಮಾನ ವಿತರಿಸಿ. ನಂತರ ಮಾತನಾಡಿ ಕ್ರಿಕೆಟ್ ದೈತ್ಯ ಆಟದ ಸಂಭ್ರಮದ ನಡುವೆ ಗ್ರಾಮೀಣ ಕ್ರೀಡೆಗಳನ್ನು ಒಂದೊಂದಾಗಿ ನುಂಗಿ ಹಾಕುವುದನ್ನು ನೋಡಬಹುದು.
ಇತ್ತೀಚೆಗೆ ಪಾಲಕರು ಮತ್ತು ಪೋಷಕರಲ್ಲಯೂ ಅಪ್ಪಟ ಗ್ರಾಮೀಣ ಕ್ರೀಡೆಗಳ ಬಗ್ಗೆ ತೋರಿದ ನಿರ್ಲಕ್ಷತ್ರ್ಯ ಭಾವನೆ ಎದ್ದು ತೋರುತ್ತಿದೆ. ಕೇವಲ ಮಕ್ಕಳನ್ನು ಉತ್ತಮ ವಿದ್ಯಾವಂತರನ್ನಾಗಿಸಬೇಕು. ಒಳ್ಳೆಯ ಅಧಿಕಾರಿಯನ್ನಾಗಿ ಮಾಡಬೇಕು ಎಂಬ ಭ್ರಮಾಲೋಕದ ವಿಚಾರಗಳಿಂದಾಗಿ ಗ್ರಾಮೀಣ ಕ್ರೀಡೆಗಳು ನಶಿಸಲು ಕಾರಣಗಳಲ್ಲೊಂದು.
ಒಮ್ಮೆ ನಾವು ಹಾಗೂ ನಮಗೆ ತಿಳಿದಂತೆ ನಮ್ಮ ಹಿರಿಯರು ಆಡುತ್ತಿದ್ದ ಆಟಗಳ ಪಟ್ಟಿಯನ್ನು ಮಾಡುತ್ತಾ ಹೋದರೆ.-ಬಾರ,ಅಳ್ಳಿ-ಗುಳ್ಳಿ,ಕುಂಟೆಬಿಲ್ಲೆ,ಲಗೋರಿ,ಮರಕೋತಿ ಆಟ,ಗೋಲಿ-ಗಜಗ,ನದಿದಡ, ಗಿಲ್ಲಿದಾಂಡು, ಸರಗೇರೆ,ಬುಗುರಿ,ಕೌಲೆತ್ತು ಇತರ ಆಟಗಳು ಕಣ್ಮರೆಯಾಗುತ್ತಿವೆ.ಟಿವಿ,ಕಂಪ್ಯೂಟರ್,ಎಲೇಕ್ಟ್ರಾನಿಕ್ಸ್ ವಸ್ತುಗಳಿಂದ ಹಾಗೂ ವಿಡಿಯೂ ಗೇಮ್ ಬಂದಿರುವುದರಿಂದ ಮಕ್ಕಳಿಂದ ಆಟಗಳು ಮರೆಯಾದವು
ಆದರೆ ಪ್ರತಿಯೊಂದು ಹಳ್ಳಿಯಲ್ಲಿ ಜಾತ್ರೆ ಹಾಗೂ ವಿವಿಧ ಕಾರ್ಯಕ್ರಮಗಳಲ್ಲಿ ವರ್ಷದಲ್ಲಿ ನಾಲ್ಕೆತ್ರೖದು ಬಾರಿ ,, ಕ್ರೀಡೆಗಳನ್ನು ಆಯೋಜಿಸಿದರೆ ಮಾತ್ರ ಗ್ರಾಮೀಣ ಕ್ರೀಡೆಗಳನ್ನು ಜೀವಂತವಾಗಿರಲು ಸಾಧ್ಯವಾಗುತ್ತದೆ. ಸುರೇಶ್ ಸನದಿ.ಹೇಳಿದರು
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ. ರಮೇಶ ಚಿಕ್ಕೋಡಿ. ಸತ್ತೆಗೌಡ ಪಾಟೀಲ, ಶಿವಲಿಂಗ ಕಬಾಡಗಿ,ಶಿವಲಿಂಗ ಕೋಟಬಾಗಿ, ಮಹೇಶ ಶಿರಹಟ್ಟಿ,ಶಾನುಲ್ ಹಾತ್ತಿವಾಲೆ, ಮಹಾಂತೇಶ ಕರೀಗಾರ ಶಿವಗೊಂಡ ಅಂಗಡಿ ಸೇರಿದಂತೆ.ಸಾವಳಗಿ ಮುತ್ನಾಳ.ಖಾನಾಪೂರ. ನಂದಗಾಂವ. ಗ್ರಾಮದ ಗುರು ಹಿರಿಯರು ಹಾಗೂ
ಗ್ರಾ.ಪಂ ಸರ್ವ ಸದಸ್ಯರು,ನೂರಾರು ಕ್ರೀಡಾಭಿಮಾನಿಗಳು ಉಪಸ್ಥಿತರಿದ್ದರು.