ಬೆಳಗಾವಿ: ನಮ್ಮಲ್ಲಿಯೂ ಐಎಎಸ್ ಹಾಗೂ ಕೆಎಎಸ್ ಅಧಿಕಾರಿಗಳಾಗುವ ಸಾಮರ್ಥ ಹೊಂದಿರುವ ವಿದ್ಯಾರ್ಥಿಗಳಿದ್ದು, ಆದರೆ ಅದನ್ನು ಸಾಧಿಸುವ ಛಲ ನಮ್ಮ ವಿದ್ಯಾರ್ಥಿಗಳಲ್ಲಿ ಹೊಂದಬೇಕು. ವಿದ್ಯಾರ್ಥಿಗಳಲ್ಲಿ ಅಂತಹ ದೊಡ್ಡ ದೊಡ್ಡ ಗುರಿ ಸಾಧಿಸುವತ್ತ ಪ್ರಯತ್ನಿಸಿದರೆ ಅದು ಅಸಾಧ್ಯವೇನಲ್ಲ ಎಂದು ಯುವ ನಾಯಕ ರಾಹುಲ್ ಜಾರಕಿಹೊಳಿ ಹೇಳಿದರು.
ಕಾಕತಿಯ ಕಲ್ಪವೃಕ್ಷ ಪದವಿ ಪೂರ್ವ ಕಾಲೇಜಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಪುನಶ್ಚೇತನ, ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂಕಾರಂಜಿ ಉತ್ಸವ ಉದ್ಘಾಟನಾ ಸಮಾರಂಭ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ವಿದ್ಯಾರ್ಥಿಗಳಲ್ಲಿ ಅರ್ಹತೆ ಅವರಲ್ಲಿ ಸುಪ್ತವಾಗಿ ಅಡಗಿಕೊಂಡಿರುವ ಕೌಶಲ್ಯಗಳಲಿದೆ ವಿನಃ ಅವರ ಶಿಕ್ಷಣದ ಮಟ್ಟದಲ್ಲಿಲ್ಲ. ಆ ಸುಪ್ತ ಪ್ರತಿಭೆ ಹೊರಹಾಕುವ ಕೌಶಲ್ಯ ಹೆಚ್ಚು ಹೆಚ್ಚು ಕರಗತ ಮಾಡಿಕೊಳ್ಳಬೇಕು. ಮುಖ್ಯವಾಗಿ ಇಂದಿನ ಯುವ ಜನತೆ ದುಶ್ಚಟಗಳತ್ತ ಗಮನ ಹರಿಸದೇ ಕ್ರೀಡೆ ಹಾಗೂ ವಿದ್ಯಾಭ್ಯಾಸದತ್ತ ಗಮನ ಹರಿಸಿ ಉತ್ತಮ ಆರೋಗ್ಯ ಹೊಂದಬೇಕು ಎಂದರು.
ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಜ್ಜಾಗುತ್ತಿರುವ ವಿದ್ಯಾರ್ಥಿಗಳಿಗೆಂದೆ ಸತೀಶ್ ಜಾರಕಿಹೊಳಿ ಫೌಂಡೇಶನ್ ವತಿಯಿಂದ ನೀಡಲಾಗುತ್ತಿರುವ ನೂತನ ಪಠ್ಯಾಧರಿತ ಪುಸ್ತಕಗಳನ್ನು ನೀಡಲಾಗಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದು ಸಾಧನೆ ಮಾಡಲು ಮುಂದಾಗಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಇದೇ ವೇಳೆ ಯುವ ನಾಯಕ ರಾಹುಲ್ ಜಾರಕಿಹೊಳಿ ಕಬ್ಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಿ ವಿದ್ಯಾರ್ಥಿಗಳಿಗೆ ಶುಭ ಕೋರಿದರು.
ಈ ಸಂದರ್ಭದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರು ನಾಗರಾಜ ವಿ, ನ್ಯಾಕ ಸಹಾಯಕ ಸಲಹೆಗಾರರು ಡಿ.ಕೆ. ಕಾಂಬಳೆ, ಎನ್. ಎ. ಜಾಧವ, ಕಾಕತಿ ಕಲ್ಪವೃಕ್ಷ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎಸ್.ಪಿ. ನಂದನವಾಡ, ಕೃಷ್ಣಾ ಟೋಪಾಯಿ, ಮಹೇಶ ಪೂಜಾರಿ, ಅರುಣ ಬೋಳಶೆಟ್ಟಿ, ಸಿದಗೌಡ ಸುಣಗಾರ, ಯಲ್ಲಪ್ಪಾ ಕೊಳೇಕರ, ಸುನೀಲ ಸುಣಗಾರ, ಫಕಿರನಾಯ್ಕ ಗಡ್ಡಿಗೌಡರ, ಈರಪ್ಪಾ ಬಂಜಿರಾಮ, ಶೆಟ್ಟೆಪ್ಪಾ ಜುಂಟ, ಅಶೋಕ ಪಾಟೀಲ, ಮಾರತಿಗೌಡ ಹಿತರಗೌಡ್ರ, ಲಗಮಣ್ಣಾ ಸನದಿ, ರಾಮಣ್ಣಾ ಗುಳ್ಳಿ, ಮಾರಿತಿ ಮಾಳದಕರ, ವಿಕ್ಟರರಾಜ ಕುದ್ನೂರು ಸೇರಿದಂತೆ ಇತರರು ಇದ್ದರು.