ಯಮಕನಮರಡಿ: ಗ್ರಾಮಗಳ ಅಭಿವೃದ್ಧಿಗೆ ಗ್ರಾಮಸ್ಥರ ಸಹಕಾರ ಅಗತ್ಯವಾಗಿದೆ ಎಂದು ಯುವ ನಾಯಕ ರಾಹುಲ್ ಜಾರಕಿಹೊಳಿ ಹೇಳಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿಯವರ ಅನುದಾನದಲ್ಲಿ ಯಮಕನಮರಡಿ ಮತಕ್ಷೇತ್ರದ ಪಾತರೋಟಗಲ್ಲಿಯಲ್ಲಿಒಟ್ಟು 15 ಲಕ್ಷ ವೆಚ್ಚದ ಚರಂಡಿ ಮತ್ತು ಪೇವರಸ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರೆವೇರಿಸಿ ಅವರು ಮಾತನಾಡಿದರು.

ಇಂದಿನ ಯುವಕರು ದುಶ್ಚಟಗಳತ್ತ ಮುಖ ಮಾಡದೇ ಗ್ರಾಮಗಳ ಅಭಿವೃದ್ಧಿ ಮಾಡುವತ್ತ ಮುಖ ಮಾಡಬೇಕಿದೆ ಎಂದ ಅವರು, ಗ್ರಾಮಗಳು ಅಭಿವೃದ್ಧಿಯಾದರೆ ಮಾತ್ರ ನಮ್ಮ ದೇಶ ಸದೃಢವಾಗಲು ಸಾಧ್ಯವಿದೆ. ಆದ್ದರಿಂದ ಗ್ರಾಮಸ್ಥರು ಕಾಮಗಾರಿಗಳತ್ತ ಗಮನ ಹರಿಸಿ ಉತ್ತಮ ಕಾಮಗಾರಿಗಳಿಗೆ ಸಹಕಾರ ನೀಡಬೇಕು ಎಂದರು. 
ಇದೇ ವೇಳೆ ಸತೀಶ್ ಜಾರಕಿಹೊಳಿ ಫೌಂಡೇಶನ್ ವತಿಯಿಂದ
50 ಕುರ್ಚಿ ಒಂದು ಸೌಂಡ್ ಬಾರ್ಕ್ಸನ್ನು ಕಾಂಗ್ರೆಸ್ ಯುವ ನಾಯಕ ರಾಹುಲ್ ಜಾರಕಿಹೊಳಿ ಗ್ರಾಮಸ್ಥರಿಗೆ ವಿತರಿಸಿದರು.
ಈ ಸಂದರ್ಭದಲ್ಲಿ ಕಿರಣ್ ರಜಪೂತ, ಈರಣ್ಣ ಬಿಸಿರೊಟ್ಟಿ ದೇವಪ್ಪ ಹೊನ್ನೂರು, ಬಸು ಡುಮ್ಮ ನಾಯಕ್, ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷ ಹಾಗೂ ಸದಸ್ಯರು ಸೇರಿದಂತೆ ಕಾಂಗ್ರೆಸ್ ಮುಖಂಡರು, ಊರಿನ ಹಿರಿಯರು, ಗ್ರಾಮಸ್ಥರು ಉಪಸ್ಥಿತಿರಿದ್ದರು.
CKNEWSKANNADA / BRASTACHARDARSHAN CK NEWS KANNADA