ಬೆಳಗಾವಿ: ಶಾಸಕ ಸತೀಶ ಜಾರಕಿಹೊಳಿ ಒಡೆತನದ ಬೆಳಗಾಂ ಶುಗರ್ಸ ಪ್ರೈ ಲಿ, ಹುದಲಿ, ಕಾರ್ಖಾನೆಯ ಆವರಣದಲ್ಲಿ “73 ನೇ ಗಣರಾಜ್ಯೋತ್ಸವ ದಿನಾಚರಣೆಯ ದ್ವಜಾರೋಹಣ” ಕಾರ್ಯಕ್ರಮವನ್ನು ಆಚರಿಸಿಲಾಯಿತು.
ಪ್ರಸಕ್ತ 2021-22 ಕಬ್ಬು ನುರಿಸುವ ಹಂಗಾಮಿನಲ್ಲಿ ಕಾರ್ಖಾನೆಗೆ ಹೆಚ್ಚು ಕಬ್ಬನ್ನು ಸಾರಿಗೆ ಮಾಡಿದ ಮುಕ್ತೆದಾರರಾದ ನಿಂಗಪ್ಪಾ ಚಿ. ರಾಮಾಪೂರ ಸಾ: ವಿರಪನಕೊಪ್ಪ, ತಾ: ಬೆಳಗಾವಿ ಹಾಗೂ ಸಿದ್ದಪ್ಪಾ ಲ. ಖನಗಾರ ಸಾ: ಕೈತನಾಳ, ತಾ: ಗೋಕಾಕ ಇವರಿಂದ ನೇರವೇರಿಸಲಾಯಿತು.
ಈ ಕಾರ್ಯಕ್ರಮದ ಅದ್ಯಕ್ಷತೆಯನ್ನು ಸಂಸ್ಥೆಯ ಹಿರಿಯ ಉಪಾದ್ಯಕ್ಷರಾದ ಎಲ್.ಆರ್.ಕಾರಗಿ, ವಹಿಸಿ ಗಣರಾಜ್ಯೋತ್ಸವ ದಿನಾಚರಣೆಯ ಮಹತ್ವದ ಕುರಿತು ಮಾತನಾಡಿ ನಂತರ ಭಾರತ ಸಂವಿಧಾನದ ಪ್ರಮುಖ ಹಕ್ಕುಗಳಾದ ಸ್ವಾತಂತ್ರ್ಯ, ಸಮಾನತೆ, ಶಿಕ್ಷಣ, ಸಹೋದರತ್ವ ಮತ್ತು ಸಂಸ್ಕøತಿ ಕುರಿತು ವಿವರಿಸಿದರು. ಈ ಮೂಲಕ ಎಲ್ಲರೂ ದೇಶದ ಸಂವಿಧಾನ, ರಾಷ್ಟ್ರಗೀತೆ, ರಾಷ್ಟ್ರಧ್ವಜವನ್ನು ಗೌರವಿಸುವುದರ ಜೊತೆಗೆ ದೇಶದ ಆರ್ಥಿಕ ಅಬಿವೃದ್ದಿಯ ಕಡೆಗೆ ಗಮನಹರಿಸಲು ತಿಳಿಸಿದರು.
ಈ ವೇಳೆ ಕಾರ್ಖಾನೆಯ ತಾತ್ರಿಂಕ ಉಪಾದ್ಯಕ್ಷರಾದ ಎ.ಎಸ್.ರಾಣಾ, ಹಾಗೂ ಕಾರ್ಖಾನೆಯ ಹಿರಿಯ ವ್ಯವಸ್ಥಾಪಕರುಗಳು, ಕಾರ್ಮಿಕ ವ ಸಿಬ್ಬಂದಿಯರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.