Breaking News

25 ರಂದು ಸತೀಶ ಶುಗರ್ಸ ಕಾರ್ಖಾನೆಯ ನೂತನ ಎಥೆನಾಲ್ ಘಟಕ ಕಾರ್ಯಾರಂಭ: ಪ್ರದೀಪಕುಮಾರ ಇಂಡಿ


ಗೋಕಾಕ; ಈ ಭಾಗದ ರೈತರ ಜೀವನಾಡಿಯಾಗಿರುವ ” ಸತೀಶ ಶುಗರ್ಸ ಕಾರ್ಖಾನೆಯ  ನೂತನ ಎಥೆನಾಲ್ ಘಟಕವು ಇದೇ 25 ರಂದು  ಮಂಗಳವಾರ ಕಾರ್ಯಾರಂಭಗೊಳ್ಳಲಿದೆ”  ಎಂದು ಕಾರ್ಖಾನೆಯ ಚೇರಮನ್ನ ಮತ್ತು ಸಿಎಪ್ಓ   ಪ್ರದೀಪಕುಮಾರ  ಇಂಡಿ ಅವರು ಹೇಳಿದರು.

ದೇಶದ ಪರ್ಯಾಯ ಇಂಧನದ ತುರ್ತು ಅಗತ್ಯತೆಗೆ ಅನುಸಾರವಾಗಿ ನಮ್ಮ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ  ಸತೀಶ ಜಾರಕಿಹೊಳಿ ರವರ ಸಮರ್ಥ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ಸಂಬಂಧಿತ ಎಲ್ಲ ಕೆಲಸಗಳನ್ನು  ನಿಗಧಿತ ಅವಧಿಯಲ್ಲಿ ವ್ಯವಸ್ಥಿತವಾಗಿ ಪರಿಪೂರ್ಣಗೊಳಿಸಲಾಗಿದೆ.

ಈ ಮಹತ್ವದ ಕಾರ್ಯವು ಕೇವಲ ಐದೂವರೆ ತಿಂಗಳಿನಲ್ಲಿ ತಯಾರಿಸಲಾಗಿದೆ.  ಪ್ರತಿದಿನ 210 ಕೆ.ಎಲ್.ಪಿ.ಡಿ ಉತ್ಪಾದನಾ ಸಾಮಥ್ರ್ಯವುಳ್ಳ ನೂತನ ಕೇನ್ ಸಿರಪ್ ಮತ್ತು ಗ್ರೇನ್ ಆಧಾರಿತ ಎಥೆನಾಲ್ ಘಟಕದ ಉತ್ಪಾದನಾ ಚಟುವಟಿಕೆಗಳು ಮಂಗಳವಾರ ವಿದ್ಯುಕ್ತವಾಗಿ ಕಾರ್ಯಾರಂಭಗೊಳ್ಳುತ್ತಿರುವುದು ಸಂತಸ ತಂದಿದೆ ಎಂದು ತಿಳಿಸಿದ್ದಾರೆ.

ಸತೀಶ ಶುಗರ್ಸ ಸಮೂಹ ಸಂಸ್ಥೆಯು ರೈತ ಸಮುದಾಯದ ಅಭಿವೃದ್ಧಿ ಹಾಗೂ ಉದ್ಯೋಗ ಸೃಷ್ಟಿಯ ಧ್ಯೇಯವನ್ನು ಹೊಂದಿದ್ದು, ಈ ನಿಟ್ಟಿನಲ್ಲಿ ಈ ನೂತನ ಘಟಕವು ಗ್ರಾಮೀಣ ಪ್ರದೇಶದಲ್ಲಿ ಸುಮಾರು 200 ನೇರ ಮತ್ತು ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸಿರುವುದಲ್ಲದೇ, ರೈತರಿಗೆ ಸೂಕ್ತ ಕಬ್ಬಿನ ದರ ನೀಡಲು ಮತ್ತು ಸಾಗಾಣಿಕೆದಾರರಿಗೆ ನೆರವಾಗಲಿದೆ ಎಂದು ತಿಳಿಸಿದರು.

ಇಂತಹ ಒಂದು ಬೃಹತ್ ಘಟಕದ ಸ್ಥಾಪನೆಯನ್ನು ಕೇವಲ ಐದೂವರೆ ತಿಂಗಳುಗಳಲ್ಲಿ ಪೂರ್ಣಗೊಳಿಸಿರುವುದು ದೇಶದ ಇತಿಹಾಸದಲ್ಲಿ ಪ್ರಥಮ ಎಂದು ಹೇಳಬಹುದು. ರಿಗ್ರೀನ್ ಎಕ್ಸೆಲ್ ಇಪಿಸಿ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಪುಣೆ ರವರ ಸಹಯೋಗದೊಂದಿಗೆ ಕೇವಲ ಐದೂವರೆ ತಿಂಗಳುಗಳಲ್ಲಿ ನಿರ್ಮಾಣಗೊಂಡು ತನ್ನ ಕಾರ್ಯಚಟುವಟಿಕೆಗಳನ್ನು ಪ್ರಾರಂಭಿಸುತ್ತಿದೆ.

ಸತೀಶ ಶುಗರ್ಸ ಕಾರ್ಖಾನೆ ಶ್ರೇಯೋಭಿವೃದ್ಧಿಗಾಗಿ ಕೈ ಜೋಡಿಸಿದ ಆತ್ಮೀಯರಾದ  ಸಂಸ್ಥೆಯ ಹಿರಿಯ ಉಪಾಧ್ಯಕ್ಷ  ಪಿ.ಡಿ.ಹಿರೇಮಠ,    ಎಲ್.ಆರ್.ಕಾರಗಿ ,  ಉಪಾಧ್ಯಕ್ಷ ವಿ.ಎಮ್.ತಳವಾರ ,   ಡಿ.ಆರ್.ಪವಾರ,  ಎ.ಎಸ್.ರಾಣಾ ಮತ್ತು ಮದ್ಯಸಾರ ಘಟಕದ ಸಹಾಯಕ ಪ್ರಧಾನ ವ್ಯವಸ್ಥಾಪಕ ಮಹೇಶ ಜಿ.ಆರ್. ಹಾಗೂ  ಕಾರ್ಖಾನೆಯ ಅಧಿಕಾರಿ ವರ್ಗದವರು ಮತ್ತು ಕಾರ್ಮಿಕ ಸಿಬ್ಬಂದಿಯವರ ಅವಿರತ ಶ್ರಮ ಶ್ಲಾಘನೀಯವಾಗಿದೆ.

ಈ ದಾಖಲೆಯ ಘಟಕದ ನಿರ್ಮಾಣ ಕಾರ್ಯದಲ್ಲಿ ಸಹಕರಿಸಿದ ಎಲ್ಲ ಸರ್ಕಾರಿ, ಅರೆ ಸರ್ಕಾರಿ ಸಂಸ್ಥೆಗಳಿಗೂ, ಎಲ್ಲ ಆಧಿಕಾರಿ ವರ್ಗದವರಿಗೂ, ಕಾರ್ಮಿಕ ಸಿಬ್ಬಂದಿ ವರ್ಗದವರಿಗೂ ಮತ್ತು ರೈತ ಬಾಂಧವರಿಗೂ, ಹಣಕಾಸು ಸಂಸ್ಥೆಗಳಿಗೂ, ಗ್ರಾಹಕರಿಗೂ ಮತ್ತು ಕಾರ್ಖಾನೆಯ ಎಲ್ಲ ಹಿತೈಷಿಗಳಿಗೆ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು  ಪ್ರಕಟನೆಯಲ್ಲಿ ತಿಳಿಸಿದ್ದಾರೆ.


About cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

Check Also

ಶಿಗ್ಗಾವಿಯಲ್ಲಿ ಕಾಂಗ್ರೆಸ್ ಗೆದ್ದರು, ಮೈ ಮರೆಯದ ಸಂಘಟನೆಗಳು: ಹಳ್ಳಿಗಳಿಗೆ ತೆರಳಿ ಮತದಾರರಿಗೆ ಕೃತಜ್ಞತೆ

ಹಾವೇರಿ: ಶಿಗ್ಗಾವಿ-ಸವಣೂರು ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ‌ಅಭ್ಯರ್ಥಿ ಲಕ್ಷಕ್ಕೂ ಅಧಿಕ‌ ಮತಗಳನ್ನು ಪಡೆದು ಶಾಸಕರಾಗಿ ಆಯ್ಕೆಯಾಗಿದ್ದರೂ, ಸಂಘಟನೆಗಳು ಮಾತ್ರ ಮೈ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ