ಯಮಕನಮರಡಿ: ಯಮಕನಮರಡಿ ವಿಧಾನಸಭಾ ಮತಕ್ಷೇತ್ರದ ಪಾಶ್ಚಾಪೂರ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸರ್ಕಾರಿ ಶಾಲಾ-ಕಾಲೇಜಗಳಿಗೆ ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಇಂದು ಭೇಟಿ ನೀಡಿ, ಸ್ವಚ್ಛತೆ ಹಾಗೂ ಸಮಸ್ಯೆಗಳನ್ನು ಆಲಿಸಿದರು.
ಈ ವೇಳೆ ಸತೀಶ್ ಜಾರಕಿಹೊಳಿ ಫೌಂಡೇಶನ್ ಸದಸ್ಯರಿಂದ ಪಾಶ್ಚಾಪೂರ ಗ್ರಾಮದಲ್ಲಿ ಸ್ವಚ್ಛತಾ ಕಾರ್ಯವನ್ನು ಹಮ್ಮಿಕೊಳ್ಳಲಾಯಿತು. ಬಳಿಕ, ಪಾಶ್ಚಾಪೂರಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಸರ್ಕಾರಿ ಕಾಲೇಜ ಕಟ್ಟಡ ಕಾಮಗಾರಿಯನ್ನು ಯುವ ನಾಯಕ ರಾಹುಲ್ ಜಾರಕಿಹೊಳಿ ಪರಿಶೀಲಿಸಿ, ಕಾಲೇಜಗಳಿಗೆ ಅಗತ್ಯ ಸೌಲಭ್ಯಗಳನ್ನು ಶೀಘ್ರವೇ ಒದಗಿಸಲಾಗುವುದು ಎಂದು ವಿದ್ಯಾರ್ಥಿಗಳಿಗೆ ಭರವಸೆ ನೀಡಿದರು.
ಗುಣಮಟ್ಟದ ಕಾಮಗಾರಿ ನಡೆಯಲಿ: ರಾಹುಲ್ ಸೂಚನೆ
ಈ ವೇಳೆ ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಮಾತನಾಡಿ, ” ವಿದ್ಯಾರ್ಥಿಗಳ ಶಿಕ್ಷಣ, ಕ್ರೀಡೆಗಾಗಿ ಅಗತ್ಯ ಸಾಮಗ್ರಿಗಳನ್ನು ಸತೀಶ್ ಜಾರಕಿಹೊಳಿ ಫೌಂಡೇಶನ್‌ದಿಂದ ನೀಡಲಾಗುವುದು. ಕಾಲೇಜನ ಕಾಮಗಾರಿಯೂ ಗುಣಮಟ್ಟದಿಂದ ನಡೆಯಲಿ, ಸಾವಿರಾರೂ ವಿದ್ಯಾರ್ಥಿಗಳು ಭವಿಷ್ಯ ರೂಪಿಸಿಕೊಳ್ಳುವ ತಾಣವಿದು. ಹೀಗಾಗಿ ಒಳ್ಳೆಯ ಸುಸಜ್ಜಿತ ಕಟ್ಟಡ ನಿರ್ಮಾಣವಾದರೆ, ಮಕ್ಕಳಿಗೆ ಅನುಕೂಲವಾಗಲಿದೆ” ಎಂದು ಶಾಲಾ ಸಿಬ್ಬಂದಿಗಳ ಗಮನಕ್ಕೆ ತಂದರು.
ಈ ಸಂದರ್ಭದಲ್ಲಿ ಮಾಜಿ ಜಿಪಂ ಸದಸ್ಯ ಮಂಜುಗೌಡ ಪಾಟೀಲ್ , ವಂದನಾ ಬಸನಾಯಕ, ಕಾಲೇಜ ಪ್ರಾಚಾರ್ಯರು ಸಂಪಗಾವಿ , ಅಬ್ದುಲ್‌ಗಣಿ ದರ್ಗಾ, ವಿನೋಧ ಡೊಂಗರೆ, ಮಾರುತಿ ಗುಟಗುದಿ, ಫಜಲ್ ಮಕಾಂದಾರ್ , ಜುಬೇರ್ ಮಿರ್ಜಾಬಾಯ್ ಹಾಗೂ ಇತರರು ಇದ್ದರು.