ಕನಕಪುರ: ನಮ್ಮ ಮೇಲೆ ಬಿಜೆಪಿ ಸರ್ಕಾರ ಕೇಸ್ ದಾಖಲಿಸಿದರೂ ನಾವು ಹೋರಾಟ ಮಾತ್ರ ಕೈ ಬಿಡಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಹೇಳಿದರು.
ಕಾಂಗ್ರೆಸ್ ಹಮ್ಮಿಕೊಂಡಿದ್ದ ಮೇಕೆದಾಟು ಎರಡನೇ ದಿನದ ಪಾದಯಾತ್ರೆಯಲ್ಲಿ ಪಾಲ್ಗೊಂಡು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ಮೇಕೆದಾಟು ಪಾದಯಾತ್ರೆ ನಡೆಯುತ್ತಿದೆ. ಮುಂದೆ ಮಹಾದಾಯಿ ಪಾದಯಾತ್ರೆ ಬಗ್ಗೆ ಚರ್ಚಿಸಿ, ನಿರಂತರ ಹೋರಾಟ ಮುಂದುವರೆಸುತ್ತೆವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಾಜ್ಯ ನಾಯಕರು, ಬೆಳಗಾವಿ ಜಿಲ್ಲೆಯ ಕಾಂಗ್ರೆಸ್ ಶಾಸಕರು, ಮುಖಂಡರು ಸೇರಿದಂತೆ ಕಾರ್ಯಕರ್ತರು ಇದ್ದರು.
CKNEWSKANNADA / BRASTACHARDARSHAN CK NEWS KANNADA