ಬೆಳಗಾವಿ : ಹೆಬ್ಬಾಳ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ ಅರ್ಜುನವಾಡ, ಕುರಣಿವಾಡಿ, ಹಂಚನಾಳ ಸೇರಿದಂತೆ ಹಲವು ಗ್ರಾಮಗಳ ವಿವಿಧ ಕಾಮಗಾರಿ ಹಾಗೂ ನೂತನ ಕಟ್ಟಡಗಳ ಉದ್ಘಾಟನೆಯನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಸೋಮವಾರ ನೆರವೇರಿಸಿದರು.
ಅರ್ಜುನವಾಡ ಗ್ರಾಮದಲ್ಲಿ ಶಾಸಕರ ಅನುದಾನದಡಿಯಲ್ಲಿ ನಿರ್ಮಾಣಗೊಂಡ ಸಮುದಾಯ ಭವನ, ಅಂಗನವಾಡಿ ನೂತನ ಕಟ್ಟಡ ಉದ್ಘಾಟಿಸಿದರು. ಬಳಿಕ ಹುಕ್ಕೇರಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿದರು. ತದನಂತರ ಅಂಬೇಡ್ಕರ್ ಸಮುದಾಯ ಭವನಕ್ಕೆ ಕುರ್ಚಿ, ಸೌಂಡ್ ಸಿಸ್ಟಮ್ ವಿತರಿಸಿದರು.
ಕುರಣಿವಾಡಿ ಗ್ರಾಮದ ಅಂಗನವಾಡಿ ಕಟ್ಟಡ, ಜೆಜೆಎಂ ಪೈಪ್ಲೈನ್ ಉದ್ಘಾಟನೆ ಮಾಡಿದರು. ಆ ನಂತರ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೈಗೊಂಡಿರುವ ರಸ್ತೆ ಕಾಮಗಾರಿ ಹಾಗೂ ಹೈ ಟೆಕ್ ಶೌಚಾಲಯ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದರು. ತದನಂತರ ಶಾಲಾ ಮಕ್ಕಳ ಕುಂದುಕೊರತೆಗಳನ್ನು ಶಾಸಕ ಸತೀಶ್ ಜಾರಕಿಹೊಳಿ ಆಲಿಸಿದ್ದರು.
ಹೆಬ್ಬಾಳ ಜಿಲ್ಲಾ ಪಂಚಾಯ್ತಿ ಸದಸ್ಯ ಮಹಾಂತೇಶ್ ಮಗದುಮ್ಮ, ಆನಂದಸ್ವಾಮೀ ತವಗಮಠ, ಸುರೇಶ್ ಹುದ್ದಾರ್, ಪ್ರವೀಣ್ ದೇಸಾಯಿ, ಎಚ್.ಪಿ.ಇನಾಮ್ದಾರ್, ಬಾಳು ಕೋಳಿ, ನಾಗಪ್ಪ ಕೋಳಿ, ಬಿ.ಆರ್.ಪಾಟೀಲ, ಆರ್.ವಿ.ಪಾಟೀಲ, ಬಸವರಾಜ ದೇಸಾಯಿ, ಮಾರುತಿ ದಡ್ಡಿ, ಭರಮಪ್ಪ ಕುರುಬರ, ಸಂಜು ಕೋಳಿ, ರಾವಸಾಹೇಬ ಗುಡಿಸಿ, ಲಕ್ಷ್ಮಿಕಾಂತ ಗಿಜವಣಿ, ಯಲ್ಲಪ್ಪ ಹುಲ್ಲೆನ್ನವರ, ಚಿಕ್ಕೋಡಿ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಂಜು ಗಡರೊಳ್ಳಿ ಸೇರಿದಂತೆ ಇತರರು ಈ ಸಂದರ್ಭದಲ್ಲಿ ಇದ್ದರು.