ಗೋಕಾಕ : ತಾಲ್ಲೂಕಿನ ಬೆನಚಿನಮರಡಿ ಗ್ರಾಮದಲ್ಲಿ ಭೀರಸಿದ್ದೇಶ್ವರ ಜಾತ್ರಾ ಮಹೋತ್ಸದ ಅಂಗವಾಗಿ ಏರ್ಪಡಿಸಿದ ಜೋಡು ಎತ್ತುಗಳ ಪ್ರದರ್ಶನಕ್ಕೆ ಯುವ ನಾಯಕ ರಾಹುಲ್ ಜಾರಕಿಹೊಳಿ ಸೋಮವಾರ ಚಾಲನೆ ನೀಡಿದರು.
ತಾಲ್ಲೂಕಿನ ಸುತ್ತಮುತ್ತಲಿನ ಗ್ರಾಮದ ರೈತರು ಪ್ರದರ್ಶನಕ್ಕೆ ತಂದಿರುವ ಎತ್ತುಗಳನ್ನು ಯುವ ನಾಯಕ ರಾಹುಲ್ ಜಾರಕಿಹೊಳಿ ವೀಕ್ಷಣೆ ಮಾಡಿದರು. ಬಳಿಕ ಮಾತನಾಡಿದ ಅವರು, ರೈತರು ಎತ್ತುಗಳನ್ನು ದೇವರು ರೂಪದಲ್ಲಿ ಪೂಜಿಸುತ್ತಾರೆ. ಅವುಗಳನ್ನು ತಮ್ಮ ಮಕ್ಕಳ ರೀತಿಯಲ್ಲಿ ಸಾಕಿದ್ದಾರೆ ಎಂದರು.
ರೈತರು ತಮ್ಮ ಎತ್ತುಗಳನ್ನು ಸಿಂಗರಿಸಿಕೊಂಡು ತಂದಿದ್ದರು. ಬಣ್ಣಬಣ್ಣದ ಹಾರಗಳಿಂದ ಕಂಗೊಳಿಸುತ್ತಿದ್ದ ಜೋಡಿ ಎತ್ತುಗಳು, ಹೋರಿಗಳು ಒಂದಕ್ಕಿಂತ ಆಕರ್ಷಣೀಯವಾಗಿ ಗಮನ ಸೆಳೆಯುತ್ತಿವೆ. ಇದೇ ರೀತಿ ಗ್ರಾಮಗಳಲ್ಲಿ ಎತ್ತುಗಳ ಪ್ರದರ್ಶನ ಇಡುವುದರಿಂದ ರೈತರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಶಿವಾನಂದ ಖಿಲಾರಿ, ಚಂದ್ರಪ್ಪ ಪೂಜೇರಿ, ಮಾಯಪ್ಪ ಗುಂಡಿ, ವಿಠ್ಠಲ ಕಲ್ಲಟ್ಟಿ, ವಿಠ್ಠಲ ಕಂಟೆಪ್ಪಗೊಳ, ಪಾಂಡುರಂಗ ಮನ್ನಿಕೇರಿ, ವಿವೇಕ ಜತ್ತಿ ಹಾಗೂ ಗ್ರಾಮದ ಮುಖಂಡರು, ಜಾತ್ರಾ ಕಮಿಟಿ ಸದಸ್ಯರು, ಹಿರಿಯರು ಈ ಸಂದರ್ಭದಲ್ಲಿ ಇದ್ದರು.