ಗೋಕಾಕ: ಭಾರತ ದೇಶದ ಪ್ರಪ್ರಥಮ ಮಹಿಳಾ ಶಿಕ್ಷಕಿ , ಅಕ್ಷರ ತಾಯಿ ಸಾವಿತ್ರಿ ಬಾಯಿ ಫುಲೆಯವರ 191 ನೇ ಜಯಂತಿಯನ್ನು ಇಂದು ಇಲ್ಲಿನ ಹಿಲ್ ಗಾರ್ಡನ್ ನಲ್ಲಿ ಆಚರಿಸಲಾಯಿತು.
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ಭಾವಚಿತ್ರಕ್ಕೆ ಪುಷ್ಟ ಅರ್ಪಿಸಿ, ಗೌರವ ಸಲ್ಲಿಸಲಾಯಿತು.
ಈ ವೇಳೆ ಕಾಂಗ್ರೆಸ್ ಮುಂಖಡ ವಿವೇಕ್ ಜತ್ತಿ ಮಾತನಾಡಿ, ಆಗಿನ ಕಾಲದ ಸಾಮಾಜಿಕ, ಸಮಾನತೆ, ದೀನ ದಲಿತರ, ಹಿಂದುಳಿದವರ ಶೈಕ್ಷಣಿಕ ಅಭಿವೃದ್ಧಿಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಸಮಾಜದ ಅಂಕುಡೊಂಕುಗಳನ್ನು ತಿದ್ದಿ ಸುಧಾರಣೆ ತಂದ ಮಹಾತ್ಮರಲ್ಲಿಸಾವಿತ್ರಿಬಾಯಿ ಫುಲೆಯವರು ಅಗ್ರಗಣ್ಯರು. ಅವರ ಆದರ್ಶ ಸರಳ ಜೀವನವು ಎಲ್ಲರಿಗೂ ಮಾದರಿ ಎಂದರು.
ತಾಯಿ ಸಾವಿತ್ರಿ ಬಾಯಿ ಫುಲೆಯವರು ಒಂದು ಒಡೆದು ಹೋಗಿರುವ ಮನೆಯಲ್ಲಿ, ಶಿಕ್ಷಣ ನೀಡಲು ಆರಂಭಿಸಿದಾಗ ಅಲ್ಲಿನ ಗ್ರಾಮಸ್ಥರು ಆ ತಾಯಿಗೆ ಚಿತ್ರಹಿಂಸೆ ನೀಡಿದ್ದು ನೋವು ತರುವ ಸಂಗತಿ. ಹೇಗಾದರೆ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಬೇಕು ಎಂಬ ಛಲದಿಂದ, ಕಾಲನಡೆಯಲ್ಲಿ ಊರಾಚೆ, ಗಿಡದ ಕೆಳಗೆ ಶಿಕ್ಷಣ ಆರಂಭಸಿದರು. ಇದಾದ ಹತ್ತಾರೂ ಬಡ ಹೆಣ್ಣು ಮಕ್ಕಳು ಈ ತಾಯಿಯ ಶಾಲೆಗೆ ಬರಲು ಆರಂಭಿಸಿದರು. ತಳಮಟ್ಟದಿಂದ ಶಿಕ್ಷಣ ಕಟ್ಟಿದ ಅಕ್ಷರ ತಾಯಿ ಅವರು, ಅವರಿಂದಲೇ ನಮ್ಮ ಹೆಣ್ಣು ಮಕ್ಕಳು ದೇಶ್ಯಾದ್ಯಂತ ಮಿಂಚಲು ಸಾದ್ಯವಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಪಾಂಡು ಮನ್ನಿಕೇರಿ, ವಿಠ್ಠಲ್ ಪರಸಣ್ಣವರ್, ಅರವಿಂದ ಕಾರ್ಜೆ, ಶಿವು ಪಾಟೀಲ, ಮಂಜುಳಾ ರಾಮಗಾನಟ್ಟಿ, ಪ್ರವೀಣ ಗುಡ್ದಾಕಾಯು, ಪಾಂಡು ರಂಗಶುಭೇ, ಲಗಾಮಣ್ಣ ಕಳಸಣ್ಣವರ್
ಶಿವಾನಂದ ಕಮತ್ತಿ ಹಾಗೂ ಇತರರು ಇದ್ದರು.