ಬೆಳಗಾವಿ : ಸಮಾಜದಲ್ಲಿ ಹೊಸ ಬದಲಾವಣೆ ತರುವ ನಿಟ್ಟಿನಲ್ಲಿ ರಾಹುಲ್ ಅಣ್ಣಾ ಜಾರಕಿಹೊಳಿ ಅಭಿಮಾನಿ ಬಳಗ ಕಾರ್ಯವನ್ನು ಮಾಡಬೇಕು. ಬಡವರ ಪರ ಕೆಲಸಗಳನ್ನು ಈ ಬಳಗದಿಂದ ಕೈಗೊಳ್ಳಬೇಕು. ಅಂದಾಗ ಮಾತ್ರ ಸಂಘಟನೆಗೆ ಅರ್ಥ ಬರಲಿದೆ ಎಂದು ಯುವ ನಾಯಕ ರಾಹುಲ್ ಜಾರಕಿಹೊಳಿ ಹೇಳಿದರು.
ಇಲ್ಲಿನ ಮಜಗಾವಿಯಲ್ಲಿ ಭಾನುವಾರ ನೂತನ ರಾಹುಲ್ ಅಣ್ಣಾ ಜಾರಕಿಹೊಳಿ ಅಭಿಮಾನಿ ಬಳಗ ಉದ್ಘಾಟಿಸಿ ಅವರು ಮಾತನಾಡಿ, ನೂತನ ಅಭಿಮಾನಿ ಬಳಗದಿಂದ ಸಮಾಜದಲ್ಲಿ ಉತ್ತಮ ಕಾರ್ಯಗಳು ಆಗಬೇಕು. ಪ್ರತಿ ವರ್ಷ ಕ್ರೀಡೆ, ಸಾಂಸ್ಕೃತಿಕ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಹಾಗೂ ಜನರ ಸಮಸ್ಯೆಗಳಿಗೆ ಸ್ಪಂದಿಸುವಂತ ಕೆಲಸ ಆಗಬೇಕು ಎಂದರು.
ರಾಹುಲ್ ಅಭಿಮಾನಿಗಳ ಬಳಗಕ್ಕೆ ಸದಾ ನಮ್ಮ ಬೆಂಬಲ ಇರಲಿದೆ. ಬಡವರ ಪರ ಕೆಲಸ ಮಾಡುವುದರ ಜೊತೆಗೆ ಸಂಘಟನೆಯನ್ನು ಮತ್ತಷ್ಟು ಬಲಗೊಳಿಸಬೇಕು. ಜನರ ಏನೇ ಸಮಸ್ಯೆಗಳಿದ್ದರೂ ಸಹ ನಮ್ಮ ಗಮನಕ್ಕೆ ತರುವಂತ ಕೆಲಸ ಮಾಡಬೇಕು. ಬಡವರ ಸೇವೆಗೆ ನಾವು ಎಂದು ಬಾವಿಸಿ ಕೆಲಸ ಮಾಡಬೇಕು ಎಂದು ತಿಳಿಸಿದರು.
ಇದಕ್ಕೂ ಮೊದಲು ಮಜಗಾವಿಯಲ್ಲಿನ ರಾಹುಲ್ ಅಭಿಮಾನಿ ಬಳಗದಿಂದ ಪ್ರಮುಖ ಬೀದಿಗಳಲ್ಲಿ ಬೈಕ್ ಮೆರವಣಿಗೆ , ಪುಷ್ಪ ಸುರಿಮಳೆಯನ್ನೇ ಸುರಿಸಿ ರಾಹುಲ್ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಿದರು. ಬಳಿಕ ಅಲ್ಲಿನ ಕಿತ್ತೂರು ರಾಣಿ ಚನ್ನಮ್ಮ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಗೌರವ ಸಲ್ಲಿಸಿದರು.
ಪರಶುರಾಮ್ ಢಾಗೆ, ಪಾಂಡು ಗಿಡ್ಡನವರ, ಕಲ್ಲಪ್ಪ ಕಡೋಲ್ಕರ್, ಆಕಾಶ ಮೈತ್ರಿ, ಕುಶಪ್ಪ ನಾಯ್ಕ, ಬರಮಣ್ಣ ತಳವಾರ, ರಮೇಶ್ ತಳವಾರ, ವಿಜಯ ತಳವಾರ, ಮಾರುತಿ ಗುಟಗುದ್ದಿ, ರಾಹುಲ್ ಅಭಿಮಾನಿ ಬಳಗದ ಸದಸ್ಯರು, ಹಿರಿಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.