ಬೆಳಗಾವಿ : ದೇಶದಲ್ಲಿ ಕೆಲ ರಾಜ್ಯಗಳಲ್ಲಿ ಅಲ್ಪಸಂಖ್ಯಾತರು ಹಾಗೂ ದಲಿತರ ಸ್ಥಿತಿ ಶೋಚನೀಯವಾಗಿದೆ. ಸ್ವಾತಂತ್ರ್ಯ ಬಂದು 74 ವರ್ಷಗಳ ಕಳೆದರೂ ಇಂದಿಗೂ ಕುದುರೆ ಮೇಲೆ ಕುಳಿತು ಮದುವೆಯಲ್ಲಿ ಸಂಭ್ರಮಿಸುವ ಹಕ್ಕಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅಸಮಾಧಾನ ಹೊರಹಾಕಿದರು.
ಇಲ್ಲಿನ ಗಾಂಧಿಭವನದಲ್ಲಿ ಬುಧವಾರ ಅಲ್ಪಸಂಖ್ಯಾತ ಸಮಿತಿ ಆಶ್ರಯದಲ್ಲಿ ನಡೆದ ನಮ್ಮ ನಡೆ ಐಕ್ಯತೆ ಮತ್ತು ವಿಶ್ವಾಸದ ಕಡೆ ಎಂಬ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಲ್ಪ ಸಂಖ್ಯಾತರು ಕಾಂಗ್ರೆಸ್ ಪಕ್ಷದ ಬೆನ್ನೆಲುಬಾಗಿ ನಿಂತಿದ್ದಾರೆ. ನಿಮ್ಮ ಆಶೀರ್ವಾದ ಸದಾ ಹೀಗೆ ಇರಲಿ. ಅಲ್ಪಸಂಖ್ಯಾತರು, ದಲಿತರು ಅಭಿವೃದ್ಧಿಯಾಗಬೇಕಿದೆ. ನಿಮ್ಮ ಅಭಿವೃದ್ಧಿಗಾಗಿ ನಿವೆಲ್ಲರೂ ಒಗ್ಗೂಡಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಬೇಕು ಎಂದು ಹೇಳಿದರು.
ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದಂತ ಸಂವಿಧಾನದಿಂದ ನಾವೆಲ್ಲರೂ ಬೆಳೆಯಲು ಅನುಕೂಲವಾಗಿದೆ. ಇದರಿಂದಲೇ ಸಾಮಾಜಿಕವಾಗಿ ನ್ಯಾಯ ಸಿಗುತ್ತಿದೆ. ಕೆಳವರ್ಗದ ಜನಾಂಗದ ಬಗ್ಗೆ ಈಗಲೂ ಕಿಳರಿಮೆ ಇದೆ. ಅದನ್ನು ಬುಡ ಸಮೇತ ಕಿತ್ತಹಾಕಲು ಎಲ್ಲರೂ ಗಟ್ಟಿಯಾಗಬೇಕು ಎಂದು ಹೇಳಿದರು.
ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಸಿದ್ದರಾಮಯ್ಯ ಸರ್ಕಾರದಿಂದ 4 ಸಾವಿರ ಕೋಟಿ, ರೂ. ನೀಡಲಾಗಿದೆ. ಬಿಜೆಪಿಯಿಂದ ಕೇವಲ 5 ಕೋಟಿ ರೂ ನೀಡಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಾವೆಲ್ಲರೂ ಗೌರವಯುತವಾಗಿ ಇರಲು ಸಾಧ್ಯ, ನಿಮ್ಮ ಶಕ್ತಿಯನ್ನು ಗಟ್ಟಿಮಾಡಿಕೊಳ್ಳಿ ಎಂದು ಸಲಹೆ ನೀಡಿದರು
ಶಾಸಕರಾದ ಲಕ್ಷ್ಮೀ ಹೆಬ್ಬಾಳಕರ್, ಅಂಜಲಿ ನಿಂಬಾಳಕರ್, ಶಾಸಕ ರಹೀಂ ಖಾನ್ , ವಿಧಾನಪರಿಷತ್ ರಾದ ಸದಸ್ಯ ಸಿಎಂ ಇಬ್ರಾಹಿಂ, ಚನ್ನರಾಜ್ ಹಟ್ಟಿಹೊಳಿ, ಅಬ್ದುಲ್ ಜಮಾದಾರ್, ಮಾಜಿ ಶಾಸಕ ಪೀರೊಜ್ ಸೇಠ್, ರಾಜು ಸೇಠ, ಬಸೀರ್ ಅಹ್ಮದ್ , ವೀರ ಕುಮಾರ್ ಪಾಟೀಲ, ದಳವಾಯಿ ಹಾಗೂ ಇತರರು ಇದ್ದರು.