ಗೋಕಾಕ್ : ಇತ್ತೀಚೆಗೆ ಗಂಗಾವತಿಯಲ್ಲಿ ನಡೆದ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಬೆಳಗಾವಿ ಜಿಲ್ಲೆಯಿಂದ ಪ್ರತಿನಿಧಿಸಿ, ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಯುವ ನಾಯಕಿ ಪ್ರಿಯಾಂಕಾ ಜಾರಕಿಹೊಳಿ ಅವರು ಇಂದು ಚೆಕ್ ಮೂಲಕ ಧನ ಸಹಾಯ ಮಾಡಿದರು.
ಗೋಕಾಕದ ಕರಾಟೆ ಪಟುಗಳಾದ ಕಿರಣ್ ಹೊರಟ್ಟಿ ( ಪ್ರಥಮ), ಅಬ್ಬನ್ ಸಾಬ್ ಮುಲ್ಲಾ( ದ್ವಿತಿಯ), ವಿಷ್ಟು ಮಾವರ್ಕರ್ (ತೃತಿಯ) ಸ್ಥಾನ ಪಡೆದಿದ್ದಾರೆ. ಡಿ.24,25ರಂದು ಹರಿಯಾಣದಲ್ಲಿ ನಡೆಯುವ ಕರಾಟೆ ಸ್ಪರ್ಧೆಯಲ್ಲಿ ರಾಜ್ಯದಿಂದ ಪ್ರತಿನಿಧಿಸಲಿದ್ದಾರೆ.
ಯುವ ನಾಯಕಿ ಪ್ರಿಯಾಂಕಾ ಜಾರಕಿಹೊಳಿ ಅವರು ಗೋಕಾಕನ ತಮ್ಮ ಹಿಲ್ ಗಾರ್ಡನ್ ನಿವಾಸದಲ್ಲಿ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಮೂಲಕ ಶುಭಕೋರಿದರು. ಅವಕಾಶವನ್ನು ಸದುಪಯೋಗ ಪಡೆದುಕೊಂಡು ರಾಜ್ಯ, ಜಿಲ್ಲೆ, ತಾಲ್ಲೂಕಿಗೆ ಕೀರ್ತಿ ತರಬೇಕೆಂದು ತಿಳಿಸಿದರು.