ಘಟಪ್ರಭಾ: ಇಂದಿನಿಂದ ಭಾರತ ದೇಶಕ್ಕಾಗಿ ಹಿರಿಯರು ಕಂಡಂತಹ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ನಾವು ಎಲ್ಲ ಭಾರತೀಯರು ಕಾರ್ಯ ಮಾಡಬೇಕಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.
ಇಲ್ಲಿನ ಕಾಂಗ್ರೆಸ್ ಸೇವಾದಳ ಕಚೇರಿಯಲ್ಲಿ ಧ್ವಜಾರೋಹನ ಬಳಿಕ ಮಾತನಾಡಿದ ಅವರು, ಹಿರಿಯರ ತ್ಯಾಗ ಬಲಿದಾನದಿಂದ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ಭಾರತ ದೇಶ ಹೇಗಿರಬೇಕು ಎಂದು ಹಿರಿಯರು ಕಂಡಂತಹ ಕನಸನ್ನು ನನಸು ಮಾಡುವುದಾಗಿ ಎಲ್ಲ ಭಾರತೀಯರು ಕಾರ್ಯ ಮಾಡಬೇಕಾಗಿದೆ. ದೇಶದ ಜನರು ಸಮಾನತೆಯಿಂದ ಬಾಳಬೇಕು ಮತ್ತು ಅಭಿವೃದ್ಧಿ ಹೊಂದಬೇಕು ಎಂಬುದು ಹಿರಿಯರ ಆಸಯವಾಗಿತ್ತು. ಆ ನಿಟ್ಟಿನಲ್ಲಿ ನಾ.ಸು. ಹರಡಿಕರ್ ಅವರ ಕರ್ಮ ಭೂಮಿಯಲ್ಲಿ ತರಬೇತಿ ಕೇಂದ್ರ ಪ್ರಾರಂಭಿಸಿ ಭಾರತ ದೇಶದ ನೈಜ ಇತಿಹಾಸವನ್ನು ತಿಳಿಸಲು ಪ್ರಯತ್ನ ಮಾಡುತ್ತಿದ್ದೇವೆ ಎಂದರು.
ಘಟಪ್ರಭಾ ಕಾಂಗ್ರೆಸ್ ಸೇವಾದಳ ರಾಷ್ಟ್ರ ಮಟ್ಟದ ಕೇಂದ್ರವಾಗುತ್ತೆ ಎಂದ ಅವರು ಅದಷ್ಟು ಬೇಗ ಕಾರ್ಯರಂಭಿಸುತ್ತೇವೆ. ಘಟಪ್ರಭಾ ಪಟ್ಟಣ ಮುಂದಿನ ದಿನಗಳಲ್ಲಿ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತೆ ಎಂದರು