ಬೆಳಗಾವಿ : ಖಾನಾಪುರ ಕ್ಷೇತ್ರದ ಅಭಿವೃದ್ಧಿಗೆ ಶಾಸಕಿ ಅಂಜಲಿ ನಿಂಬಾಳ್ಕರ್ ಕೈಗೊಂಡಿರುವ ಸಂಘರ್ಷ ಪಾದಯಾತ್ರೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಸಾಥ್ ನೀಡಿದ್ಧಾರೆ.
ನಿನ್ನೆ ಸಂಜೆ ಖಾನಪುರದಿಂದ ಪಾದಯಾತ್ರೆಯನ್ನು ಆರಂಭಿಸಿದ ನಿಂಬಾಳ್ಕರ್ ಅವರು 40 ಕಿ.ಮೀ ನಡೆದು ಸುವರ್ಣಸೌಧ ತಲುಪಲಿದ್ದಾರೆ. ಚಳಿಗಾಲ ಅಧಿವೇಶ ಇಂದು ಆರಂಭವಾಗಲಿದ್ದು, ಪಾದಯಾತ್ರೆಯ ಮೂಲಕ ಸರ್ಕಾರ ಗಮನ ಸೆಳೆಯಲು ಶಾಸಕಿ ಮುಂದಾಗಿದ್ದಾರೆ. ಸುವರ್ಣ ಸೌಧದಲ್ಲಿ ಸರ್ಕಾರಕ್ಕೆ ಮನವಿ ಸಲ್ಲಿಸಲಿದ್ದಾರೆ.
ಇಂದು ಬೆಳಗ್ಗೆ ಸುವರ್ಣ ಸೌಧದ ಬಳಿ ಪಾದಯಾತ್ರೆ ಮೂಲಕ ಶಾಸಕಿ ಆಗಮಿಸುತ್ತಿದಂತೆ ಅವರಿಗೆ , ವಿರೋಧ ಪಕ್ಷ ನಾಯಕ ಸಿದ್ಧರಾಮಯ್ಯ, ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೋಳಿ ಅವರು ಸಾಥ್ ನೀಡಿದರು.
ಈ ಮೊದಲು ಶಾಸಕಿ ಮಾತನಾಡಿ, ಶಾಸಕಿ ಅಂಜಲಿ ನಿಂಬಾಳ್ಕರ್, ಖಾನಾಪೂರ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಈ ಹಿಂದೆ ಸರ್ಕಾರದ ಗಮನ ಸೆಳೆದಿದ್ದೆ. ಆದರೆ ಸರ್ಕಾರ ಸಮಸ್ಯೆಗೆ ಪರಿಹಾರ ನೀಡದ ಕಾರಣ ಕ್ಷೇತ್ರದ ಜನರ ಜೊತೆ ಸೇರಿ ಪ್ರತಿಭಟನೆ ನಡೆಸುತ್ತಿದ್ದೇವೆ. ಸರ್ಕಾರ ನಮ್ಮ ಬೇಡಿಕೆಗೆ ಸ್ಪಂಧಿಸದಿದ್ದರೆ ಸದನದಲ್ಲೂ ಈ ಕುರಿತು ಧ್ವನಿ ಎತ್ತುತ್ತೇನೆ. ನಮ್ಮ ಸಮಸ್ಯೆ ಬಗ್ಗೆ ಮಾತನಾಡಲು ಸದನದಲ್ಲಿ ಅವಕಾಶ ನೀಡಬೇಕು ಎಂದಿದ್ದಾರೆ.