ಅರಭಾವಿ :’ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಸಾಕಷ್ಟು ಜನಪರ ಕಾರ್ಯಗಳನ್ನು ಮಾಡಿದ್ದೇವೆ, ಆ ಹೆಮ್ಮೆ ನಮಗಿದೆ. ಆ ಕಾರ್ಯಗಳೇ ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ್ ಹಟ್ಟಿಹೊಳಿಗೆ ಶ್ರೀರಕ್ಷೆಯಾಗಲಿವೆ ‘ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.
ಅರಭಾವಿ ಮತಕ್ಷೇತ್ರದ ಮೆಳವಂಕಿ, ತಪ್ಪಸಿ ಗ್ರಾಮದಲ್ಲಿ ಬುಧವಾರ ಕಾಂಗ್ರೆಸ್ ಅಭ್ಯರ್ಥಿ ಪರ ಮನೆ ಮನೆಗೆ ತೆರಳಿ ಮತಯಾಚನೆ ನಡೆಸಿ, ಮಾತನಾಡಿದರು.
” ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರದಲ್ಲಿ ರಸ್ತೆ, ಕೆರೆ ತುಂಬಿಸುವ ಕಾರ್ಯ, ಕೃಷಿ ಹೊಂಡ, ಶಾಲೆ ಅಭಿವೃದ್ಧಿ ಸೇರಿದಂತೆ ಅನೇಕ ಕಾರ್ಯಕ್ರಮಗಳು ಮಾಡಲಾಗಿದೆ. ಅದೇ ರೀತಿ ಮನಮೋಹನ್ ಸಿಂಗ್ ಕಾಲಾವಧಿಯಲ್ಲಿಯೂ ಕೇಂದ್ರ ಸರ್ಕಾರದಿಂದ ಅನೇಕ ಕೆಲಸಗಳನ್ನು ಮಾಡಿದೆ. ಅವುಗಳೇ ನಮಗೆ ಶ್ರೀರಕ್ಷೆ” ಎಂದಿದ್ದಾರೆ.
” ಡಿ.10ರಂದು ಜರುಗುವ ವಿಧಾನಪರಿಷತ್ ಚುನಾವಣೆಗೆ ಸ್ಥಳೀಯ ಸಂಸ್ಥೆಗಳ ಸದಸ್ಯರ ಮೂಲಕ ಆಯ್ಕೆಯಾಗುವ ಚುನಾವಣೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ್ ಹಟ್ಟಿಹೊಳಿ ಪರವಾಗಿ ಮತ ನೀಡಿ ಎಂದು ವಿನಂತಿ ಮಾಡಿಕೊಳ್ಳಲು ಬಂದಿದ್ದೇನೆ ” ಎಂದರು.
” ಬೆಳಗಾವಿ ಜಿಲ್ಲೆ ದೊಡ್ಡದಾಗಿರುವುದರಿಂದ ಚನ್ನರಾಜ್ ಹಟ್ಟಿಹೊಳಿರವರು ಎಲ್ಲ ಕಡೆ ತೆರಳಲು ಆಗುವುದಿಲ್ಲ. ಆದ ಕಾರಣ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರು ಗ್ರಾಮ ಪಂಚಾಯ್ತಿಗೆ ಮತ ಕೇಳಲು ಬರುತ್ತಿದ್ದಾರೆ. ಬೆಳಗಾವಿಯಿಂದ ಇಬ್ಬರು ಆಯ್ಕೆಯಾಗಲಿದ್ದಾರೆ. ಕಾಂಗ್ರೆಸ್ ಗೂ ಮತ ನೀಡಲು ಅವಕಾಶ ಇದೆ. ಕೈ ಅಭ್ಯರ್ಥಿಗೆ ಒಂದು ಮತ ನೀಡಿ” ಎಂದು ಹೇಳಿದರು.
CKNEWSKANNADA / BRASTACHARDARSHAN CK NEWS KANNADA