ಗೋಕಾಕ: ಗೋವಾದಲ್ಲಿ ಡಿಸೆಂಬರ್ 2 ರಿಂದ 5 ರವರೆಗೆ ನಡೆದಂತಹ ಕರಾಟೆ ಪಂದ್ಯಾವಳಿಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಕೆಪಿಸಿಸಿ ಕಾರ್ಯಾಧಕ್ಷ ಸತೀಶ್ ಜಾರಕಿಹೊಳಿ ಹಾಗೂ ಯುವ ನಾಯಕಿ ಪ್ರೀಯಾಂಕ ಜಾರಕಿಹೊಳಿ ಅವರು ಅಭಿನಂದಿಸಿ, ಹರ್ಷ ವ್ಯಕ್ತಪಡಿಸಿದರು.
ಕಿರಿಯ ಹಾಗೂ ಹಿರಿಯ ರಾಷ್ಟ್ರೀಯ ಟಾಂಗ್ ಇಲ್ ಮೂ ಡು ಪೆಡರೆಶನ್ ಆಪ್ ಇಂಡಿಯಾ ಅವರು ಏರ್ಪಡಿಸಲಾಗಿದ್ದ ರಾಷ್ಟ್ರೀಯ ಕರಾಟೆ ಪಂದ್ಯಾವಳಿಯಲ್ಲಿ ಬುಡೊಬಾಸ್ ಇಂಟರ್ ನ್ಯಾಶನಲ್ ಕರಾಟೆ ಡು ಅಕಾಡೆಮಿ ಗೋಕಾಕ ಅವರು 14 ರಾಜ್ಯಗಳಲ್ಲಿ ಕರ್ನಾಟಕ ರಾಜ್ಯವು ಮೊದಲನೆ ಸ್ಥಾನ ಪಡೆದಿದೆ.
ಈ ಪಂದ್ಯದಲ್ಲಿ 21 ಬಂಗಾರದ ಪದಕ ಹಾಗೂ 09 ಬೆಳ್ಳಿಯ ಪದಕಗಳು ,5 ಕಂಚುಗಳು , ಒಂದು ಚಾಂಪಿಯನ್ ಟ್ರೋಫಿ ಪಡೆದು ನಮ್ಮ ನಾಡಿಗೆ ಕೀರ್ತಿ ತಂದಿದ್ದಾರೆ ಈ ವಿದ್ಯಾರ್ಥಿಗಳಿಗೆ ಕೆಪಿಸಿಸಿ ಕಾರ್ಯಾಧಕ್ಷರು ಸತೀಶ್ ಜಾರಕಿಹೊಳಿ ಹಾಗೂ ಯುವ ನಾಯಕಿ ಪ್ರೀಯಾಂಕ ಜಾರಕಿಹೊಳಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ತರಬೇತಿಗಾರರಾದ ದುರ್ಯೋಧನ ಕಡಕೋಳ ಹಾಗೂ ಪ್ರಜ್ವಲ ನಾಯಕ, ಓಂಕಾರ ದಂಡಾಪುರ, ಮಹೇಶ್ ಜೊತೆನವರ ಶಿವರಂಜಿನಿ ಕೌಜಲಗಿ, ವಿದ್ಯಾ ತೊಂಡಿಕಟ್ಟಿ ಹಾಗೂ ಅನೇಕ ಪೋಷಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.