ಬೆಳಗಾವಿ: ಸಾಲದ ಬಾದೆ ತಾಳಲಾದರೆ ಆತ್ಮಹತ್ಯೆಗೆ ಶರಣಾದ ದಕ್ಷಿಣ ಮತಕ್ಷೇತ್ರದ ವಡಗಾಂವ ನೇಕಾರ ಸಮಾಜದ ನಾಲ್ವರು ಮೃತ ಕುಟುಂಬಸ್ಥರ ಮನೆಗೆ ಇತ್ತೀಚೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಭೇಟಿ ನೀಡಿ, ನೊಂದ ಕುಟುಂಬಕ್ಕೆ ಸ್ವಾಂತನ ಹೇಳಿದರು.
ನೊಂದ ಕುಟುಂಬಸ್ಥರಿಗೆ ಧೈರ್ಯ ತುಂಬುವ ಮೂಲಕ, ಸೌಲಭ್ಯ ಹಾಗೂ ಪರಿಹಾರ ನೀಡುವುದಾಗಿ ಭರವಸೆ ನೀಡಿದರು. ಈ ಹಿನ್ನೆಲೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಸೂಚನೆ ಮೇರಿಗೆ ನೇಕಾರ ಸಮಾಜ ನಾಲ್ವರು ಮೃತ ಕುಟುಂಬಸ್ಥರ ಮನೆಗೆ ಯುವ ನಾಯಕ ರಾಹುಲ್ ಜಾರಕಿಹೊಳಿ ಇಂದು( ಸೋಮವಾರ) ಭೇಟಿ ನೀಡಿ, ತಲಾ ಒಂದು ಲಕ್ಷ ರೂ. ಪರಿಹಾರ ನೀಡಿ, ಕುಟುಂಬಸ್ಥರಿಗೆ ಧೈರ್ಯ ತುಂಬಿಸಿದ್ದಾರೆ.
ನೇಕಾರ ಸಮಾಜದ ಪಾಂಡುರಂಗ ಉಪ್ಪರಿ, ಗಣಪತ ಭುಚಡಿ, ಗಣಪತ ಸಂಗನ್ನವರ, ಗಣಪತ ಭಂಡಾರಿ ಕುಟುಂಬಸ್ಥರಿಗೆ ಪರಿಹಾರ ನೀಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಎಂ ಜಿ, ಮಲ್ಲಗೌಡ ಪಾಟೀಲ್ ,ಪರಶುರಾಮ್ ಡಗೆ, ನಗರ ಸೇವಕ ರಘು ಡೋಕರೆ, ಜ್ಯೋತಿಭಾ ಗುಟ್ಟೆನ್ನವರ ಹಾಗೂ ಇತರರು ಇದ್ದರು.