ಯಮಕನಮರಡಿ: ” ಸೇವಾದಳ ಎಂದರೆ ಶಿಸ್ತಿಗೆ ಹೆಸರುವಾಸಿಯಾದುದು.ಈ ಸಂಘಟನೆಗೆ ಬಲ ತುಂಬಬೇಕಾಗಿದೆ. ಮಹಾತ್ಮಾ ಗಾಂಧಿಜೀ ತ್ಯಾಗ, ಬಲಿದಾನಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕಿದೆ. ಅವರು ದೇಶಕ್ಕೆ ನೀಡಿರುವ ಕೊಡುಗೆಗಳನ್ನು ಯುವ ಪೀಳಿಗೆಗೆ ತಿಳಿಸಬೇಕಾಗಿದೆ. ಈ ಸಂಘಟನೆಯನ್ನು ಹೆಮ್ಮರವಾಗಿ ಬೆಳೆಸಿದಾಗ ಮಾತ್ರ ಇವೆಲ್ಲವೂ ಸಾಧ್ಯ” ಎಂದು ಯುವ ನಾಯಕಿ ಪ್ರಿಯಾಂಕಾ ಜಾರಕಿಹೊಳಿ ಅವರು ಹೇಳಿದರು.
ಯಮಕನಮರಡಿ ಮತಕ್ಷೇತ್ರದ ಪಾಶ್ಚಾಪೂರ ಗ್ರಾಮದ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಇಂದು ಹಮ್ಮಿಕೊಂಡಿದ್ದ, ಕಾಂಗ್ರೆಸ್ ಸೇವಾದಳ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಯುವ ನಾಯಕಿ ಪ್ರಿಯಂಕಾ ಜಾರಕಿಹೊಳಿ ಅವರು ಮಾತನಾಡಿದರು.
ಕಾಂಗ್ರೆಸ್ ತತ್ವ ಸಿದ್ಧಾಂತ ಎಲ್ಲರೂ ಪಾಲಿಸೋಣ: ಈಗಾಗಲೇ ಘಟಪ್ರಭಾದಲ್ಲಿ ಸೇವಾದಳದ ತರಬೇತಿ ನೀಡಲಾಗುತ್ತಿದೆ. ಕಾರ್ಯಕರ್ತರು ತಪ್ಪದೇ ಸಂಘಟನೆಯಲ್ಲಿ ಭಾಗಿಯಾಗಬೇಕು. ಸಮಾಜ ಸೇವೆಗಾಗಿ ಸೇವಾದಳವನ್ನು ಬೆಳೆಸಬೇಕು. ಸಮಾಜ ಬದಲಾದರೆ ಇಡೀ ದೇಶವೇ ಬದಲಾದಂತೆ, ಅದಕ್ಕಾಗಿ ನಾವೆಲ್ಲರೂ ಹಗಳಿರುಳು ಶ್ರಮಿಸದರೆ ಮಾತ್ರ ಇವೆಲ್ಲವೂ ಸಾಕಾರಗೊಳ್ಳಲಿವೆ ಎಂದರು.
ಈ ಸಂಘಟನೆಯಲ್ಲಿ ಎಲ್ಲಾ ಕಾರ್ಯಕರ್ತರಿಗೆ ಸೌಲಭ್ಯಗಳನ್ನು ಕಲ್ಪಿಸಿ ಕೊಡಲಾಗಿದೆ. ಅವುಗಳನ್ನು ಸದುಪಯೋಗ ಪಡೆದುಕೊಂಡು, ಸಂಘಟನೆ ಕಟ್ಟಲು ಬೆಂಬಲ ಸೂಚಿಸಬೇಕೆಂದರು. ಸ್ವಾತಂತ್ರ್ಯ ಪೂರ್ವದಲ್ಲಿ ಮಹಾತ್ಮಾ ಗಾಂಧಿಜೀ ಅವರು ಅನೇಕ ಹೋರಾಟ, ಉಪ್ಪಿನ ಸತ್ಯಾಗ್ರಹ ಮಾಡಿದ್ದಾರೆ. ಅವರ ತ್ಯಾಗ ಫಲವೇ ದೇಶದಲ್ಲಿ ನಾವಿಂದೂ ಸ್ವತಂತ್ರ್ಯವಾಗಿದ್ದೆವೆ ಎಂದರು.
ಮೊದಲಿಗೆ ಹಳ್ಳಿಗಳಲ್ಲಿ ಸಂಘಟನೆಯನ್ನು ಕಟ್ಟಿ, ದೇಶದ ಉದ್ದಕ್ಕೂ ಗಟ್ಟಿಗೊಳ್ಳಿಸಿಕೊಳ್ಳಬೇಕಾಗಿದೆ. ಪ್ರತಿ ತಿಂಗಳು ಸೇವಾದಳದಿಂದ ಮಹತ್ವದ ಕಾರ್ಯಗಳು ನಡೆಯಲಿ ಎಂದರು.
ಈ ಸಂದರ್ಭದಲ್ಲಿ ಚಿಕ್ಕೋಡಿ ವಲಯ ಕಾಂಗ್ರೆಸ್ ಸೇವಾದಳ ಅಧ್ಯಕ್ಷೆ ವಂದನಾ ಬಸನಾಯ್ಕ, ಪಾಶ್ಚಾಪುರ ಕಾಂಗ್ರೆಸ್ ಅಧ್ಯಕ್ಷೆ ಕಮಲವ್ವ ಬಸನಾಯ್ಕ, ಜಮಖಂಡಿ ಕಾಂಗ್ರೆಸ್ ಅಧ್ಯಕ್ಷೆ ಶೋಭಾ ನವಲಗುಂದ, ಮಾಹದೇವಿ ಮರೆಣ್ಣವರ್, ಗೌರವ ಸನದಿ, ನೀಲವ್ವ ಕುಡಜೋಗಿ , ತಾಲ್ಲೂಕಿನ ಪಂಚಾಯಿತಿ ಸದಸ್ಯರು ಹಾಗೂ ಇತರರು ಇದ್ದರು.