ಬೆಳಗಾವಿ : ಪೋಷಕರು ಪಟ್ಟ ಕಷ್ಟ ಮತ್ತು ಕಂಡ ಕನಸಿಗೆ ವಿದ್ಯಾರ್ಥಿಗಳು ಬೆಲೆ ಬರುವಂತೆ ನಡೆದುಕೊಳ್ಳಬೇಕು. ತಮ್ಮ ಮೇಲೆ ಹೆಚ್ಚಿನ ಜವಾಬ್ದಾರಿ ಇರಲಿದೆ ಎಂದು ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.
ಇಲ್ಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಪಿಎಚ್ ಡಿ ಪದವೀಧರರು ಮತ್ತು ರ್ಯಾಂಕ್ ವಿಜೇತರಿಗೆ ಪ್ರಮಾಣ ಪತ್ರಗ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಕಷ್ಟಪಟ್ಟು ಪಡೆದಂತ ರ್ಯಾಂಕ್, ಪದವಿ ಸಮಾಜವನ್ನು ಸದೃಢವಾಗಿ ಕಟ್ಟಲು ಸದುಪಯೋಗಬಾಗಲಿ. ಸಾಮಾಜಿಕ ಜವಾಬ್ದಾರಿ ಎಲ್ಲಕ್ಕಿಂತಲೂ ದೊಡ್ಡದು. ಆದ ಕಾರಣ ಡಾಕ್ಟರೇಟ್, ರ್ಯಾಂಕ್ ಪಡೆದವರ ಮೇಲೆ ಹಚ್ಚಿನ ಜವಾಬ್ದಾರಿ ಇರಲಿದೆ ಎಂದು ತಿಳಿಸಿದರು.
ವಿದ್ಯಾವಂತರು ಬುದ್ಧ, ಬಸವಣ್ಣ, ಅಂಬೇಡ್ಕರ್ ಅವರ ಹೋರಾಟದ ಆಶಯಗಳನ್ನು ಅಳವಡಿಸಿಕೊಳ್ಳಬೇಕು. ತಾವು ದುಡಿದ ಹಣದ ಒಂದು ಭಾಗವನ್ನು ಸಮಾಜಕ್ಕಾಗಿಯೇ ಮಿಸಲು ಇಡಬೇಕು. ಇದರಿಂದ ಸಮಾಜಕ್ಕೆ ನಮ್ಮದೆಯಾದ ಸೇವೆ ನೀಡಿದಂತಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಕುಲಸಚಿವ ಡಾ.ಬಸವರಾಜ ಪದ್ಮಶಾಲಿ, ಸಿಡಿಕೇಟ್ ಸದಸ್ಯ ಆನಂದ ಹೊಸೂರು, ಅನಿಲ ದೇಸಾಯಿ, ಶ್ರೀನಿವಾಸ ಶಾಸ್ತ್ರಿ, ನದಾಫ ಕುಲಪತಿ ವಿಶೇಷಾಧಿಕಾರಿ ಡಾ.ಎಂ.ಜಯಪ್ಪ, ಡಾ.ರಾಜಪ್ಪ ದಳವಾಯಿ, ಡಾ.ಎಸ್.ಎಂ.ಗಂಗಾಧರಯ್ಯ ಸೇರಿದಂತೆ ಇತರರು ಇದ್ದರು.
ಮೌಲ್ಯಮಾಪನ ಕುಲಸಚಿವ ಡಾ.ಎಸ್.ಎಂ.ಹುರಕಡ್ಲಿ ಸ್ವಾಗತಿಸಿದರು. ಹಣಕಾಸು ಅಧಿಕಾರಿ ಡಾ.ಡಿ.ಎನ್.ಪಾಟೀಲ ಪ್ರಸ್ತಾವಿಕ ಮಾತನಾಡಿದರು. ಡಾ.ಎಂ.ಗದಿಗೆಪ್ಪಗೌಡರ ,ರಶ್ಮಿ ನಿರೂಪಿಸಿದರು. ಡಾ.ನಂದಿನಿ ವಂದಿಸಿದರು.