ಯಮಕನಮರಡಿ : ಮೊದಲಿನಿಂದಲೂ ಕ್ರೀಡೆ, ಶಿಕ್ಷಣಕ್ಕೆ ತಂದೆಯವರ ಹೆಚ್ಚು ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಅವರ ಮಾರ್ಗದರ್ಶನದಲ್ಲಿಯೇ ನಾನು ಕೂಡಾ ಕ್ರೀಡೆಗೆ ಪ್ರಾಮುಖ್ಯತೆ ನೀಡುತ್ತೇನೆ ಎಂದು ಯುವ ಕಾಂಗ್ರೆಸ್ ನಾಯಕ ರಾಹುಲ್ ಜಾರಕಿಹೊಳಿ ಹೇಳಿದರು.
ಯಮಕನಮರಡಿ ಕ್ಷೇತ್ರದ ದಡ್ಡಿ ಗ್ರಾಮದಲ್ಲಿ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿಯ ಫೈನಲ್ ಪಂದ್ಯ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ಮಾತನಾಡಿದರು.
ಮಕ್ಕಳು ಕೇವಲ ಶಾಲೆಗೆ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಲು ಸೀಮಿತಗೊಳಿಸದೇ ರಾಜ್ಯ, ರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು. ಕ್ರೀಡೆಯಲ್ಲಿ ಎಲ್ಲರೂ ಗೆಲ್ಲಲ್ಲೂ ಸಾಧ್ಯವಿಲ್ಲ. ಸೋಲು ಯಾವುದೇ ಕಾರಣಕ್ಕೂ ನಿರಾಶೆ ಉಂಟು ಮಾಡಬಾರದು. ಛಲ ಹುಟ್ಟಿಸಬೇಕು ಎಂದರು.
ಮನುಷ್ಯನ ದೇಹ ಮತ್ತು ಮನಸ್ಸಿನ ಸಮತೋಲನ ಸಾಧಿಸುವಲ್ಲಿ ಕ್ರೀಡೆಯ ಪ್ರಾಮುಖ್ಯ ಬಹಳಷ್ಟಿದೆ. ವಿದ್ಯಾರ್ಥಿಗಳು ಶಾಲಾ ಹಂತದಲ್ಲಿಯೇ ಏಕಾಗ್ರತೆ, ಶಿಸ್ತು, ಸಮಯ ಪ್ರಜ್ಞೆ ಅಳವಡಿಸಿಕೊಂಡಾಗ ಮಾತ್ರ ಭವಿಷ್ಯದ ಜೀವನ ಯಶಸ್ವಿಯಾಗುತ್ತದೆ ಎಂದು ಹೇಳಿದರು.
ಕೊರೊನಾ ಬಂದ ಸಂದರ್ಭದಲ್ಲಿ ಯಾವುದೇ ಕ್ರೀಡೆಗಳು ನಡೆದಿರಲಿಲ್ಲ. ಆದರೆ ಈಗ ಕೊರೊನ ಕ್ರಮೇಣ ಕಡಿಮೆಯಾಗುತ್ತಿದೆ. ಮತ್ತೆ ಪಂದ್ಯಾವಳಿ ಆಯೋಜನೆಗಳು ಹೆಚ್ಚಾಗಬೇಕು. ಇದರಿಂದ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಿದಂತೆ ಆಗುತ್ತದೆ. ಕ್ರೀಡೆಯಲ್ಲಿ ಸೋಲು, ಗೆಲುವು ಸಾಮಾನ್ಯ ಆದರೆ, ಭಾಗವಹಿಸುವುದು ಮುಖ್ಯ ಎಂದು ಕಿವಿಮಾತು ಹೇಳಿದರು.
ಕಿರಣ ರಜಪೂತ, ವಿಷ್ಣು ರಡೆಕರ, ದಯಾನಂದ ಪಾಟೀಲ, ಮುನಿರುದ್ದೀನ ಶೇಖ, ಪ್ರಮೋದ ರಘಶಟ್ಟಿ, ಗಜಾನನ , ಭರಮು, ಪ್ರಶಾಂತ ಮುನ್ನೊಳಿ, ನಾಗೇಶ ನಾಯಿಕ, ಅಕ್ಕಾತಾಯಿ ಮನಗುತ್ತಿಕರ, ಅಪ್ಪು ಸುತ್ತಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.