Breaking News

ವಿಧ್ಯೆಯಿಂದ ಮನುಷ್ಯನ ಭವಿಷ್ಯ  ಬದಲಾವಣೆ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ


ಮೈಸೂರು: ” ನೂತನ ಶಿಕ್ಷಣ ನೀತಿ ಜಾರಿಗೊಂಡರೆ ಹಿಂದುಳಿದವರು ವಾಪಸ್ ಕಾಡಿಗೆ ಹೋಗುವ ಅನಿರ್ವಾತೆ ಎದುರಾಗಿ,  ಸಾವಿರಾರು ವರ್ಷಗಳಷ್ಟು  ನಾವು..ನೀವು .. ಹಿಂದಕ್ಕೆ ಸರಿಯಬೇಕಾದ ಸ್ಥಿತಿ ನಿರ್ಮಾಣವಾಗುವಲ್ಲಿ ಯಾವ ಸಂದೇಹವಿಲ್ಲ” ಎಂದು  ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಎಚ್ಚರಿಕೆ ನೀಡಿದರು.

ನಗರದ ಮಾನವ ಬಂಧುತ್ವ ವೇದಿಕೆ ವತಿಯಿಂದ  ಇಂದು  ಎಂಜಿನಿಯರುಗಳ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ‘ ಹೊಸ ಶಿಕ್ಷಣ ನೀತಿ ಮತ್ತು ಪಠ್ಯ ತಿರುಚುವಿಕೆಯ ರಾಜಕಾರಣ’  ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ದಲಿತರು ಮುಂದಕ್ಕೆ ಹೋಗುವ ಭಯವಿದೇ ಇವರಿಗೆ:”  ಎರಡು ಸಾವಿರ ವರ್ಷಗಳ ಹಿಂದೆ ನಾವು ಶಿಕ್ಷಣದಿಂದ ವಂಚಿತರಾಗಿದ್ದೆವು. ಡಾ. ಬಿ ಆರ್.ಬೇಡ್ಕರ್ ಹೋರಾಟ ಫಲವಾಗಿ ಶಿಕ್ಷಣ ಪಡೆದೆವು. ದೇಶದಲ್ಲಿ ಹಿಂದುಳಿದ ಜನಾಂಗ ಈ ಶತಮಾನದಲ್ಲಿ ಬೆಳಕಿಗೆ ಬರಲು ಸಾಧ್ಯವಾಗಿದೆ.   ದಲಿತರು ಮುಂದುವರಿಯುತ್ತಾರೆ ಎನ್ನುವ ಭಯದಿಂದ ಈ ನೀತಿ ಜಾರಿಗೊಳಿಸಲಾಗಿದೆ ” ಎಂದು  ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ  ಅವರು ಅಸಮಾದಾನ ಹೋರಹಾಕಿದರು.

ಹೊಸ ಶಿಕ್ಷಣ ನೀತಿಯಲ್ಲಿ ಹುನ್ನಾರ ಅಡಗಿದೆ:  ರೈತ ಚಳವಳಿ ಸರ್ಕಾರಕ್ಕೆ ಅಂಕುಶ ಹಾಕಿದೆ. ಶಿಕ್ಷಣ ನೀತಿ ವಿಚಾರದಲ್ಲೂ ಇದೇ ಬಗೆಯ ಜನಾಭಿಪ್ರಾಯ ಮೂಡಬೇಕು ಎಂದು ಹೇಳಿದರು. ಶಿಕ್ಷಣದಲ್ಲಿ ಹೊಸ ಹೊಸ ಪಠ್ಯ ಸೇರಿಸುವ ಹುನ್ನಾರ ಅಡಗಿದೆ. ಈ ಯೋಜನೆಗಳು ಯಶಸ್ವಿಯಾಗುದಿಲ್ಲ, ಜನವಿರೋಧಿ ನೀತಿಯಗಳನ್ನು ಭಾರತೀಯರು ಸ್ವೀಕಾರ ಮಾಡುವುದಿಲ್ಲ. ಈ ಬಗೆಯ ಜಾಗೃತಿ ಕಾರ್ಯಕ್ರಮಗಳನ್ನು ಮೈಸೂರಿನಲ್ಲಿ ಮುಂದುವರಿಸಬೇಕು. ಪ್ರತಿಭಟನೆಗಳನ್ನು ರೂಪಿಸಬೇಕು ಎಂದು ಕರೆ ನೀಡಿದರು.

ವಿಧ್ಯೆಯಿಂದ ಮನುಷ್ಯನ ಭವಿಷ್ಯ  ಬದಲಾವಣೆ:- ” ಮೂಡನಂಬಿಕೆ ವಿರೋಧವಾಗಿ ಮಾನವ ಬಂಧುತ್ವ ವೇದಿಕೆ ರಾಜ್ಯಾದ್ಯಂತ ಜನರಲ್ಲಿ  ಜಾಗೃತ ಮೂಡಿಸುವ ಕೆಲಸಗಳನ್ನು ಮಾಡುತ್ತಿದೆ.  ವಿದ್ಯೆಯಿಂದ ಮನುಷ್ಯನ ಭವಿಷ್ಯ  ಬದಲಾಗುತ್ತದೆ ಹೊರತು ಭವಿಷ್ಯ ನುಡಿಯುವ ಜೋತೀಷ್ಯಗಳಿಂದ ಅಲ್ಲ. ಸಾಕಷ್ಟು ಶಿಕ್ಷಣ ಪಡೆದವರು ಮೂಡನಂಬಿಕೆ ಮಾರುಹೋಗುತ್ತಿದ್ದಾರೆ. ಆ ಕೆಲಸಗಳು  ಆಗಬಾರದು, ಜೀವನಲ್ಲಿ ನಂಬಿಕೆ ಇರಲಿ.  ಈ ಕಂದಾಚಾರದ ಮಾತುಗಳಿಂದ ಜನ ಮೂಡನಂಬಿಕೆ ವಾಲುತ್ತಿದ್ದಾರೆ ”  ಹಾಗಾಗಿ ಜನರು ಮೌಡ್ಯದಿಂದ ಹೊರಬಂದಾಗ  ಮಾತ್ರ ಆರೋಗ್ಯಕರ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ” ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ತಿಳಿ ಹೇಳಿದರು.

ನಿವೃತ್ತ ನ್ಯಾಯಮೂರ್ತಿ ನಾಗಮೋಹನ ದಾಸ್ ಅವರು ಮಾತನಾಡಿ,  ಹೊಸ ಶಿಕ್ಷಣ ನೀತಿ ಮೇಲುನೋಟಕ್ಕೆ ಚೆನ್ನಾಗಿದೆ. ಬಹಳ ಚೆನ್ನಾಗಿ ಕಾಣಿಸುತ್ತದೆ. ಇದು ಸಕ್ಕರೆ ಲೇಪಿತ ಮಾತ್ರೆಯಂತೆ. ಮೊದಲು ಸಿಹಿ ನಂತರ ಕಹಿಯಾಗುತ್ತದೆ ಎಂದು ಹೇಳಿದರು.

ವಿದ್ಯಾವಂತರು ನಿರುದ್ಯೋಗಿಗಳಾಗುತ್ತಿದ್ದಾರೆ. ಬಹುದೊಡ್ಡ ಸುಧಾರಣೆ ಬೇಕಿದೆ ನಿಜ. ಆದರೆ,  ಅದು ಹೊಸ ಶಿಕ್ಷಣ ನೀತಿಯಂತಿರಬಾರದು ಎಂದರು.   ಬಲವಂತವಾಗಿ ಶಿಕ್ಷಣ ನೀತಿ ಹೇರುವ ಅಧಿಕಾರ ಕೇಂದ್ರಕ್ಕೆ ಇಲ್ಲ. ಸಂವಿಧಾನ ವಿರೋಧಿ ನೀತಿಯನ್ನು ರಾಜ್ಯಗಳ ಮೇಲೆ ಹೇರುವುದು ಒಕ್ಕೂಟ ವ್ಯವಸ್ಥೆಗೆ ಬಲವಾದ ಪೆಟ್ಟು ನೀಡುತ್ತದೆ  ಇದು ಪ್ರಜಾಪ್ರಭುತ್ವ ವಿರೋಧಿ ಧೋರಣೆ ಎಂದು ಹೇಳಿದರು.

 

ಶಿಕ್ಷಣವನ್ನು ಅಂಗಡಿಯಲ್ಲಿ ಮಾರಾಟ ಮಾಡಲಾಗುತ್ತಿದೆ. ಶಿಕ್ಷಣಕ್ಕೆ ಸಂಬಂಧಿಸಿದ ಅಧಿಕಾರವನ್ನು ಕೇಂದ್ರೀಕೃತಗೊಳಿಸಲಾಗುತ್ತಿದೆ‌. ಹೊಸನೀತಿಯಲ್ಲಿ ವ್ಯಾಪಾರೀಕರಣಕ್ಕೆ ಅವಕಾಶ ಇದ್ದು,  ಹಣ ಇದ್ದವರಿಗಷ್ಟೇ ಶಿಕ್ಷಣ ಎನ್ನುವಂತಾಗಿದೆ. ಖಾಸಗಿ ಅವರು ಶಿಕ್ಷಣ ಕೊಡುವುದು ಸ್ವಾಗತ.   ಆದರೆ, ಶಿಕ್ಷಣ ಕ್ಷೇತ್ರವನ್ನು ಖಾಸಗೀಕರಣ ಮಾಡುವುದು ಸರಿಯಲ್ಲ ಎಂದು ಟೀಕಿಸಿದರು.

ಈ ಸಂದರ್ಭದಲ್ಲಿ  ಸಾಹಿತಿ ಪ್ರೊ ಎಸ್ ಜಿ. ಸಿದ್ಧರಾಮಯ್ಯ,  ಮಾಜಿ ಸಂಸದ ಆರ್ ಧ್ರುವ ನಾರಾಯಣ್ , ಕೃಷ್ಣಮೂರ್ತಿ  ಎಂ,  ಮಾನವ ಬಂಧುತ್ವ ವೇದಿಕೆ ಮೈಸೂರು ವೀಭಾಗೀಯ ಸಂಚಾಲಕರಾದ  ಡಾ. ಲೀಲಾ ಸಂಪಿಗೆ  ಹಾಗೂ ಇತರರು ಇದ್ದರು.


About cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

Check Also

ಶಿಗ್ಗಾವಿಯಲ್ಲಿ ಕಾಂಗ್ರೆಸ್ ಗೆದ್ದರು, ಮೈ ಮರೆಯದ ಸಂಘಟನೆಗಳು: ಹಳ್ಳಿಗಳಿಗೆ ತೆರಳಿ ಮತದಾರರಿಗೆ ಕೃತಜ್ಞತೆ

ಹಾವೇರಿ: ಶಿಗ್ಗಾವಿ-ಸವಣೂರು ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ‌ಅಭ್ಯರ್ಥಿ ಲಕ್ಷಕ್ಕೂ ಅಧಿಕ‌ ಮತಗಳನ್ನು ಪಡೆದು ಶಾಸಕರಾಗಿ ಆಯ್ಕೆಯಾಗಿದ್ದರೂ, ಸಂಘಟನೆಗಳು ಮಾತ್ರ ಮೈ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ