ಬೆಳಗಾವಿ : ‘ಬಸವಣ್ಣನವರ ವಿಚಾರಗಳನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ಯಬೇಕಾದ್ರೆ ಅವರ ದಾರಿಯಲ್ಲಿಯೇ ನಾವೆಲ್ಲರೂ ಸಾಗಬೇಕು. ಅವರ ವಿಚಾರಗಳನ್ನು ಗುರು ಬಸವಾಶ್ರಮದಿಂದ ಸಮಾಜಕ್ಕೆ ಹೇಳುವಂತ ಕೆಲಸ ಆಗಬೇಕು’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.
ಇಲ್ಲಿನ ಶಿವಬಸವ ನಗರದಲ್ಲಿ ಇಂದು ಚೆನ್ನಬಸವ ಫೌಂಡೇಶನ್ ದಿಂದ ಲಿಂಗೈಕ್ಯ ಶರಣ ದಂಪತಿ ಶಿವಬಾಯವ್ವ ಮತ್ತು ಬಸವಣ್ಣೆಪ್ಪ ಗುಡಸ ಇವರ ಸ್ಮರಣಾರ್ಥ ನೂತನವಾಗಿ ನಿರ್ಮಿಸಿದ ಗುರು ಬಸವಾಶ್ರಮ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
‘ ಕ್ರಾಂತಿ ಯೋಗಿ ಬಸವಣ್ಣನವರು ಅಂದು ಮಾಡಿದಂತ ಲಿಂಗಾಯತ ಧರ್ಮ ಇಂದಿಗೂ ಸಹ ಶ್ರೇಷ್ಠ. ಇದನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ಯುವ ಕೆಲಸಗಳು ಆಶ್ರಮದಿಂದಲೇ ನಡೆಯಬೇಕು. ಅವರು ಅಸ್ತಿತ್ವ ನೀಡಿದರಿಂದಲೇ ಇಂದು ಲಿಂಗಾಯತರು ಉದ್ಯಮಿಗಳಾಗಿದ್ದಿರಿ, ಸಮಾಜದಲ್ಲಿ ಸಂಘ ಸಂಸ್ಥೆಗಳು ಕಟ್ಟಿದ್ದಿರಿ’ ಎಂದು ಹೇಳಿದರು.
‘ಈ ದೇಶದಲ್ಲಿ ಇತಿಹಾಸವನ್ನು ತಿರುಚುವಂತ ವ್ಯವಸ್ಥೆ ಹೆಚ್ಚಿದೆ. ಅದಕ್ಕಾಗಿ ಬಸವಣ್ಣವರು ಸಂಘರ್ಷ ಮಾಡಿದರು, 12 ಶತಮಾನದಲ್ಲಿ ಕ್ರಾಂತಿ ಆಗಿ ಸಾಕಷ್ಟು ಶರಣರ ಹತ್ಯೆಯಾಯಿತು. ಲಕ್ಷಾಂತರ ಜನರು ಬಸವ ಕಲ್ಯಾಣದಿಂದ ತಮ್ಮ ವಚನ ಸಾಹಿತ್ಯ ಇಟ್ಟುಕೊಂಡು ಅವರಿಗೆ ಎಲ್ಲಿ ಆಶ್ರಯ ಸಿಗುತ್ತೋ ಅಲ್ಲಿಗೆ ಹೋದರು ಎಂದು ಸತೀಶ್ ಜಾರಕಿಹೊಳಿಯವರು ಇತಿಹಾಸ ತಿಳಿಸುವ ಪ್ರಯತ್ನವನ್ನು ಮಾಡಿದರು.
‘ ಬಸವಣ್ಣನವರ ನಿಜವಾದ ಹೋರಾಟ ಇಲ್ಲಿಂದಲೇ ಗುರುತಿಸುವಂತ ಕೆಲಸ ಆಗಬೇಕು ಎನ್ನುವುದು ನಮ್ಮ ಆಸೆಯವಾಗಿದೆ. ಅವರ ಹೋರಾಟ ಏನು ?, ಲಿಂಗಾಯತ ಧರ್ಮವನ್ನು ಯಾಕೆ ಅವರು ಮಾಡಿದ್ರು ?, ಅವರಿಗೆ ಆದ ಕಹಿ ಅನುಭವಗಳೇನು ? ಎಂಬುವುದನ್ನು ತಿಳಿದುಕೊಳ್ಳುವುದರ ಜೊತೆಗೆ ದೇಶ, ವಿದೇಶದಲ್ಲಿ ಲಿಂಗಾಯತ ಧರ್ಮವನ್ನು ಪರಿಚಯಿಸುವ ಕೆಲಸವಾಗಿಲಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗದಗ ತೋಂಟದ ಮಠದ ಡಾ.ಸಿದ್ದರಾಮ ಸ್ವಾಮೀಜಿ, ಬೈಲೂರು ಮಠದ ನಿಜಗುಣಾನಂದ ಸ್ವಾಮೀ ಸೇರಿದಂತೆ ಇತರರು ಇದ್ದರು.