ಗೋಕಾಕ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಸತೀಶ ಜಾರಕಿಹೊಳಿ ಅವರು ನಗರದ ಹಿಲ್ ಗಾರ್ಡನ್ ಕಚೇರಿಯಲ್ಲಿ ಇಂದು (ಸೋಮವಾರ) ಸ್ವತಂತ್ರ ಭಾರತದ ಮೊದಲ ಪ್ರಧಾನಿ ದಿ.ಪಂಡಿತ್ ಜವಾಹರಲಾಲ್ ನೆಹರು ಅವರ 132 ನೇ ಜಯಂತಿ ಆಚರಿಸಿದರು. ಭಾವಚಿತ್ರಕ್ಕೆ ಪುಷ್ಪಾರ್ಚಣೆ ಮಾಡಿ ನಮನ ಸಲ್ಲಿಸಿದರು.
ಈ ವೇಳೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಮಾತನಾಡಿ, ಮಕ್ಕಳ ನೆಚ್ಚಿನ ಹಾಗೂ ಶಿಕ್ಷಕರ ಪ್ರೀತಿಯನ್ನು ಗಳಿಸಿದ ಮುಗ್ದ ಮನಸ್ಸಿನ ಅಪ್ರತಿಮ ಆಡಳಿತಗಾರ. ನೆಹರು ಅವರು ಶಿಕ್ಷಣಕ್ಕಾಗಿ ದೇಶಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.
ಮಕ್ಕಳ ಪ್ರೀತಿ ಚಾಚಾ ಪಂಡಿತ್ ಜವಾಹರಲಾಲ್ ನೆಹರೂ: ಮಕ್ಕಳು ಪ್ರೀತಿಯಿಂದ ಚಾಚಾ ನೆಹರು ಎಂದು ಕರೆಯುತ್ತಿದ್ದರು. ದೇಶದ ಮಕ್ಕಳಿಗೆ ಅಗತ್ಯ ಶಿಕ್ಷಣವನ್ನು ಪೂರೈಸಬೇಕೆಂಬುದು ಅವರ ಧ್ಯೇಯ ವಾಗಿತ್ತು. ಆದ್ದರಿಂದ ಅವರ ಸವಿನೆನಪಿಗಾಗಿ ಅವರ ಜನ್ಮ ದಿನಾಂಕದಂದೇ ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದರು.
ನಾಡಿನ ಪ್ರಜೆಗಳ ಶಿಕ್ಷಣಕ್ಕೆ ಸಾಕಷ್ಟು ಸೌಲಭ್ಯಗಳನ್ನು ನೀಡಿದ್ದಾರೆ. ಅವರ ಹೆಸರಿನಲ್ಲಿರುವ ಮಹಾವಿದ್ಯಾಯಲಗಳು ಉಚಿತ ಶಿಕ್ಷಣ ನೀಡುತ್ತಿವೆ. ಅದನ್ನು ಸದುಪಯೋಗ ಪಡಿಸಿಕೊಂಡು ಉತ್ತಮವಾಗಿ ಓದಿ, ನಮ್ಮ ಏಳಿಗೆಗೆ ಶ್ರಮಿಸಿದ ನಮ್ಮ ತಂದೆ ತಾಯಿಯನ್ನು ಮುಂದೆ ಚೆನ್ನಾಗಿ ನೋಡಿಕೊಳ್ಳುವುದರ ಜತೆಗೆ, ದೇಶಕ್ಕೂ ಒಳ್ಳೆಯ ಹೆಸರು ಬರುವ ಹಾಗೆ ಏನಾದರೂ ಸಾಧನೆ ಮಾಡೋಣ ಎಂದು ಈ ಸಮಯದಲ್ಲಿ ಪಣ ತೊಡೋಣ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಸತೀಶ ಜಾರಕಿಹೊಳಿ ಅವರು ಹೇಳಿದರು.
ಈ ಸಂದರ್ಭದಲ್ಲಿ ವಿವೇಕ ಜತ್ತಿ, ಮಂಜುಗೌಡ ಪಾಟೀಲ, ರಾಘವೇಂದ್ರ ಪಾಟೀಲ್, ವಿಠ್ಠಲ ಪರಸನ್ನವರ, ವಿನೋದ ಡೋಂಗರೆ, ಪ್ರಕಾಶ ಬಸಾಪುರಿ, ಪ್ರಹ್ಲಾದ ನಾಡಗೇರ್ ಹಾಗೂ ಹಿಲ್ ಗಾರ್ಡನ್ ಸಿಬ್ಬಂದಿ ವರ್ಗ ಇತರರು ಇದ್ದರು.