ಬೆಳಗಾವಿ: ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವ ಕಾರ್ಯವಾಗುತ್ತಿದೆ. ಜತೆಗೆ ಸಮುದಾಯ ಭವನಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸಿದರೆ, ಬಡವರಿಗೂ ತುಂಬಾ ಅನುಕೂಲವಾಗಲಿದೆ. ಪ್ರತಿ ಸಮಸ್ಯೆಗಳಿಗೂ ಸತೀಶ ಜಾರಕಿಹೊಳಿ ಫೌಂಡೇಶನ್ ಕೈ ಜೋಡಿಸಲಿದೆ ಎಂದು ಯುವ ನಾಯಕ ರಾಹುಲ್ ಜಾರಕಿಹೊಳಿ ಹೇಳಿದರು.
ಇಲ್ಲಿನ ಜಾಧವ್ ನಗರ ನಿವಾಸದಲ್ಲಿ ಸತೀಶ ಜಾರಕಿಹೊಳಿ ಫೌಂಡೇಶನ್ ವತಿಯಿಂದ ಇಂದು (ಗುರುವಾರ) ದೇವಸ್ಥಾನ, ಮಸ್ಜಿದ್ , ಚರ್ಚ್ ಟ್ರಸ್ಟಿಗಳಿಗೆ ಕುರ್ಚಿ ಮತ್ತು ಸೌಂಡ್ ಸಿಸ್ಟಮ್ ಗಳನ್ನು ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ವಿತರಿಸಿ ಅವರು ಮಾತನಾಡಿದರು.
ತಂದೆಯವರಾದ ಸತೀಶ ಜಾರಕಿಹೊಳಿ ಅವರು ಇಡೀ ಸಮಾಜವನ್ನು ಒಗ್ಗೂಡಿಸಿಕೊಂಡು ಸಮಾಜ ಸೇವೆಯಲ್ಲಿ ತಲ್ಲಿನರಾಗಿದ್ದಾರೆ. ಅವರ ರಾಜಕೀಯ ಜೀವನವನ್ನು ಹೆಚ್ಚಾಗಿ ಸಮಾಜ ಸೇವೆಗಾಗಿ ಕಳೆದಿದ್ದಾರೆ. ತಂದೆಯವರ ಮಾರ್ಗದಲ್ಲಿ ಸಹೋದರಿ ಪ್ರಿಯಾಂಕಾ ಜಾರಕಿಹೊಳಿ, ನಾನು ಸಾಗುತ್ತಿದ್ದೆವೆ ಎಂದರು.
ಸಹಕಾರ ನೀಡುವುದು ನಮ್ಮ ಧ್ಯೇಯ:
ಬೆಳಗಾವಿ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಸಾಕಷ್ಟು ಸಮುದಾಯಗಳಿವೆ. ಬಡವರು ಕಾರ್ಯಕ್ರಮ ನಡೆಸಲು ಸಮುದಾಯ ಭವನಗಳನ್ನು ಅವಲಂಭಿಸಿರುತ್ತಾರೆ. ಈ ಭವನಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸಿದರೆ, ಬಡವರಿಗೂ ತುಂಬಾ ಅನುಕೂಲವಾಗಲಿದೆ. ಮದುವೆ, ಸಾಂಸ್ಕೃತಿಕ ಕಾರ್ಯಕ್ರಮ, ಸಭೆ -ಸಮಾರಂಭಗಳನ್ನು ನಡೆಸಲು ಅನುಕೂಲವಾಗಲಿವೆ. ಈಗಾಗಲೇ ಜಿಲ್ಲೆಗ್ರಾಮೀಣ ಪ್ರದೇಶದಲ್ಲಿರುವ ಸಮುದಾಯ ಭವನಗಳಿಗೆ ಹಾಗೂ ಸಂಘ-ಸಂಸ್ಥೆಗಳಿಗೆ ಅಗತ್ಯ ವಸ್ತುಗಳಾದ ಕುರ್ಚಿ ಮತ್ತು ಸೌಂಡ್ ಸಿಸ್ಟಮ್ ಗಳನ್ನು ವಿತರಣೆ ಮಾಡಲಾಗಿದೆ. ಬಡಜನರ ಕಷ್ಟಗಳಿಗೆ ಸ್ಪಂಧಿಸುವ ಸಲುವಾಗಿ ಸತೀಶ ಜಾರಕಿಹೊಳಿ ಫೌಂಡೇಶನ್ ಸದಾಬಾಗಿಯಾಗುತ್ತದೆ ಎಂದರು.
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವ ಉದ್ದೇಶದಿಂದ ಗೋಕಾಕನಲ್ಲಿ ಪ್ರತಿ ವರ್ಷವೂ ಸತೀಶ ಶುಗರ್ಸ್ ಅವಾಡ್ಸ್ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಇಲ್ಲಿ ಸ್ಪರ್ಧಿಸಿ ಗೆಲ್ಲುವು ಸಾಧಿಸಿದ ಯುವಕರು ರಾಜ್ಯ -ರಾಷ್ಟ್ರ ಹಾಗು ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದರೆ ನಮ್ಮಗೂ ಹೆಮ್ಮೆ. ಯಾರೇ ಬಡಮಕ್ಕಳಿರಲಿ ಅವರಿಗೆ ಸಹಕಾರ ನೀಡುವುದು ನಮ್ಮ ಧ್ಯೇಯ ಎಂದರು ಭರವಸೆ ನೀಡಿದರು.
ಸಂಕಷ್ಟಕ್ಕೆ ಮೀಡಿದ ಸತೀಶ ಜಾರಕಿಹೊಳಿ ಫೌಂಡೇಶನ್: ಕೊರೋನಾದಿಂದ ಮಹಾರಾಷ್ಟ್ರದಲ್ಲಿ ಸಂಕಷ್ಟಕ್ಕಿಡಾಗಿ ನಲುಗುತ್ತಿದ್ದ ಸಾವಿರಾರೂ ಕನ್ನಡಿಗರಿಗೆ ಸತೀಶ ಜಾರಕಿಹೊಳಿ ಫೌಂಡೇಶನ್ ದಿಂದ ಘಟಪ್ರಭಾದಲ್ಲಿ ಎರಡೂ ತಿಂಗಳಕಾಲ ಆರೈಕೆ ಮಾಡಿ, ಅವರಿಗೆ ದಿನಸಿ ಕಿಟ್ ಗಳನ್ನು ನೀಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಪರಶುರಾಮ್ ಡಗೆ, ಬಾಬಾಜಾನ್ ಮತವಾಲೆ, ವಿನೂಶ್ ಮುಲ್ಲಾ,ಮಲ್ಲಗೌಡ ಪಾಟೀಲ ಹಾಗೂ ಇತರರು ಇದ್ದರು.