ಬೆಳಗಾವಿ: ತಾಲೂಕಿನ ಕೇದನೂರ ಹಾಗೂ ಮಣ್ಣಿಕೇರಿಯಲ್ಲಿ ನಿನ್ನೆ (ಬುಧವಾರ) ಏರ್ಪಡಿಸಿದ್ದ ಹಾಫ್ ಪಿಚ್ ಕ್ರಿಕೆಟ್ ಪಂದ್ಯಾವಳಿಗೆ ಯುವ ನಾಯಕ ರಾಹುಲ್ ಜಾರಕಿಹೊಳಿಯವರು ಚಾಲನೆ ನೀಡಿದರು.
ಕೇದನೂರಿನಲ್ಲಿ ಮಾತನಾಡಿದ ರಾಹುಲ್ ಅವರು, ಆರೋಗ್ಯವೇ ಶ್ರೇಷ್ಠ ಸಂಪತ್ತಾಗಿದ್ದು ಎಲ್ಲರೂ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು. ಶಿಕ್ಷಣದ ಜೊತೆಗೆ ಕ್ರೀಡೆಗೆ ಆದ್ಯತೆ ನೀಡಬೇಕು ಎಂದು ಹೇಳಿದರು.
ಗ್ರಾಮೀಣ ಭಾಗದ ಯುವಕರಲ್ಲಿ ಸಾಕಷ್ಟು ಪ್ರತಿಭೆ ಇದೆ. ಆದರೆ, ಪ್ರೋತ್ಸಾಹದ ಕೊರೆತೆಯಿಂದ ಅವರು ಬೆಳೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಗ್ರಾಮೀಣ ಭಾಗದ ಪ್ರತಿಭೆಗಳಿಗೆ ಉತ್ತಮ ವೇದಿಕೆಗಳನ್ನು ಒದಗಿಸಿ ಕೊಡುವ ಕಾರ್ಯವಾಗಬೇಕಿದೆ. ಈ ನಿಟ್ಟಿನಲ್ಲಿ ನಾವು ನಿರಂತರವಾಗಿ ಪ್ರಯತ್ನಿಸುತ್ತೇವೆ ಎಂದು ಭರವಸೆ ನೀಡಿದರು.
ಜಿಪಂ ಮಾಜಿ ಉಪಾಧ್ಯಕ್ಷ ಅರುಣ ಕಟಾಂಬಳೆ, ಮುಖಂಡರಾದ ರಮಾಕಾಂತ ಕೊಂಡೂಸ್ಕರ್, ರಾಮಣ್ಣ ಗುಳ್ಳಿ, ಮಹಾಂತೇಶ ಅಂಗಡಿ ಸೇರಿ ನೂರಾರು ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.