ಗೋಕಾಕ : ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಆಡಳಿತ ಮಂಡಳಿಗೆ ನೂತನವಾಗಿ ಆಯ್ಕೆಗೊಂಡ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು ನಗರದ ಹಿಲ್ ಗಾರ್ಡ್ ನ ನಿವಾಸದಲ್ಲಿ ಶಾಸಕ ಸತೀಶ್ ಜಾರಕಿಹೊಳಿ ಅವರನ್ನು ಇಂದು ಸನ್ಮಾನಿಸಿದರು.
ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹಾಗೂ ಹುಕ್ಕೇರಿ ಶಾಸಕ ಉಮೇಶ ಕತ್ತಿ ಅವರ ಪ್ರಯತ್ನದಿಂದ ಆಡಳಿತ ಮಂಡಳಿಗೆ ಅಧ್ಯಕ್ಷರನ್ನಾಗಿ ಅಧ್ಯಕ್ಷ ಕಲ್ಲಗೌಡ ಪಾಟೀಲ, ಉಪಾಧ್ಯಕ್ಷರನ್ನಾಗಿ ವಿಷ್ಟು ರೆಡೆಕರ ಅವರನ್ನು ಆಯ್ಕೆ ಮಾಡಲಾಗಿದೆ.
ಇದೇ ವೇಳೆ ನೂತನ ಅಧ್ಯಕ್ಷ ಕಲ್ಲಗೌಡ ಪಾಟೀಲ ಮಾತನಾಡಿ, ಹುಕ್ಕೇರಿ ವಿದ್ಯುತ್ ಸಂಘ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳಸಲು ಪ್ರಯತ್ನ ಮಾಡುತ್ತೇವೆ. ಎಲ್ಲರೂ ಸಹಕಾರ ನೀಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಾಡು ಮನ್ನಿಕೆರಿ, ದೂರದುಡಿ ಪಾಟೀಲ, ಗಂಗಪ್ಪಾ ಕಂಟಿಕರ, ಸದಾಶಿವ ಹಿರೇಮಠ, ಯಲ್ಲಪ್ಪಾ ಜಿರಲಿ, ಸುರೇಶ್ ದುಮ್ಮನಾಯ್ಕ, ಮಲ್ಲಿಕ್ ಕಾಜಿ, ಮಲ್ಲಿಕಾರ್ಜುನ ಪತ್ತಾರ ಸೇರಿದಂತೆ ಇತರರು ಇದ್ದರು.