ಮೂಡಲಗಿ:” ಮಹರ್ಷಿ ವಾಲ್ಮೀಕಿಯವರು ಬರೆದ ರಾಮಾಯಣ ಗ್ರಂಥವು ಜೀವನ ಸಂಘರ್ಷ ಹಾಗೂ ಮಾನವೀಯ ಮೌಲ್ಯಗಳ ಕನ್ನಡಿಯಾಗಿದೆ” ಎಂದು ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಹೇಳಿದರು.
ತಾಲ್ಲೂಕಿನ ವಡೆರಹಟ್ಟಿ ಗ್ರಾಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಾಲ್ಮೀಕಿಯವರು ಈ ಗ್ರಂಥದ ಮೂಲಕ ಜಗತ್ತಿಗೆ ಅತ್ಯುತ್ತಮ ಮೌಲ್ಯಗಳ ಸಂದೇಶವನ್ನು ನೀಡಿದ್ದಾರೆ. ಮಕ್ಕಳಿಗೆ ಬಾಲ ರಾಮಾಯಣ ಹಾಗೂ ಬಾಲ ಮಹಾಭಾರತ ಗ್ರಂಥಗಳನ್ನು ಪರಿಚಯಿಸುವುದರ ಮೂಲಕ ನಮ್ಮ ಸಂಸ್ಕೃತಿಯ ಹಿರಿಮೆ ಗರಿಮೆಗಳನ್ನು ಪರಿಚಯಿಸುವ ಕೆಲಸ ಮಾಡಬೇಕಾಗಿದೆ ಎಂದರು.
ಜಗತ್ತಿನ ಮನುಕುಲದ ಮನಸ್ಸನ್ನೇ ಪರಿವರ್ತಿಸಿದ ಮಹಾನ್ ಸಾಧಕ ವಾಲ್ಮೀಕಿ. ಒಂದು ಮಹತ್ವದ ಮೂಲಭೂತ ಬದಲಾವಣೆ ದೇಶ, ಸೈನ್ಯ ಒಂದು ಸಮುದಾಯದಿಂದ ಆಗಿಲ್ಲ. ಆದರೆ, ಕೆಲ ವ್ಯಕ್ತಿಗಳಿಂದ ಆಗಿದೆ. ಇಂತಹ ವ್ಯಕ್ತಿತ್ವಗಳಿಂದ ದೇಶದಲ್ಲಿ ಮಹತ್ವದ ಮೂಲಭೂತ ಬದಲಾವಣೆ ಆಗಿವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಾಂಡುರಂಗ ಮನ್ನಿಕೇರಿ, ಗ್ರಾ ಪಂ. ಚಂದ್ರಕಾಂತ ಮೋಟಾಪ್ಪಗೊಳ, ಅಡಿವಪ್ಪ ಹಾದಿಮನಿ, ಗೋಪಾಲ ಬೀ ರನಗಡಿ, ರೆಬೋಜಿ ಮಳಿವಡೆರ, ಗೋಪಾಲ ಕುದರಿ,
ಪರಸಪ್ಪ ಸಾರಪುರ, ಸಂಜು ನಂದಿ, ನಾಗಪ್ಪ ಪಾಟೀಲ, ಸಿದ್ದಲಿಂಗ ಗಿಡೋಜಿ, ಕಣ್ಣಪ್ಪಾ, ಮುರಳ್ಳಿ, ವಜ್ಜರಮಟ್ಟಿ, ಮುರಳಿ, ಬಡಿಗೇರ, ಹೊಳಕರ ಹಾಗೂ ಇತರರು ಇದ್ದರು.