ಗೋಕಾಕ: ನಗರದ ಹಿಲ್ ಗಾರ್ಡನ್ ಕಛೇರಿಯಲ್ಲಿ ಕೆಪಿಸಿಸಿ ಕಾರ್ಯಾಧಕ್ಷ ಸತೀಶ್ ಜಾರಕಿಹೊಳಿ ಅವರ ನೇತೃತ್ವದಲ್ಲಿ ಮನದ ಮಾತು ಎಂಬ ಪುಸ್ತಕ ಬಿಡುಗಡೆ ಮಾಡಿದರು.
ರಾ.ಹ.ಕೊಂಡಕೇರ ಅವರ ಸಾಹಿತ್ಯದಲ್ಲಿ ಮೂಡಿಬಂದಂತಹ ಮನದಂಗಳದಲ್ಲಿ ಅರಳಿದ ಹನಿ ರಂಗೋಲಿ ಮನದ ಮಾತು ಎಂಬ ಪುಸ್ತಕವನ್ನು ಕೆಪಿಸಿಸಿ ಕಾರ್ಯಾಧಕ್ಷ ಸತೀಶ್ ಜಾರಕಿಹೊಳಿ ಅವರ ನೇತೃತ್ವದಲ್ಲಿ ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮುಖಂಡರಾದ ಪಾಂಡು ಮನ್ನಿಕೇರಿ, ಬಾಳಗೌಡ ಪಾಟೀಲ್, ಕಿರಣ್ ಜೀಣಗುಂಡ, ಪೌಲ್ ವೇಗಸ್, ಸುನೀಲ ಕರಡಿಗುದ್ದಿ, ಮೋಹನ ಶಿಂದೆ ಕೆ ಪಿ ಬಡಿಗೇರ, ಟಿ ಎಸ್ ಮಾದರ, ಅಮೃತ ಗೌಡ ಪಾಟೀಲ್, ಹಾಗೂ ಅನೇಕರು ಉಪಸ್ಥಿತರಿದ್ದರು.