ಸಿಂದಗಿ: ನಿಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ ಸೂಕ್ತ ಅಭ್ಯರ್ಥಿಯನ್ನು ಕಾಂಗ್ರೆಸ್ ಕಣಕ್ಕೆ ಇಳಿಸಿದೆ. ಮತದಾರರು ಬಹುಮತದಿಂದ ಅಶೋಕ ಮನಗೂಳಿರನ್ನು ಆಯ್ಕೆ ಮಾಡಿ, ವಿಧಾನಸಭಾ ಪ್ರವೇಶಿಸುವಂತೆ ಆಶೀರ್ವಾದ ಮಾಡಬೇಕೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಹೇಳಿದರು.
ಸಿಂದಗಿ ವಿಧಾನಸಭಾ ಉಪಚುನಾವಣೆ ಅಂಗವಾಗಿ ಪಕ್ಷದ ಅಭ್ಯರ್ಥಿ ಅಶೋಕ ಮನಗೂಳಿ ಪರ ಕಣೋಳ್ಳಿ ಗ್ರಾಮದಲ್ಲಿ ಇಂದು ನಡೆದ ಪ್ರಚಾರ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಈ ಕ್ಷೇತ್ರದ ಬದಲಾವಣೆಗಾಗಿ ಅಶೋಕ ಅವರ ತಂದೆ ಸಾಕಷ್ಟು ಅನುದಾನವನ್ನು ತಂದು, ಹಗಲಿರುಳು ಶ್ರಮಿಸಿದ್ದಾರೆ. ಪಕ್ಷ ಬದಲಾಗಿರಬಹುದು ಮನಗೂಳಿ ಅವರು ಯಾವತ್ತಿದ್ದರೂ ನಿಮ್ಮ ಮನೆ ಮಗ. ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುತ್ತದೆ. ಈ ಉಪಚುನಾವಣೆಯಲ್ಲಿ ನಿಮ್ಮ ಕ್ಷೇತ್ರದ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಜವಾಬ್ದಾರಿ ಮತಪ್ರಭುಗಳ ಮೇಲಿದೆ ಎಂದು ಹೇಳಿದರು.
ಮೋದಿ ಸಾಹೇಬರದ್ದು ಬರಿ ಭರವಸೆ:- ರಾಜ್ಯದಲ್ಲಿರುವ ದುರಾಡಳಿತ ಬಿಜೆಪಿ ಪಕ್ಷವನ್ನು ಮತದಾರರು ಕಿತ್ತೆಸೆಯಬೇಕು. ತೈಲ ಬೆಲೆ, ಅಡುಗೆ ಎಣ್ಣೆ ಬೆಲೆಗಳು ಏರಿಕೆ ಮಾಡಿ, ಬಡಿವರಿಗೆ ಬಿಜೆಪಿ ಸಂಕಷ್ಟ ತರುತ್ತಿದೆ. ಏಳು ವರ್ಷದಲ್ಲಿ ಇಂಧನ ಬೆಲೆ ಮೂರರಷ್ಟು ಏರಿಸಿ, ಗೃಹಣಿಯರಿಗೆ ಸಂಕಷ್ಟ ತಂದಿದ್ದಾರೆ. ಮನೆನಿಭಾಸಲು ಮಹಿಳೆಯರಿಗೆ ಹೊರೆಯಾಗುತ್ತಿದೆ. ಅಚ್ಛೆದಿನ್ ಆಯೇಗಾ ಎಂದು ಮೋದಿ ಸಾಹೇಬರು ಬರಿ ಭರವಸೆ ನೀಡಿದರು. ಆದರೆ, ಇಂತಹ ಕಷ್ಟದ ದಿನಗಳು ಬರುತ್ತವೆ ಎಂದು ಜನರು ಊಹೆ ಮಾಡಿರಲಿಲ್ಲ ಎಂದು ಕೇಂದ್ರ ಸರ್ಕಾರ ವಿರುದ್ಧ ಚಾಟಿ ಬಿಸಿದರು.
ಹಾಗಾದ್ರೆ ಯಾವಾಗ ಬರುತ್ತದೆ ಅಚ್ಛೆದಿನ್, ಸುಳ್ಳು ಭರವಸೆ ಮೂಲಕ ಆಡಳಿತ ಮಾಡುತ್ತಿದ್ದಿಯಾ ಮೋದಿ ಸರ್ಕಾರ ಎಂದು ಕಿಡಿಕಾರಿದರು. ನಾವೆಲ್ಲ ವಾಹನಗಳನ್ನು ಮಾರಿ ಸೈಕಲ್ ಖರೀದಿ ಮಾಡಬೇಕಾಗುತ್ತೆ ಅಂತಾ ಆಕ್ರೋಶ ಹೊರಹಾಕಿದರು. ಜನರು ಬದುಕುವುದಾದ್ರೂ ಹೇಗೆ ಎಂದು ಸರಕಾರಕ್ಕೆ ಪ್ರಶ್ನಿಸಿದ್ದಾರೆ.
ಈ ಲಕ್ಷ್ಮಣ ಚಿಂಗಳೆ, ಸದಾಶಿವ ಬುಟ್ಟಾಳೆ, ರಮೇಶ್ ಸಿಂದಗಿ , ಆಯುಷಾ ಸನದಿ, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಇತರರು ಇದ್ದರು.