ಬೆಳಗಾವಿ: ಹೊನಗಾ ಗ್ರಾಮದಲ್ಲಿ ಪ್ರತಿಷ್ಠಾಪಿಸಲು ಉದ್ದೇಶಿಸಲಾಗಿರುವ ಛತ್ರಪತಿ ಶಿವಾಜಿ ಮೂರ್ತಿ ನಿರ್ಮಾಣ ಕಾಮಗಾರಿಗೆ ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಇಂದು ಚಾಲನೆ ನೀಡಿದರು.
ಮೂರ್ತಿ ಪ್ರತಿಷ್ಠಾಪಿಸಲು ಕಟ್ಟೆ ಹಾಗೂ ಸುತ್ತಲೂ ಉದ್ಯಾನ ನಿರ್ಮಿಸಲಾಗುತ್ತಿದ್ದು, ಇದಕ್ಕೆ ರಾಹುಲ್ ಅವರು ಇಂದು ಪೂಜೆ ನೆರವೇರಿಸಿದರು.
ಈ ಕಾಮಗಾರಿಗೆ ಕೆಲವು ತಿಂಗಳ ಹಿಂದೆ ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಶಾಸಕ ಸತೀಶ ಜಾರಕಿಹೊಳಿ ಅವರು ಭೂಮಿಪೂಜೆ ನೆರವೇರಿಸಿ, ಚಾಲನೆ ನೀಡಿದ್ದರು. ಕಾಮಗಾರಿಗೆ ಈಗಾಗಲೇ ಅಡಿಪಾಯ ಹಾಕಲಾಗಿದ್ದು, ಅಂತಿಮ ಕಾಮಗಾರಿ ಪ್ರಗತಿಯಲ್ಲಿದೆ.
ಕಾಮಗಾರಿಯ ಅಂತಿಮ ಹಂತಕ್ಕೆ ಇಂದು ಚಾಲನೆ ನೀಡಿದ ರಾಹುಲ್, ತ್ವರಿತಗತಿಯಲ್ಲಿ ಕಾಮಗಾರಿ ಕೈಗೊಳ್ಳುವಂತೆ ಸೂಚಿಸಿದರು.
ಕ್ಲಿನಿಕ್ ಉದ್ಘಾಟನೆ:
ನಂತರ ಚಿಕ್ಕಾಲಗುಡ್ಡ ಗ್ರಾಮದಲ್ಲಿ ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಡಾ.ಸಂಜಯ್ ಝಿಲಿ೯ ಅವರ ‘ಸಂಜಯ್ ಕ್ಲಿನಿಕ್’ ಉದ್ಘಾಟಿಸಿದರು.
ನಂತರ ಸಂಜಯ ಅವರ ಸುಪುತ್ರ ಪೂರ್ವಿಕ ಹುಟ್ಟುಹಬ್ಬದಲ್ಲಿ ಭಾಗಿಯಾಗಿ, ಶುಭಕೋರಿದರು.
ಮುಖಂಡರಾದ ಸಿದ್ದು ಸುಣಗಾರ, ಸುರೇಶ ನಾಯ್ಕ, ಬೈರು ಕಾಂಬಳೆ, ವಿಜಯ ವನಮನಿ, ಪುಂಡಲೀಕ ಪಾಟೀಲ್, ಯುವರಾಜ ಪಾವಲೆ, ಯಲ್ಲಪ್ಪ ಆನಂದಾಚಿ ಸೇರಿ ಇನ್ನಿತರರು ಇದ್ದರು.
CKNEWSKANNADA / BRASTACHARDARSHAN CK NEWS KANNADA