ಬೆಳಗಾವಿ: ಕಾಕತಿಯಲ್ಲಿರುವ ನೂತನ ಜೆನೆರಿಕಾರ್ಡ್ ಮೆಡಿಕಲ್ ಸ್ಟೋರ್ ನ್ನು ರವಿವಾರ ಯುವನಾಯಕ ರಾಹುಲ್ ಜಾರಕಿಹೊಳಿ ಅವರು ಉದ್ಘಾಟಿಸಿ, ಶುಭ ಹಾರೈಸಿದರು. ಬಳಿಕ ಮೆಡಿಕಲ್ ಸಿಬ್ಬಂದಿ ರಾಹುಲ್ ಜಾರಕಿಹೊಳಿ ಅವರಿಗೆ ಗೌರವಿಸಿ, ಸನ್ಮಾನಿಸಿದರು.
ಈ ವೇಳೆ ಯುವನಾಯಕ ರಾಹುಲ್ ಜಾರಕಿಹೊಳಿ ಅವರು ಮಾತನಾಡಿ, ವೈಧ್ಯಕೀಯ ಕ್ಷೇತ್ರದಲ್ಲಿ ಮಹತ್ವ ಸೇವೆ ಸಲ್ಲಿಸುವ ಕಾರ್ಯವೆಂದರೆ ರೋಗಿಗಳ ಸೇವೆ ಮಾಡುವುದು. ಯುವಕರು ಒಟ್ಟಾಗಿ ಜೆನೆರಿಕಾರ್ಡ್ ಮೆಡಿಕಲ್ ಸ್ಟೋರ್ ನ್ನು ಪ್ರಾರಂಭಿಸಿರುವುದು ಹೆಮ್ಮೆಯ ವಿಷಯ.
ಸಮಾಜದಲ್ಲಿ ಗೌರಯುತ ಸ್ಥಾನ ಇದಾಗಿದೆ. ಯಾರನ್ನೂ ನಂಬದೇ ಹೋದರೂ ವೈದ್ಯರು ಹಾಗೂ ಮೆಡಿಕಲ್ ಮೇಲೆ ಸಮಾಜ ಅತೀಯಾಗಿ ಭರವಸೆ ಇಟ್ಟು ನಿಮ್ಮಲ್ಲಿ ಬರುತ್ತಾರೆ. ಆ ನಂಬಿಕೆಯನ್ನು ಉಳಿಸಿಕೊಂಡು ರೋಗಿಗಳಿಗೆ ಸದಾಕಾಲ ಸ್ಪಂಧಿಸಬೇಕೆಂದು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಜೆನೆರಿಕಾರ್ಡ್ ಮೆಡಿಕಲ್ ಸ್ಟೋರ್ ಸಿಬ್ಬಂದಿ ಹಾಗೂ ಇತರರು ಇದ್ದರು.
CKNEWSKANNADA / BRASTACHARDARSHAN CK NEWS KANNADA