ಸ್ಥಳೀಯರ ಸಮಸ್ಯೆಗಳ ಆಲಿಕೆ; ಕಾರ್ಯಕರ್ತರಿಗೆ ಉತ್ಸಾಹ ತುಂಬಿದ ನಾಯಕ
ಬೆಳಗಾವಿ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ದಕ್ಷಿಣ ಮತಕ್ಷೇತ್ರದ ವಿವಿಧ ವಾರ್ಡ್ ಗಳಿಗೆ ಇಂದು ಭೇಟಿ ನೀಡಿ, ಸ್ಥಳೀಯರ ಕುಂದುಕೊರತೆಗಳನ್ನು ಆಲಿಸಿದರು.
ಆನಿಗೋಳ, ನಾನಾವಾಡಿ, ಮಜಗಾವಿ ಸೇರಿದಂತೆ ವಿವಿಧ ಬಡಾವಣೆಗಳಿಗೆ ಅವರು ಭೇಟಿ ನೀಡಿದರು. ಮುಖಂಡರು ಹಾಗೂ ಕಾರ್ಯಕರ್ತರ ಮನೆಗೆ ತೆರಳಿ ಕೆಲಹೊತ್ತು ಚರ್ಚೆ ನಡೆಸಿದರು. ಸ್ಥಳೀಯ ಜನರೊಂದಿಗೆ ಮುಕ್ತವಾಗಿ ಮಾತುಕತೆ ನಡೆಸಿದರು.
ಜನರ ಸಮಸ್ಯೆಗಳಿಗೆ ಸದಾ ಸ್ಪಂದಿಸುತ್ತೇವೆ:
ಈ ಸಂದರ್ಭದಲ್ಲಿ ಮಾತನಾಡಿದ ಸತೀಶ ಅವರು, ಪಾಲಿಕೆ ಚುನಾವಣೆಯ ನಂತರ ದಕ್ಷಿಣ ಮತಕ್ಷೇತ್ರಕ್ಕೆ ಬರಬೇಕು. ಇಲ್ಲಿನ ಮತದಾರರನ್ನು ಭೇಟಿ ಮಾಡಬೇಕೆಂಬ ಯೋಚನೆಯಿತ್ತು. ಹೀಗಾಗಿ, ಇಂದು ಐದು ವಾರ್ಡ್ ಗಳಿಗೆ ಭೇಟಿ ನೀಡಿದ್ದೇನೆ. ಮುಂದಿನ ದಿನಗಳಲ್ಲಿ ಮತಕ್ಷೇತ್ರದ ಎಲ್ಲ ವಾರ್ಡ್ ಗಳಿಗೂ ಭೇಟಿ ನೀಡುತ್ತೇನೆ. ನಾವೂ ಸೋತರು ಕೂಡ ಜನರೊಂದಿಗೆ ಇದ್ದೇವೆ. ನಿಮ್ಮ ಸಮಸ್ಯೆಗಳಿಗೆ ಸದಾ ಸ್ಪಂದಿಸುತ್ತೇವೆ ಎಂದು ಭರವಸೆ ನೀಡಿದರು.
ಮಹಾನಗರ ಪಾಲಿಕೆ ಚುನಾವಣೆಯಲ್ಲಿ ದಕ್ಷಿಣ ಮತಕ್ಷೇತ್ರದಲ್ಲಿ ನಮಗೆ ಹೆಚ್ಚಿನ ಸ್ಥಾನಗಳು ಬರಬೇಕಾಗಿತ್ತು. ಆದರೆ, ಎಂಇಎಸ್ ಒಳಜಗಳದಿಂದ ಬಿಜೆಪಿಯವರಿಗೆ ಲಾಭವಾಯಿತು. ಮುಂದೆ ಇಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯಗಳಿಸಲಿದ್ದಾರೆ. ಕಾರ್ಯಕರ್ತರೆಲ್ಲ ಒಗ್ಗಟ್ಟಾಗಿ ಇರಬೇಕು. ಮುಂಬರುವ ಯಾವುದೇ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆ ಹೆಚ್ಚಿನ ಮತಗಳನ್ನು ತಂದುಕೊಡಬೇಕು ಎಂದು ಮನವಿ ಮಾಡಿದರು.
ಸ್ಥಳೀಯರ ಸಮಸ್ಯೆ ಆಲಿಕೆ:
ಈ ಸಂದರ್ಭದಲ್ಲಿ ಸತೀಶ ಜಾರಕಿಹೊಳಿ ಅವರು ನಾನಾವಾಡಿ ಮದರಸಾಗೆ ಭೇಟಿ ನೀಡಿದರು. ನಂತರ ಸ್ಥಳೀಯರೊಂದಿಗೆ ಚರ್ಚಿಸಿದರು. ವಿವಿಧ ವಾರ್ಡ್ ಗಳಲ್ಲಿನ ಜನರ ಸಮಸ್ಯೆ ಆಲಿಸಿದರು. ಈ ಸಂದರ್ಭದಲ್ಲಿ ಸ್ಥಳೀಯರ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು.
ಸ್ಥಳೀಯರಾದ ಅರ್ಚನಾ ಮೇಸ್ತ್ರಿ, ಲತೀಫ್ ಫೀರಜಾದೆ, ಕುರ್ಸಿದ್ ಮುಲ್ಲಾ, ಚೋಗ್ರಾ ಮೊಮಿನ್ ಆನಿಗೋಳ, ಶಂಕರ್ ಬರಮನ್ನವರ್, ರಾಘವೇಂದ್ರ ಲೋಕರಿ, ಈರಪ್ಪ ತಿಗಡಿ, ಸರಳಾ ಸಾತಪುಟೆ ಸೇರಿದಂತೆ ವಿವಿಧ ಮುಖಂಡರು ಹಾಗೂ ಕಾರ್ಯಕರ್ತರ ಮನೆಗೆ ಸತೀಶ ಅವರು ಭೇಟಿ ನೀಡಿ, ಮಾತುಕತೆ ನಡೆಸಿದರು.
ಅಭಿಮಾನಿಯ ಬಯಕೆ ಈಡೇರಿಕೆ:
ರೇಣುಕಾ ನಗರದ ನಿವಾಸಿ ಗಣಪತಿ ಅಶೋಕ ಸೊಂಟಕ್ಕಿ ಎಂಬ ವಿಶೇತಚೇತನ ವ್ಯಕ್ತಿಯೊಬ್ಬರು ಸತೀಶ ಜಾರಕಿಹೊಳಿಯವರ ಅಭಿಮಾನಿಯಾಗಿದ್ದು, ಅವರನ್ನು ನೇರವಾಗಿ ನೋಡಬೇಕೆಂಬ ಬಯಕೆಯನ್ನು ಹೊಂದಿದ್ದರು. ಈ ಬಗ್ಗೆ ತಿಳಿದ ಕೂಡಲೇ ಸತೀಶ ಜಾರಕಿಹೊಳಿ ಅವರು ನೇರವಾಗಿ ಅವರ ಮನೆಗೆ ಭೇಟಿ ನೀಡಿದರು. ಗಣಪತಿ ಅವರೊಂದಿಗೆ ಆತ್ಮೀಯವಾಗಿ ಮಾತನಾಡಿದರು. ತಮ್ಮ ನಾಯಕ ಸ್ವತಃ ಮನೆಗೆ ಆಗಮಿಸಿದ್ದಕ್ಕೆ ಗಣಪತಿ ಅವರು ಅತ್ಯಂತ ಹರ್ಷ ವ್ಯಕ್ತಪಡಿಸಿದರು.
ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರದೀಪ ಎಂ.ಜೆ., ದಕ್ಷಿಣ ಮತಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಜ್ಜಪ್ಪ ಡಗೆ, ಮುಖಂಡರಾದ ಪರಶುರಾಮ ಡಗೆ, ಕುಶಪ್, ಫಜಲ್ ಮಕಾನದಾರ, ರಾಘು ಭುವಿ, ಆನಂದ ಶಿರೂರ, ಸಲೀಮ್ ಸನದಿ, ಇರ್ಫಾನ್ ಅತ್ತಾರ, ಆಕಾಶ ಕರೋಶಿ, ಸಾಗರ ಸಾತ್ಪುಟೆ, ರೇಖಾ ಸೊಂಟಕ್ಕಿ ಸೇರಿದಂತೆ ವಿವಿಧ ಮುಖಂಡರು ಹಾಗೂ ಕಾರ್ಯಕರ್ತರ ಮನೆಗೆ ಸತೀಶ ಅವರು ಭೇಟಿ ನೀಡಿ, ಮಾತುಕತೆ ನಡೆಸಿದರು. ಸೇರಿ ಇನ್ನಿತರರು ಈ ಸಂದರ್ಭದಲ್ಲಿ ಹಾಜರಿದ್ದರು.