ಯರಗಟ್ಟಿ: ” ಜೀವನದಲ್ಲಿ ಬದಲಾವಣೆಯಾದ ಬಳಿಕ ಆದಿಕವಿ ಮಹರ್ಷಿ ವಾಲ್ಮೀಕಿ ಅವರು ರಾಮಾಯಣವನ್ನು ಬರೆದು ವಿಶ್ವಕ್ಕೆ ಭಾರತೀಯರ ಸಂಸ್ಕೃತಿಯನ್ನು ಪರಿಚಯಿಸಿ, ಅಮರಕವಿಯಾದರು. ಯುವಕರು ವಾಲ್ಮೀಕಿಯವರ ಬಗ್ಗೆ ಆಳವಾದ ಅಧ್ಯಯನ ಮಾಡಿದಾಗ ಮಾತ್ರ ಶ್ರೇಷ್ಠ ವ್ಯಕ್ತಿಗಳಾಗಲು ಸಾದ್ಯ” ಎಂದು ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಹೇಳಿದರು.
ತಾಲೂಕಿನ ಆಲದಕಟ್ಟಿ ಕೆ. ಎಂ. ಗ್ರಾಮದಲ್ಲಿ ಗುರುವಾರ ಆಯೋಜಿಸಲಾಗಿದ್ದ, ಆದಿಕವಿ ಮಹರ್ಷಿ ಶ್ರೀ ವಾಲ್ಮೀಕಿ ದೇವಸ್ಥಾನ ಹಾಗೂ ನೂತನ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ,
ಆದಿಕವಿ ವಾಲ್ಮೀಕಿ ತಮ್ಮ ಅಮೂಲ್ಯ ಕೃತಿ ರಾಮಾಯಣದ ಮೂಲಕ ನೂರಾರು ಆದರ್ಶಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಒಂದೇ ಸ್ಥಳದಲ್ಲೆ ಕುಳಿತುಕೊಂಡು ಪ್ರಕೃತಿ ಸೌಂಧರ್ಯವನ್ನು ವರ್ಣಿಸಿದ್ದಾರೆ. ಅವರು ಬರೆದ ರಾಮಾಯಣ ಅಜರಾಮರ್ ಎಂದರು. ವಿವಿಧ ಪಾತ್ರಗಳ ಮುಖಾಂತರ ಕೌಟುಂಬಿಕ ಮೌಲ್ಯಗಳು ಮತ್ತು ಆದರ್ಶ ವ್ಯಕ್ತಿಯ ಗುಣಲಕ್ಷಣಗಳನ್ನು ಮನೋಜ್ಞವಾಗಿ ಚಿತ್ರಿಸಿದ್ದಾರೆ. ರಾಮಾಯಣ ಮಹಾಕಾವ್ಯದಲ್ಲಿ ಮಾತೃದೇವೋಭವ, ಪಿತೃದೇವೋಭವ, ಆಚಾರ್ಯದೇವೋಭವ, ಅತಿಥಿದೇವೋಭವದಂತಹ ಮೌಲ್ಯಗಳನ್ನು ಎತ್ತಿ ಹಿಡಿಯಲಾಗಿದೆ ಎಂದರು.
ತಂದೆಯವರಾದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿಯವರ ಅನುಪಸ್ಥಿತಿಯಲ್ಲಿ ನಾವಿಂದೂ ಆಗಮಿಸಿದ್ದೆವೆ. ಇಂತಹ ಭವ್ಯ ಕಾರ್ಯಕ್ರಮ ಆಯೋಜನೆ ಮಾಡಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು. ಆದಿಕವಿ ಮಹರ್ಷಿ ಶ್ರೀ ವಾಲ್ಮೀಕಿ ದೇವಸ್ಥಾನ ಹಾಗೂ ನೂತನ ಮೂರ್ತಿ ಪ್ರತಿಷ್ಠಾಪನಾ ಕೇವಲ ಮೂರ್ತಿ ಪ್ರತಿಷ್ಠಾಪನಾ ಆಗದೇ ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಒಳ್ಳೆಯ ಮಾರ್ಗದಲ್ಲಿ ಸಾಗಬೇಕಿದೆ.
ಜಗದ್ಗುರು ಶ್ರೀ ವಾಲ್ಮೀಕಿ ಪ್ರಸನ್ನಾನಂದಪುರಿ ಸ್ವಾಮೀಜಿ ಅವರು ಮಾತನಾಡಿ, ಬಡ ಜನರ ಮದುವೆ ಸಮಾರಂಭಕ್ಕಾಗಿ ಈ ಯರಗಟ್ಟಿ ಭಾಗದಲ್ಲಿ ಮಹರ್ಷಿ ಶ್ರೀ ವಾಲ್ಮೀಕಿ ಸಮುದಾಯ ಭವನ ನಿರ್ಮಾಣ ಮಾಡಲು, ಶಾಸಕರಾದ ಆನಂದ ಮಾಮನಿಯವರು ಸರ್ಕಾರದಿಂದ 50 ಲಕ್ಷ ರೂ. ಬಿಡುಗಡೆ ಮಾಡಿಸಿ ಕೊಡಲು ಪ್ರಯತ್ನ ಮಾಡಬೇಕು. ಇಲ್ಲಿಂದ ಮನವಿ ಮಾಡಿಕೊಂಡರೆ ಶ್ರೀರಾಮಲು ಸ್ಪಂಧಿಸುತ್ತಾರೆ. ಈ ಮಹತ್ವದ ಕಾರ್ಯ ಶೀಘ್ರವೇ ನೇರವೇರಲಿ ಎಂದು ಶಾಸಕ ಮಾಮನಿಯವರಿಗೆ ಜಗದ್ಗುರು ಶ್ರೀ ವಾಲ್ಮೀಕಿ ಪ್ರಸನ್ನಾನಂದಪುರಿ ಸ್ವಾಮೀಜಿ ಅವರು ಕಾರ್ಯಕ್ರಮದಲ್ಲಿ ಮನವಿ ಮಾಡಿಕೊಂಡರು. ವೇದಿಕೆಯಲ್ಲಿ ಶಾಸಕ ಮಾಮನಿಯವರು ಶ್ರೀಗಳ ಬೇಡಿಕೆಗೆ ಸ್ಪಂಧಿಸಿದರು.
ಈ ಸಂದರ್ಭದಲ್ಲಿ ಜಗದ್ಗುರು ಶ್ರೀ ವಾಲ್ಮೀಕಿ ಪ್ರಸನ್ನಾನಂದಪುರಿ ಸ್ವಾಮೀಜಿ, ಶ್ರೀ ನೀಲಕಂಠ ಸ್ವಾಮೀಜಿ , ಚನ್ನಮಲ್ಲ ಶಿವಾಚಾರ್ಯ ಸ್ವಾಮೀಜಿ, ಮುರುಘೇಂದ್ರ ಸ್ವಾಮೀಜಿ, ಅಮರಸಿದ್ದೇಶ್ವರ ಸ್ವಾಮೀಜಿ, ಶಾಸಕ ಆನಂದ ಮಾಮನಿ, ವಿಶ್ವಾಸ ವೈದ್ಯ, ಉಮೇಶ ಬಾಳಿ, ಸುಭಾಸ ಕೌಜಲಗಿ, ಪಂಚನಗೌಡ ದ್ಯಾಮನಗೌಡರ, ವಿನಯಕುಮಾರ ದೇಸಾಯಿ, ರವೀಂದ್ರ ಯಲಿಗಾರ, ವಿದ್ಯಾರಾಣಿ ಸೊನ್ನದ, ಫಕೀರಪ್ಪ ಹದ್ದನ್ನವರ, ವಿಕ್ರಮ ದೇಸಾಯಿ, ಪುಂಡಲೀಕ ಮೇಟಿ, ರಾಮನಗೌಡ ತಿಪರಾಸಿ, ಮಹಾಂತೇಶ ಉಪ್ಪಿನ ಸಂತೋಷ ಹಾದಿಮನಿ ಹಾಗೂ ಇತರರು ಇದ್ದರು.
-:ಮೀಸಲಾತಿ ವಿಳಂಬವಾದರೆ ಹೋರಾಟ ಅನಿರ್ವಾಯ:-
ಸಮಾಜದ ಮುಖ್ಯವಾಹಿನಿಯಿಂದ ಹಿಂದುಳಿದ ಪರಿಶಿಷ್ಟ ಸಮುದಾಯವರಿಗೆ ಶೈಕ್ಷಣಿಕವಾಗಿ ಬೆಳಬೇಕಾದರೆ ಸರ್ಕಾರ ಮೀಸಲಾತಿ ನೀಡಬೇಕಿದೆ. ಚುನಾವಣೆ ಪ್ರಣಾಳಿಕೆಯಲ್ಲಿ ಎಸ್ ಸಿ/ಎಸ್ ಟಿ ಸಮುದಾಯಕ್ಕೆ ಇಲ್ಲದ ಭರವಸೆ ನೀಡುತ್ತಾರೆ. ಆದರೆ, ಗೆದ್ದ ಬಳಿಕ ಸಮುದಾಯಗಳಿಗೆ ಸ್ಪಂಧಿಸುತ್ತಿಲ್ಲ. ಮೀಸಲಾತಿ ವಿಳಂಬವಾದರೆ ಹೋರಾಟ ಅನಿರ್ವಾಯ, ಮಾಜಿ ಸಿಎಂ ಯಡಿಯೂರಪ್ಪನವರು ಆಶಾಸ್ವನೆ ನೀಡಿ, ಮಾತಿಗೆ ತಪ್ಪಿ ಮನೆಯಲ್ಲಿ ಕುಳಿತುಕೊಂಡಿದ್ದಾರೆ. 30 ವರ್ಷಗಳಿಂದ ಈ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ ಆದರೂ ಯಾವ ಸರ್ಕಾಗಳು ಸ್ಪಂಧಿಸಿಲ್ಲ ಎಂದು ಅಸಮಾದಾನ ಹೋರಹಾಕಿದರು.