ಗೋಕಾಕ : ‘ ಸುರಕ್ಷತೆಯ ದೃಷ್ಟಿಯಿಂದ ಯಮಕನಮರಡಿ ಕ್ಷೇತ್ರದ ಪ್ರತಿ ಗ್ರಾಮ ಪಂಚಾಯ್ತಿಗಳಿಗೆ ಸಿಸಿ ಕ್ಯಾಮರ್ ಅಳವಡಿಸಲು ಸೂಚನೆ ನೀಡಲಾಗುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಹೇಳಿದರು.
ಇಲ್ಲಿನ್ ಹಿಲ್ ಗಾರ್ಡನ್ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಯಮಕನಮರಡಿ ಗ್ರಾಮದ ಪ್ರಮುಖ ರಸ್ತೆ ಹಾಗೂ ಗ್ರಾಮ ಪಂಚಾಯ್ತಿಗೆ ಈಗಾಗಲೇ ಸಿಸಿ ಕ್ಯಾಮರ್ ಅಳವಡಿಸಲಾಗಿದೆ. ಅದೇ ರೀತಿ ಕ್ಷೇತ್ರದ 33 ಗ್ರಾಮ ಪಂಚಾಯ್ತಿಗೆ ಅಳವಡಿಸಲು ಸೂಚನೆ ನೀಡಲಾಗುತ್ತಿದೆ ಎಂದರು.
‘ ಇಂದಿನ ದಿನಮಾನಗಳಲ್ಲಿ ಸಿಸಿ ಕ್ಯಾಮರ ಅಳವಡಿಕೆ ಅವಶ್ಯವಾಗಿದೆ. ಇದರಿಂದ ಕಳ್ಳತನ ಸೇರಿ ಬೇರೆ ಬೇರೆ ಪ್ರಕರಣಗಳನ್ನು ನಿಯಂತ್ರಣ ಮಾಡಬಹುದಾಗಿದೆ. ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸುವುದರಿಂದ ಅಪಘಾತ ಸಂದರ್ಭದಲ್ಲಿ ವಾಹನ ಗುರುತಿಸುವಲ್ಲಿ ಸಹಾಯವಾಗಲಿದೆ’ ಎಂದು ಹೇಳಿದರು.
‘ಗ್ರಾಮಕ್ಕೆ ಸಿಸಿ ಕ್ಯಾಮರಾದಿಂದ ಸ್ವಚ್ಛತೆ, ಕಳ್ಳತನ, ಅಪಘಾತ ವಾಹನ ಗುರುತಿಸುವಿಕೆಗೆ ಪ್ರಮುಖವಾಗಿ ಅನುಕೂಲವಾಗಲಿದೆ. ನಮ್ಮ ಕ್ಷೇತ್ರದ ಪ್ರತಿ ಗ್ರಾಮ ಪಂಚಾಯ್ತಿಗಳಿಗೆ ಅಳವಡಿಕೆ ಸೂಚನೆ ನೀಡಲಾಗ್ತದೆ. ವಿದೇಶಗಳಲ್ಲಿ ಸರ್ಕಾರವೇ ಈ ಕೆಲಸಗಳನ್ನು ಮಾಡುತ್ತವೆ. ರಾಜ್ಯದಲ್ಲಿಯೂ ಸರ್ಕಾರವೇ ಸಿಸಿ ಕ್ಯಾಮರಾ ಅಳವಡಿಸುವ ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.