ಗೋಕಾಕ : ಸೆ.28 ರಂದು ಮಧ್ಯಪ್ರದೇಶ ಉಜ್ಜನಿಯಲ್ಲಿ ನಡೆಯುವ ರಾಷ್ಟ್ರ ಮಟ್ಟದ ಮಲ್ಲಗಂಭ ಕ್ರೀಡೆಗೆ ಆಯ್ಕೆಯಾದ ಮೂಡಲಗಿ ತಾಲ್ಲೂಕಿನ ಅವರಾದಿ ಗ್ರಾಮದ ಮಹಾಲಕ್ಷ್ಮಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ಆರ್ಥಿಕ ನೆರವು ನೀಡಿ, ಶುಭ ಕೋರಿದರು.
ಇಲ್ಲಿನ ತಮ್ಮ ಹಿಲ್ ಗಾರ್ಡನ್ ಕಚೇರಿಯಲ್ಲಿ ಗುರುವಾರ ವಿದ್ಯಾರ್ಥಿಗಳಾದ ಪ್ರಭು ಭೇವಿನಕಟ್ಟಿ, ಬಸವರಾಜ ಹೋಳಿ, ದಾನಮ್ಮ ಕಾಳಶೆಟ್ಟಿ, ಯಮುನಾ ಹೋಳಿ ವಿದ್ಯಾರ್ಥಿಗಳಿಗೆ ನೆರವು ನೀಡಿದರು. ಇದೇ ವೇಳೆ ಕಾಂಗ್ರೆಸ್ ಯುವ ನಾಯಕಿ ಪ್ರಿಯಾಂಕಾ ಜಾರಕಿಹೊಳಿ ವಿದ್ಯಾರ್ಥಿಗಳು ಶುಭ ಹಾರೈಸಿದರು.
ಬಳಿಕ ಸತೀಶ್ ಜಾರಕಿಹೊಳಿ ಮಾತನಾಡಿ, ‘ಗ್ರಾಮೀಣ ಪ್ರತಿಭೆಗಳು ಮಲ್ಲಗಂಭ ಕ್ರೀಡೆಯನ್ನು ರಾಷ್ಟ್ರ ಮಟ್ಟದಲ್ಲಿ ತೆಗೆದುಕೊಂಡು ಹೋಗುತ್ತಿರುವುದು ಸಂತೋಷದ ವಿಷಯ. ಎಲ್ಲರೂ ಉತ್ತಮವಾಗಿ ಪ್ರದರ್ಶನ ನೀಡುವ ಮೂಲಕ ತಾಲ್ಲೂಕು, ಜಿಲ್ಲೆ, ರಾಜ್ಯಕ್ಕೆ ಕೀರ್ತಿ ತನ್ನಿ ಎಂದು ‘ ತಿಳಿಸಿದರು.
ಈ ಸಂದರ್ಭದಲ್ಲಿ ಬಿಇಒ ಅಜೀತ ಮನ್ನಿಕೇರಿ, ಶಾಲೆ ಅಧ್ಯಕ್ಷ ಎಂ.ಎಂ.ಪಾಟೀಲ, ಮುಖ್ಯ ಶಿಕ್ಷಕ ಎ.ಪಿ.ಪಾಟೀಲ, ಪಾಂಡು ಅನವಾಲ, ಪಾಂಡು ಮನ್ನಿಕೇರಿ, ವಿವೇಕ ಜತ್ತಿ ಸೇರಿದಂತೆ ಇತರರು ಇದ್ದರು.