ಬೆಳಗಾವಿ: ” ಪ್ರಶಸ್ತಿಗಾಗಿ ಬಿಜೆಪಿ ಕಂಡಲೆಲ್ಲ ಶೌಚಾಲಯ ನಿರ್ಮಾಣ ಮಾಡಿ, ಮಾರ್ಕ್ಸ್ ತೆಗೆದುಕೊಂಡಿದೆ. ಸದ್ಯ ಶೌಚಾಲಯಗಳು ನಿರ್ವಹಣೆ, ನೀರಿನ ವ್ಯವಸ್ಥೆ ಇಲ್ಲದೆ ಹಾಳಾಗಿವೆ. ಲೆಕ್ಕ ಮಾತ್ರ ಪಕ್ಕಾ ಆಗಿದೆ ” ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ವಾಗ್ದಾಳಿ ನಡೆಸಿದರು.
ಇಲ್ಲಿನ ಕಾಂಗ್ರೆಸ್ ಭವನದಲ್ಲಿ ಬುಧವಾರ ರಾಜೀವ್ ಗಾಂಧಿ ಪಂಚಾಯತ್ ಸಂಘಟನೆ ವತಿಯಿಂದ ಆಯೋಜಿಸಿದ್ದ, ಜಿಲ್ಲಾ ಮಟ್ಟದ ಕಾಂಗ್ರೆಸ್ ಸಮಾವೇಶಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಚಾಲನೆ ನೀಡಿ, ಅವರು ಮಾತನಾಡಿದರು.
ಮೋದಿ ಸರ್ಕಾರ ಬಿಟ್ಟಿ ಪ್ರಚಾರ ಮಾಡುತ್ತಿದೆ: ಮನಮೋಹನ ಸಿಂಗ್ ಸರ್ಕಾರ ಇದ್ದಾಗ ಸ್ವಚ್ಛ ಭಾರತ ಯೋಜನೆ ಜತೆ, ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಇದಕ್ಕಾಗಿ ವರ್ಷಕ್ಕೆ 33 ಸಾವಿರ ಕೋಟಿ ರೂ. ಅನುದಾನ ಬಿಡುಗಡೆ ಕೂಡ ಆಗಿದೆ. ದೇಶಕ್ಕೆ ಸಾಕಷ್ಟು ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ನೀಡಿದೆ. ಈ ಯೋಜನೆಗಳನ್ನು ಮೋದಿ ಸರ್ಕಾರ ಬಿಟ್ಟಿ ಪ್ರಚಾರ ಮಾಡುತ್ತಿದೆ. ಬಿಜೆಪಿ ಸರ್ಕಾರ ಶೌಚಾಲಯ, ಯೋಗ ಅಂತ ಹೇಳಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಬಿಜೆಪಿ ಅಪ್ರಚಾರ ಮಾಡಿಕೊಂಡು, ಚುನಾವಣೆ ಎದುರಿಸುತ್ತಿದೆ. ” ಕೈ “ಕಾರ್ಯಕರ್ತರು ತಳಮಟ್ಟದಿಂದ ಪ್ರಚಾರ ಮಾಡಬೇಕಿದೆ. ಹಳ್ಳಿ-ಹಳ್ಳಿಗೂ ತೆರಳಿ ರಾಜೀವ್ ಗಾಂಧಿ ಪಂಚಾಯತ್ ರಾಜ್ ಯೋಜನೆಗಳನ್ನು ಜನರಿಗೆ ತಿಳಿಸಬೇಕಿದೆ. ಮೋದಿ ಮಹಾರಾಜರು ಏಳು ವರ್ಷಗಳಲ್ಲಿ ಏನು ? ಮಾಡಿದ್ದಾರೆ . ತವರೂ ರಾಜ್ಯ ಗುಜರಾತ್ ದಲ್ಲಿ ಕಂಡಲೆಲ್ಲ ಕಸದ ರಾಶಿ ಬಿದ್ದಿದೆ. ಇನ್ನೂ ದೇಶವನ್ನು ಹೇಗೆ ಸ್ವಚ್ಚ ಮಾಡುತ್ತಾರೆ. ಸ್ವಚ್ಚತೆಯಲ್ಲಿ ಕರ್ನಾಟಕ ” ನಂ 1 ” ಇದೆ. ಇದನ್ನು ಬಿಜೆಪಿಯವರು ಆತ್ಮಾಲೋಕನ ಮಾಡಿಕೊಳ್ಳಬೇಕು. ಇತಿಹಾಸ ಗೊತ್ತಿರುವವರು ಮಾತ್ರ ಇತಿಹಾಸ ನಿರ್ಮಾಣ ಮಾಡುತ್ತಾರೆೆಂದು ಡಾ. ಅಂಬೇಡ್ಕರ್ ವರು ಹೇಳಿದ್ದಾರೆ. ಅವರ ಮಾರ್ಗದಲ್ಲಿ ನಾವು ಸಾಗೋಣ ಎಂದರು.
ಗ್ರಾಮ ಪಂಚಾಯತಗಳಿಗೆ ಸಾಕಷ್ಟು ಅನುದಾನ ಬಿಡುಗಡೆ ಆಗುತ್ತದೆ. ಕಾಂಗ್ರೆಸ್ ಕಾರ್ಯಕರ್ತರು ಆ ಅನುದಾನವನ್ನು ಗ್ರಾಮೀಣ ಜತೆಗೆ ತಲುಪಿಸುವ ಪ್ರಯತ್ನ ಮಾಡಬೇಕು. ಯಾವ ಇಲಾಖೆಯಲ್ಲಿ ಏನೆನು ಕೆಲಸಗಳು ಆಗುತ್ತವೆ ಎಂದು ಮೊದಲು ಕಾಂಗ್ರೆಸ್ ಕಾರ್ಯಕರ್ತರು ಅರಿತು ಕೊಳ್ಳಲಿ. ನಿಮಗೆ ಸಾಮಾನ್ಯ ಜ್ಞಾನದ ಕೊರತೆ ಇದೆ, ಅದನ್ನು ವೃದ್ಧಿಸುವ ಪ್ರಯತ್ನ ಮಾಡಿಕೊಳ್ಳಬೇಕು. ಕಾನೂನು ತಿಳಿದುಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದರು.
ಬಿಜೆಪಿಗೆ ತಲೆ ಕೆಟ್ಟಿದೆ ಮನಬಂದತೆ ಆಡಳಿತ ನಡೆಸಿ, ಪಾಲಿಕೆ ಚುನಾವಣೆಯನ್ನು ರಾಷ್ಟ್ರಮಟ್ಟದಲ್ಲಿ ಬಿಂಬಿಸುತ್ತಿದೆ. ಈಗಾಗಲೇ ಚುನಾವಣೆ ಮುಗಿದ ವಿಷಯ, ಕಾಂಗ್ರೆಸ್ ನವರು 12 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ. ನಮ್ಮ ಲೆಕ್ಕಾಚಾರ ಸರಿಯಾಗಿದೆ. ಅದನ್ನು ಬಿಜೆಪಿಯವರು ಬೊಬ್ಬೆ ಹೊಡೆಯುತ್ತಿದ್ದಾರೆ ಎಂದು ಗುಡುಗಿದರು.
ಬೇರು ಗಟ್ಟಿ ಮಾಡಿಕೊಳ್ಳೋಣ: ಗ್ರಾಮೀಣ ಮಟ್ಟದಲ್ಲಿ ಬಡ ಹೆಣ್ಣು ಮಕ್ಕಳಿಗೆ ಸ್ವ-ಸಹಾಯ ಸಂಘಗಳನ್ನು ಕಟ್ಟಿಕೊಳ್ಳಲು ಸಹಕಾರ ಮಾಡಿ, ನಿತ್ಯವೂ ಅವರ ಸಮಸ್ಯೆ ಆಲಿಸಿ ಬೆಳೆಸೋಣ. ಹಳ್ಳಿಗಳಲ್ಲಿರುವ ಸಮಸ್ಯೆ ಅರಿತುಕೊಂಡು, ಫಲಾನುಭಗಳಿಗೆ ಬೇಕಾದ ಪರಿಹಾರ ತಲುಪಿಸುವ ಪ್ರಯತ್ನ ಮಾಡೋಣ ಎಂದರು.
ಈ ಸಂಧರ್ಭದಲ್ಲಿ ಆರ್ ಜಿ.ಪಿ.ರ್, ಎಸ್ ರಾಜ್ಯ ಸಂಚಾಲಕರಾದ ವಿಜಯಸಿಂಗ್, ಬಿನಿತಾ ಓರಾ, ಬಿ .ಎಮ್ . ಸಂದೀಪ್, ಮಾಜಿ ಶಾಸಕರಾದ ಡಿ. ಆರ್. ಪಾಟೀಲ್, ಘೋರ್ಪಡೆ , ಜಿಲ್ಲಾ ಅಧ್ಯಕ್ಷ ವಿನಯ ನಾವಲಗಟ್ಟಿ , ಲಕ್ಷ್ಮಣರಾವ್ ಚಿಂಗಳೆ, ರಾಜೀವ್ ಶೇಟ್ , ವೀರಕುಮಾರ್ ಪಾಟೀಲ್ , ಮಹಾವೀರ ಮೋಹಿತೆ, ಪ್ರದೀಪ ಎಂ ಜೆ., ಉಮೇಶ ಬಾಳಿ , ಸುನೀಲ್ ಹನಮ್ಮನ್ನವರ, ಕಾಂಗ್ರೆಸ್ ಜಿ.ಪಂ, ತಾ. ಪಂ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಇತರರು ಇದ್ದರು.