ಬೆಳಗಾವಿ: ಇಲ್ಲಿನ ಉದ್ಯಮಬಾಗ್ ನಲ್ಲಿರುವ ಕೈಗಾರಿಕಾ ತರಬೇತಿ ಸಂಸ್ಥೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಇಂದು ಭೇಟಿ ನೀಡಿ, ಕಾಲೇಜಿನಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸಿದರು.
ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ತರಬೇತಿಯ ಬಗ್ಗೆ ಸತೀಶ ಮಾಹಿತಿ ಪಡೆದರು. ಯಂತ್ರೋಪಕರಣಗಳ ಆಪರೇಟಿಂಗ್ ಕುರಿತು ಸಹ ಪರಿಶೀಲಿಸಿದರು.
ಮ್ಯಾನುಪ್ಯಾಕ್ಚರಿಂಗ್ ಟೆಕ್ನಾಲಜಿ, ಕನ್ಸ್ಟ್ರಕ್ಷನ್ ಟೆಕ್ನಾಲಜಿ, ಇಂಡಸ್ಟ್ರಿಯಲ್ ಆಟೊಮೇಶನ್, ಆಟೊಮೇಟಿವ್ ಟೆಕ್ನಾಲಜಿ, ಎನರ್ಜಿ ಮ್ಯಾನೇಜ್ ಮೆಂಟ್, ವೆಲ್ಡಿಂಗ್ ಟೆಕ್ನಾಲಜಿ ಹಾಗೂ ಇನ್ಫಾರ್ಮೇಶನ್ ಟೆಕ್ನಾಲಜಿ ಕುರಿತು ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿಯಿಂದ ಸತೀಶ ಅವರು ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ವೀರಕುಮಾರ ಪಾಟೀಲ, ಕಾಂಗ್ರೆಸ್ ಯುವ ನಾಯಕ ರಾಹುಲ್ ಜಾರಕಿಹೊಳಿ ಸೇರಿ ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ ಇದ್ದರು.