ಗೋಕಾಕ : ಲೋಳಸೂರು ಗ್ರಾಮದಲ್ಲಿ ನೂತನವಾಗಿ ಆರಂಭಗೊಂಡ ಕಲ್ಯಾಣಾ ಟೈಕ್ಸ್ ಟೈಲ್ಸ್ ಬಟ್ಟೆಗಳ ಮಾರಾಟ ಮಳಿಗೆಗೆ ಜನರು ಒಮ್ಮೆ ಭೇಟಿ ನೀಡಿ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಜಾರಕಿಹೊಳಿ ಹೇಳಿದರು.
ತಾಲ್ಲೂಕಿನ ಲೋಳಸೂರು ಗ್ರಾಮದಲ್ಲಿ ನೂತನವಾಗಿ ಆರಂಭಗೊಂಡ ಕಲ್ಯಾಣಾ ಟೆಕ್ಸ್ ಟೈಲ್ಸ್ ಬಟ್ಟೆ ಮಾರಾಟ ಮಳಿಗೆಗೆ ಸೋಮವಾರ ಭೇಟಿ ನೀಡಿ, ವೀಕ್ಷಿಸಿದರು. ಬಳಿಕ ಕಲ್ಯಾಣ ಟೆಕ್ಸ್ ಟೈಲ್ಸ್ ಮಳಿಗೆ ವತಿಯಿಂದ ಪ್ರಿಯಾಂಕಾ ಜಾರಕಿಹೊಳಿ ಹಾಗೂ ಸರ್ವೋತ್ತಮ ಜಾರಕಿಹೊಳಿ ಅವರಿಗೆ ಸನ್ಮಾನಿಸಿ, ಗೌರವಿಸಿದರು.
ನೂತನವಾಗಿ ಆರಂಭಗೊಂಡ ಕಲ್ಯಾಣಾ ಟೈಕ್ಸ್ ಟೈಲ್ಸ್ ಬಟ್ಟೆ ಅಂಗಡಿಯಿಂದ ಈ ಭಾಗದ ಜನರಿಗೆ ಅನುಕೂಲವಾಗಲಿದೆ. ಕಡಿಮೆ ದರದಲ್ಲಿ ಉತ್ತಮ ಬಟ್ಟೆಗಳು ದೊರೆಯಲಿವೆ. ಜನರು ಸಹ ಒಮ್ಮೆ ಭವ್ಯ ಬಟ್ಟೆ ಮಾರಾಟ ಮಳಿಗೆಗೆ ಭೇಟಿ ನೀಡಿ ಎಂದು ಪ್ರಿಯಾಂಕಾ ಸಲಹೆ ನೀಡಿದರು.
ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಪಾಂಡು ಮನ್ನಿಕೇರಿ, ಪಾಂಡು ರಂಗಸುಬೆ, ಮಾಹಾಂತೇಶ್ ಪಾಟೀಲ, ರಾಜು ವೈರವಗೋಳ ಸೇರಿದಂತೆ ಗಣ್ಯರು ಮಳಿಗೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
CKNEWSKANNADA / BRASTACHARDARSHAN CK NEWS KANNADA