ಗೋಕಾಕ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ತಾಲೂಕಿನ ಬೆಣಚಿನಮರಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಇಂದು ಭೇಟಿ ನೀಡಿದರು.
ಶಾಲೆಯಲ್ಲಿ ನೂತನವಾಗಿ ಮುಖ್ಯಧ್ವಾರ ಹಾಗೂ ಧ್ವಜ ಸ್ತಂಭಗಳನ್ನು ನಿರ್ಮಿಸಲಾಗಿದ್ದು, ಆ.15 ರಂದು ಇವುಗಳ ಉದ್ಘಾಟನೆ ಮಾಡಲಾಗುತ್ತಿದೆ. ಇವುಗಳನ್ನು ವೀಕ್ಷಿಸಿದ ಸತೀಶ ಅವರು, ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಶಂಕರ ಗಿಡ್ಡಣವರ, ಯಲ್ಲಪ್ಪ ಬೀರನಗಡ್ಡಿ, ಯಮನಪ್ಪ ಮಾಳಗಿ, ಶಿವಪ್ಪ ಮಾಗಿ, ಅಸ್ಪಾಕ್ ಮುಜಾವರ್, ಭಗವಂತ ಹುಳ್ಳಿ, ಚನ್ನಬಸು ರುದ್ರಾಪುರ, ಈರಣ್ಣ ಗಿಡ್ಡಣವರ್ ಇದ್ದರು.