ಗೋಕಾಕ: ಮಾನವ ಬಂಧುತ್ವ ವೇದಿಕೆ ತಾಲೂಕು ಘಟಕದ ಸದಸ್ಯರು ಕಾಂಗ್ರೆಸ್ ಯುವ ನಾಯಕ ರಾಹುಲ್ ಜಾರಕಿಹೊಳಿ ಅವರ ನೇತೃತ್ವದಲ್ಲಿ ಕಲ್ಲ ನಾಗದೇವರಿಗೆ ಹಾಲು ಎರೆಯದೆ, ಮಕ್ಕಳಿಗೆ ಹಾಲು ನೀಡುವ ಮೂಲಕ ನಾಗರ ಪಂಚಮಿಯ ಬದಲು ಬಸವ ಪಂಚಮಿಯನ್ನು ವಿಶಿಷ್ಟವಾಗಿ ಆಚರಿಸಿದರು.
ಮಾನವ ಬಂಧುತ್ವ ವೇದಿಕೆ ತಾಲೂಕು ಘಟಕದ ವತಿಯಿಂದ ನಗರದ ಶಿವ ಫೌಂಡೇಶನ್ ಅನಾಥಾಶ್ರಮದ ಮಕ್ಕಳಿಗೆ ಕಾಂಗ್ರೆಸ್ ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಇಂದು ಹಾಲು ವಿತರಣೆ ಮಾಡಿದರು.
ಕಲ್ಲ ನಾಗದೇವರಿಗೆ ಹಾಲು ಎರೆಯುವುದಕ್ಕಿಂತ ಬಡ ಮಕ್ಕಳಿಗೆ ನೀಡಬೇಕು. ಅದೆಷ್ಟೋ ಜನ ಆಹಾರವಿಲ್ಲದೆ, ಉಪವಾಸ ಇರುತ್ತಾರೆ. ಅಂತಹವರಿಗೆ ಹಾಲು, ಹಣ್ಣು, ಊಟ ನೀಡಿ ಹಬ್ಬ ಆಚರಣೆ ಮಾಡಬೇಕು. ಕುಡಿಯುವ ಹಾಲನ್ನು ಕಲ್ಲ ನಾಗಕ್ಕೆ ಹಾಕಿ ಹಾಳು ಮಾಡಬೇಡಿ ಎಂದು ರಾಹುಲ್ ಜಾರಕಿಹೊಳಿ ಹೇಳಿದರು.
ಈ ಸಂದರ್ಭದಲ್ಲಿ ಮಾನವ ಬಂಧುತ್ವ ವೇದಿಕೆಯ ತಾಲೂಕು ಘಟಕದ ಅಧ್ಯಕ್ಷ ರಮೇಶ ಕೋಲಕಾರ, ಶಿವ ಫೌಂಡೇಶನ್ ಮುಖ್ಯಸ್ಥ ರಮೇಶ ಪೂಜೇರಿ, ಮುಖಂಡರಾದ ಬಿ.ಶಾನೂರ, ಪಾಂಡು ಮನ್ನಿಕೇರಿ, ಜುಬೇರ್ ಮಿರ್ಜಾಬಾಯಿ, ಸುನೀಲ ಮೇತ್ರಿ, ಎ.ಬಿ. ಖಾಜಿ,ಜುಬೇರ ಸೇರಿ ವೇದಿಕೆಯ ಸದಸ್ಯರು ಹಾಗೂ ಇನ್ನಿತರರು ಇದ್ದರು.

CKNEWSKANNADA / BRASTACHARDARSHAN CK NEWS KANNADA