ಮೂಡಲಗಿ: ಕಾಂಗ್ರೆಸ್ ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ತಾಲೂಕಿನ ರಾಜಾಪುರದಲ್ಲಿ ಇಂದು ಏರ್ಪಡಿಸಿದ್ದ ಟಗರಿನ ಕಾಳಗ ಪಂದ್ಯಾವಳಿಗೆ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಟಗರಿನ ಕಾಳಗ ಪರಂಪರಾಗತವಾಗಿ ಸಾಗಿ ಬಂದಿರುವ ಕ್ರೀಡೆಯಾಗಿದೆ. ಇದನ್ನು ಬೆಳೆಸಿಕೊಂಡು ಹೋಗುವ ಜವಾಬ್ದಾರಿ ಯುವಕರ ಮೇಲಿದೆ ಎಂದು ಹೇಳಿದರು.
ಕ್ರೀಡಾಪಟುಗಳು ಸಾಧನೆ ಮಾಡುವತ್ತಾ ಗಮನಹರಿಸಬೇಕು. ಗ್ರಾಮೀಣ ಕ್ರೀಡೆಗಳಿಗೆ ಹೆಚ್ಚು ಒತ್ತು ಕೊಡಬೇಕು. ಸತತ ಪ್ರಯತ್ನದಿಂದ ಸಾಧನೆಯತ್ತ ಮುನ್ನುಗ್ಗಬೇಕು ಎಂದರು.
ತಂದೆ ಸತೀಶ ಜಾರಕಿಹೊಳಿ ಅವರು ಕಳೆದ 20ಕ್ಕೂ ಹೆಚ್ಚು ವರ್ಷಗಳಿಂದ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುತ್ತಲೇ ಬಂದಿದ್ದಾರೆ. ಅನೇಕ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಿ, ಕ್ರೀಡಾಪಟುಗಳ ಬೆನ್ನು ತಟ್ಟುತ್ತಿದ್ದಾರೆ. ಕ್ರೀಡೆಗಳನ್ನು ಪ್ರೋತ್ಸಾಹಿಸಲು ನಮ್ಮ ಬೆಂಬಲ ಸದಾ ಇರುತ್ತದೆ ಎಂದು ಹೇಳಿದರು.
ಜಾತ್ರೆಯಲ್ಲಿ ಭಾಗಿ:
ಬಿಸನಕೊಪ್ಪ ಗ್ರಾಮದ ದ್ಯಾಮವ್ವದೇವಿ ಜಾತ್ರೆ ಅಂಗವಾಗಿ ರಾಹುಲ್ ಜಾರಕಿಹೊಳಿ ಅವರು ದೇವಸ್ಥಾನಕ್ಕೆ ಭೇಟಿ ನೀಡಿ, ದೇವಿಯ ಅಶೀರ್ವಾದ ಪಡೆದರು. ಜಾತ್ರೆ ಅಂಗವಾಗಿ ಏರ್ಪಡಿಸಿದ್ದ ಭಾರ ಎತ್ತುವ ಸ್ಪರ್ಧೆಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಪಾಂಡು ಮನ್ನಿಕೇರಿ, ವಿಠ್ಠಲ ಪಾಟೀಲ, ಮುರುಳಿ ಬಡಿಗೇರ, ರಾಮು ಪಾಟೀಲ, ಮಂಜು ಸಣ್ಣಕ್ಕಿ, ನ್ಯಾಮದೇವ ಕಮತಿ ಸೇರಿ ಗ್ರಾಮಸ್ಥರು ಇದ್ದರು.