ಹುಕ್ಕೇರಿ : ತಾಲ್ಲೂಕಿನ ಕೊಚ್ಚರಿ ಗ್ರಾಮದಲ್ಲಿ ನೂತನವಾಗಿ ಸ್ಥಾಪಿತವಾಗಿರುವ ರಾಹುಲ್ ಜಾರಕಿಹೊಳಿ ಬಳಗವನ್ನು ಕಾಂಗ್ರೆಸ್ ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು, ಶನಿವಾರ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಸಂಘದ ಮೂಲಕ ಗ್ರಾಮ ಹಾಗೂ ಸುತ್ತಮುತ್ತಲ್ಲಿನ ಗ್ರಾಮಗಳ ಜನರಿಗೆ ಅಗತ್ಯ ನೆರವು ನೀಡುವುದರ ಜೊತೆಗೆ ಸಮಸ್ಯೆಗಳಿಗೆ ಸ್ಪಂಧಿಸಬೇಕು. ಬಡವರ ಧ್ವನಿಯಾಗಿ ಕೆಲಸ ಮಾಡಬೇಕಿದೆ ಎಂದು ಸಲಹೆ ನೀಡಿದರು.
ಸಂಘದಿಂದ ಪ್ರತಿ ವರ್ಷ ಕ್ರೀಡಾಕೂಟ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಗ್ರಾಮೀಣ ಪ್ರತಿಭೆಗಳನ್ನು ಪ್ರೋತ್ಸಾಹಿಸಬೇಕು. ನಮ್ಮಿಂದ ನಿಮಗೆ ಎಲ್ಲ ರೀತಿಯ ಸಹಕಾರ ಇರಲಿದೆ ಎಂದು ತಿಳಿಸಿದರು.
ತದನಂತರ ಅಧ್ಯಕ್ಷ ರಾಜುಗೌಡ ಪಾಟೀಲ ಮಾತನಾಡಿ, ರಾಹುಲ್ ಜಾರಕಿಹೊಳಿ ಅವರು ನಿರಂತರ ಸಾಮಾಜಿಕ ಕಾರ್ಯಗಳಿಂದ ಯುವಕರ ಮನದಲ್ಲಿ ಮನೆ ಮಾಡಿದ್ದಾರೆ. ಅಭಿಮಾನಿ ಬಳಗ ಸ್ಥಾಪಿತವಾಗಿರುವುದು ಕಾಂಗ್ರೆಸ್ ಯುವ ನಾಯಕ ರಾಹುಲ್ ಜಾರಕಿಹೊಳಿ ಕಾರ್ಯದ ಪ್ರತಿಫಲವಾಗಿದೆ ಎಂದರು. ಇದಕ್ಕೂ ಮೊದಲು ಗ್ರಾಮಸ್ಥರು ರಾಹುಲ್ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಿದರು.
ಉಪಾಧ್ಯಕ್ಷ ರೇವಣ್ಣ ಮಾಲಾಂಗಿ, ಸಂಘದ ಸದಸ್ಯರಾದ ಬಸಗೌಡ ಪಾಟೀಲ, ಶಿವಗೌಡ ಪಾಟೀಲ್ , ಪಾಪುಗೌಡ ಪಾಟೀಲ್ , ಇಲಿಯಾಸ್ ಇನಾಮದಾರ, ಮಹಾಂತೇಶ್ ಮಗದುಮ್ಮ, ಪ್ರಕಾಶ ಬಸಪುರೆ , ಸುರೇಶ ಹುದ್ದರ, ಕುಶಲ ಕೋತ , ದೇವರಾಜ ಚೌಗಲಾ, ರಾಜು ಮಠಪತಿ, ಮಹಾದೇವ ನಾಯಿಕ, ಅಮೃತ್ ನಾಯಿಕ , ಅನಿಲ್ ದೆಸಾಯಿ , ಸಂಜು ದೇಸಾಯಿ, ಕೇತನ್ ಬುಗಡಿ , ವಿನೋದ ಚೌಗಲಾ, ಯಾಶಿನ್ ಅತ್ತಾರ್, ಬಾಳಗೌಡ ಪಾಟೀಲ ಸೇರಿದಂತೆ ಇತರರು ಇದ್ದರು