ಗೋಕಾಕ : ನೇಪಾಳ ದೇಶದಲ್ಲಿ ದಿ.10/08/2020 ರಂದು ನಡೆಯಲಿರುವ 19 ವರ್ಷ ಒಳಗಿನ ಇಂಡೋ-ನೇಪಾಳ ಅಂತರಾಷ್ಟ್ರೀಯ ಕಬ್ಬಡ್ಡಿ ಪಂದ್ಯಾವಳಿಯಲ್ಲಿ ಭಾರತ ದೇಶವನ್ನು ಪ್ರತಿನಿಧಿಸಲು ಹೊರಟಿರುವ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಮೆಳವಂಕಿ ಗ್ರಾಮದ ಸಿದ್ದಪ್ಪಾ ರಾ ಹಂಜಿ, ಹಾಗೂ ತಪಸಿ ಗ್ರಾಮದ ಮಲ್ಲಪ್ಪಾ ನಾ ನಾಯಕ ಈ ವಿದ್ಯಾರ್ಥಿಗಳಿಗೆ ಕಾಂಗ್ರೆಸ್ ಯುವ ನಾಯಕಿ ಪ್ರೀಯಾಂಕಾ ಜಾರಕಿಹೊಳಿ ಅವರು ಪ್ರವೇಶ ಶುಲ್ಕ ಹಾಗು ಪ್ರಯಾಣ ಖರ್ಚುನ್ನು ನೀಡಿ ಸಹಾಯ ಮಾಡಿದರು.
ಇಲ್ಲಿನ ಹಿಲ್ ಗಾರ್ಡನ್ ಕಚೇರಿಯಲ್ಲಿ ಮಂಗಳವಾರ ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಅವರ ಸೂಚನೆಯಂತೆ ಪ್ರಿಯಾಂಕಾ ಜಾರಕಿಹೊಳಿ ಅವರು ಪ್ರೋತ್ಸಾಹ ನೀಡಿ, ಶುಭ ಹಾರೈಸಿದರು.
ನಂತರ ಮಾತನಾಡಿ ಯುವ ಜನಾಂಗ ಕ್ರೀಡೆಗೆ ಹೆಚ್ಚಿನ ಮಹತ್ವ ನೀಡಿ ಸಾಧಕರಾಗಿ ದೇಶದ ಕೀರ್ತಿಯನ್ನು ಹೆಚ್ಚಿಸುವಂತೆ ಯುವ ನಾಯಕಿ ಪ್ರೀಯಾಂಕಾ ಸತೀಶ್ ಜಾರಕಿಹೊಳಿ ಅವರು ಹೇಳಿದರು.
ಈ ಸಂದರ್ಭದಲ್ಲಿ ಪಾಂಡು ರಂಗಸುಬೆ,ಸುರೇಶ್ ರಾಯಪ್ಪ ಹಂಜಿ, ಮಹಾದೇವಪ್ಪಾ ಪತ್ತಕಿ ಹಾಗೂ ಮೆಳವಂಕಿ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.
CKNEWSKANNADA / BRASTACHARDARSHAN CK NEWS KANNADA