ಬೆಳಗಾವಿ: ಕಾಂಗ್ರೆಸ್ ಯುವ ನಾಯಕಿ ಪ್ರಿಯಾಂಕಾ ಜಾರಕಿಹೊಳಿ ಅವರು ಯಮಕನಮರಡಿ ಮತಕ್ಷೇತ್ರದ ದಡ್ಡಿ ಜಿಪಂ ವ್ಯಾಪ್ತಿಯ ದಡ್ಡಿ, ಮೋದಗಾ, ಶೆಟ್ಟಿಹಳ್ಳಿ, ಧೋಂಡಗಟ್ಟಿ, ಕೋಟ ಹಾಗೂ ಸಲಾಮವಾಡಿ ಗ್ರಾಮಗಳಿಗೆ ತೆರಳಿ ಮಳೆ ಹಾಗೂ ಪ್ರವಾಹದಿಂದ ಹಾನಿಯನ್ನು ಪರಿಶೀಲಿಸಿದರು.
ಈ ಗ್ರಾಮಗಳಲ್ಲಿ ಮಳೆಯಿಂದಾಗಿ ಹಾನಿಗೀಡಾದ ಮನೆಗಳನ್ನು ಪರಿಶೀಲನೆ ಮಾಡಿ, ಸಂತ್ರಸ್ತರಿಗೆ ಸಾಂತ್ವನ ಹೇಳಿದರು. ಹೊಲ-ಗದ್ದೆಗಳಿಗೆ ನೀರು ನುಗ್ಗಿ ಬೆಳೆ ಹಾನಿಯಾಗಿರುವುದನ್ನು ವೀಕ್ಷಿಸಿ, ರೈತರಿಗೆ ಧೈರ್ಯ ತುಂಬಿದರು. ಹದಗೆಟ್ಟಿರುವ ರಸ್ತೆ ಹಾಗೂ ಸೇತುವೆಗಳನ್ನು ಪರಿಶೀಲನೆ ಮಾಡಿದರು.
ಸಂತ್ರಸ್ತ ವಯೋವೃದ್ಧೆಗೆ ಸಾಂತ್ವನ:
ಸಲಾಮವಾಡಿ ಗ್ರಾಮದಲ್ಲಿ ಅವ್ವಕ್ಕಾ ಪಾಟೀಲ ಎಂಬ ಅಜ್ಜಿಯೊಬ್ಬರ ಮನೆಗೆ ಮಳೆ ನೀರು ನುಗ್ಗಿ, ಸಮಸ್ಯೆಯಾಗಿದ್ದು, ಈ ಬಗ್ಗೆ ಅಜ್ಜಿ ಪ್ರಿಯಾಂಕಾ ಜಾರಕಿಹೊಳಿ ಅವರ ಮುಂದೆ ಕಣ್ಣೀರಿಟ್ಟು ಅಳಲು ತೋಡಿಕೊಂಡರು. ಈ ಸಂದರ್ಭದಲ್ಲಿ ಪ್ರಿಯಾಂಕಾ ಅವರು ಅಜ್ಜಿಗೆ ಸಾಂತ್ವನ ಹೇಳಿ, ಧೈರ್ಯ ತುಂಬಿದರು.
ಮುಖಂಡರಾದ ಕಿರಣ ರಜಪೂತ, ದಯಾನಂದ ಪಾಟೀಲ, ಪ್ರಮೋದ, ರಕ್ಷಶೆಟ್ಟಿ, ತಾನಾಜಿ ಸುಂದಕರ್, ಸುರೇಶ ಪಾಟೀಲ, ಎಂ.ಎ. ಪಾಟೀಲ, ಪ್ರಕಾಶ ಬಸಾಪುರಿ ಸೇರಿ ಇನ್ನಿತರರು ಇದ್ದರು.