ಹುಕ್ಕೇರಿ: ಮೊದಗಾ ಗ್ರಾಮದ ಯುವಕರಿಗೆ ಸೈನಿಕ ತರಬೇತಿ ನೀಡಲು, ಗ್ರಂಥಾಲಯ ನಿರ್ಮಾಣಕ್ಕೆ ಸರ್ಕಾರಿಯ 20 ಗುಂಟೆ ಜಾಗ ನೀಡಬೇಕೆಂದು ಆಜಿ-ಮಾಜಿ ಸೈನಿಕ ಕಲ್ಯಾಣ ಸಂಘ ಪದಾಧಿಕಾರಿಗಳು ಶಾಸಕ ಸತೀಶ್ ಜಾರಕಿಹೊಳಿ ಅವರಿಗೆ ಇಂದು ಮನವಿ ಸಲ್ಲಿಸಿದರು.
ಮೊದಗಾ ಗ್ರಾಮದಲ್ಲಿ ಅನೇಕ ನಿವೃತ್ತ ಸೈನಿಕರು ಇದ್ದಾರೆ. 58ಕ್ಕೂ ಹೆಚ್ಚು ಜನರು ದೇಶ ಸೇವೆಗಾಗಿ ಬೇರೆ ಬೇರೆ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದಾರೆ. ಗ್ರಾಮದ ಅನೇಕ ಯುಕವರು ದೇಶ ಸೇವೆ ಮಾಡಲು ಉತ್ಸೂಕರಾಗಿದ್ದಾರೆ. ಆದ ಕಾರಣ ಯುವಕರಿಗೆ ಸೈನಿಕ ಭರ್ತಿ ಪೂರ್ವದ ತರಬೇತಿ ನೀಡಬೇಕಾದ ಅವಶ್ಯಕತೆ ಇದೆ.
ಜತೆಗೆ ಚಿಕ್ಕ ಮಕ್ಕಳಿಗೆ ಪಾರ್ಕ್, ಗ್ರಂಥಾಲಯ ತೆರೆಯಲು ಜಾಗದ ಅವಶ್ಯಕತೆ ಇದೆ. ಆದ್ದರಿಂದ ಇಲ್ಲಿನ ಸರ್ವೆ ನಂ.197ದಲ್ಲಿ 81 ಎಕರೆ ಗಾವಠಾಣ ಜಮೀನಿನಲ್ಲಿ 20 ಗುಂಟೆ ಜಾಗ ನೀಡಬೇಕೆಂದು ಮಾಜಿ ಸೈನಿಕರು ಮನವಿಯಲ್ಲಿ ವಿನಂತಿಸಿಕೊಂಡರು.
ಈ ಸಂದರ್ಭದಲ್ಲಿ ಲಕ್ಷ್ಮಣ ಆರ್.ಎನ್, ಅರ್ಜುನ ಗರಡಿ, ಅಶೋಕ ಪಾಟೀಲ, ಎಸ್. ಎಸ್.ಪಾಟೀಲ, ಸುಭಾಷ್ ಪಾಟೀಲ್, ಬಾಗೋಜಿ ಪಾಟೀಲ, ಯಶವಂತ ಎಂ.ಬಿ. ಸೇರಿದಂತೆ ಇತರರು ಇದ್ದರು.